Vijaya Bharathi

Abstract Classics Others

3  

Vijaya Bharathi

Abstract Classics Others

ಒಂದು ಮತ್ತೊಂದು

ಒಂದು ಮತ್ತೊಂದು

1 min
225


ಮದುವೆಯಾಗಿ ಮೂರುವರ್ಷ ಗಳು ಕಳೆದು ಹೋದರೂ ಒಡಲು ತುಂಬದಿದ್ದಾಗ, ಆಶಾ ಮತ್ತು ಅನೀಶ್ ಗೆ ಯೋಚನೆಯಾಗತೊಡಗಿತು. ಮನೆಯವರು ನೆರೆಯವರು ಬಂಧು ಮಿತ್ರರು ಎಲ್ಲರಿಂದಲೂ ಒಂದೇ ಪ್ರಶ್ನೆ .

"ಏನೂ ವಿಶೇಷವಿಲ್ಲವೆ? ಸಂಸಾರ ಬೆಳೆಸುವ ಆಸೆಯಿಲ್ಲವೆ? ವಯಸ್ಸಾಗುತ್ತಿರುವ ನಾವು ಮೊಮ್ಮಕ್ಕಳನ್ನು ಎತ್ತಿ ಆಡಿಸುವುದು ಯಾವಾಗ ?"

ಹೀಗೆ ಮಗುವಿನ ಬಗ್ಗೆಯೇ ಎಲ್ಲರೂ ಕೇಳುತ್ತಿದ್ದರೆ, ಅವರಿಬ್ಬರಿಗೂ ತುಂಬಾ ಮುಜುಗರ ವಾಗುತ್ತಿತ್ತು.

ಕಡೆಗೂ ಮದುವೆಯಾದ ಐದು ವರ್ಷಗಳ ನಂತರ

ಆಶಾ ಮತ್ತು ಅನೀಶ್ ಜೀವನದಲ್ಲಿ ಮುದ್ದಾದ ಹೆಣ್ಣು ಮಗು ಅರಳಿದಾಗ, ಎಲ್ಲರಿಗೂ ಸಂತೋಷವಾಯಿತು.

ಅಂತೂ ಇಂತೂ ಅವರಿಬ್ಬರ ಸಂಸಾರ ಬೆಳೆಯಿತು.

ಅಪರೂಪದ ಮಗುವನ್ನು ನೆಲ ಸೋಕಿಸದಂತೆ

ಕಣ್ಣಲ್ಲಿ ಕಣ್ಣಿಟ್ಟು ಬೆಳೆಸುತ್ತಿದ್ದರು. ಮನೆಯವರೆಲ್ಲರ ಕಣ್ಮಣಿಯಾಯಿತು. ಮಗುವಿಗೆ ಅಪೂರ್ವ ಎಂದು ನಾಮಕರಣ ಮಾಡಿದರು.ಹುಣ್ಣಿಮೆಯ ಚಂದ್ರನಂತೆ ಅಪೂರ್ವ ಬೆಳೆಯುತ್ತಾ ಬಂದಳು. ಮೊದಲನೇ ಮಗುವಿಗೆ ನಾಲ್ಕು ವರ್ಷಗಳಾದ ನಂತರ ಆಶಾ ಮತ್ತು ಅನೀಶ್ ಗೆ ತಮ್ಮ ಮಗಳಿಗೆ ಒಂದು ಜೊತೆ ಬೇಕೆಂದು ಆಸೆಯಾಗಿ, ಮತ್ತೊಂದು ಮಗುವಿಗೆ ಪ್ಲಾನ್ ಮಾಡಿದರು. ಆರತಿಗೊಬ್ಬಳು ಮಗಳಾಯಿತು, ಕೀರ್ತಿ ಗೊಬ್ಬ ಮಗ ಆಗಲಿ ಎಂದು ಅನೀಶ್ ತಂದೆ ತಾಯಿಯರದೂ ಒತ್ತಡ ಜಾಸ್ತಿಯಾಯಿತು.

ಆಶಾಳಿಗೂ ಒಂದರ ಜೊತೆಗೆ ಮತ್ತೊಂದು ಬೇಕೆನಿಸಿ, ಮತ್ತೊಂದು ಮಗುವಿನ ಆಗಮನಕ್ಕೆ ಸಿದ್ಧರಾದರು. ಮತ್ತೊಂದು ಮಗು ಯಾವುದಾದರೂ ಸರಿ, ಒಂದು ಮಗುವಿನ ಜೊತೆಗೆ ಮತ್ತೊಂದು ಇರಲಿ ಎಂದು ನಿರ್ಧರಿಸಿ ತಮ್ಮ ಸಂಸಾರವನ್ನು ಬೆಳೆಸುವತ್ತ ಗಮನ ಹರಿಸಿದರು.

ಆಶಾ ಮತ್ತು ಅನೀಶ್ ರ‌ ಆಸೆಯಂತೆ ಅಪೂರ್ವಳೊಂದಿಗೆ ಆಡಲು ತಂಗಿಯ ಆಗಮನವಾಯಿತು. ಹುಟ್ಟಿದ ಮನೆ ಹಾಗೂ ಮೆಟ್ಟಿದ ಮನೆಗಳನ್ನು ಬೆಳಗುವ ಇಬ್ಬರು ಹೆಣ್ಣು ಮಕ್ಕಳಿಂದ ಅವರ ಸಂಸಾರ ಬೆಳೆದು ಆನಂದ ಸಾಗರ ವಾಯಿತು.



Rate this content
Log in

Similar kannada story from Abstract