Ashritha G

Abstract Classics Others

4.8  

Ashritha G

Abstract Classics Others

ಒಂದೇ ಅಲ್ಲ..ವ್ಯತ್ಯಾಸವಿದೆ ..!

ಒಂದೇ ಅಲ್ಲ..ವ್ಯತ್ಯಾಸವಿದೆ ..!

2 mins
379


         ಪ್ರೀತಿ ಒಂದು ಅದ್ಭುತ ಶಕ್ತಿ.ಸಕಲ ಜೀವ ರಾಶಿಗಳಲ್ಲೂ ಇದು ಅಡಗಿದೆ.ಸಮಯಕ್ಕೆ ಅನುಗುಣವಾಗಿ ತೋರ್ಪಡಿಸುತ್ತೇವೆ.ಪ್ರೀತಿ ಏಳಿಗೆಯನ್ನು ಬಯಸುತ್ತದೆ.ಪ್ರೀತಿ ಫಲಾಪೇಕ್ಷೆ ಬಯಸುವುದಿಲ್ಲ.ಪ್ರೀತಿ ಇದ್ದಲ್ಲಿ ಕೋಪ ಮನಸ್ಥಾಪ ಜಗಳ ಎಲ್ಲವೂ ಇರುತ್ತದೆ.ಈ ಪ್ರೀತಿ ಹಾಗು ವ್ಯಾಮೋಹ ಕಾಣುವವರು ಕಣ್ಣಿಗೆ ಒಂದೇ ಎನಿಸಿದರು ಬಹಳಾ ವ್ಯತ್ಯಾಸವಿದೆ.ವ್ಯಾಮೋಹದಿಂದ ಪ್ರೀತಿ ಕುರುಡಾಗಿರುತ್ತದೆ.ಈ ಪ್ರೀತಿ ಮತ್ತು ವ್ಯಾಮೋಹ ಜೊತೆಯಾಗಿಯೇ ಇರುತ್ತದೆ.ಆದರೆ ಮಕ್ಕಳನ್ನು ಬೆಳೆಸುವುದರಲ್ಲಿ ಮಕ್ಕಳ ಶ್ರೇಯಸ್ಸಿಗಾಗಿ ಯಾವುದು ಮೇಲುಗೈ ಸಾಧಿಸುತ್ತದೆ ಎಂಬುದು ಬಹಳಾ ಮುಖ್ಯ.

     

         ಸಾಮಾನ್ಯವಾಗಿ ಮಕ್ಕಳನ್ನು ಬೆಳೆಸುವಾಗ ನಾವು ಪ್ರೀತಿಯಿಂದ ಬೆಳೆಸಿದ್ದೇವೆ ಎನ್ನುತ್ತೇವೆ ಹೊರತು ಯಾರೊಬ್ಬರೂ ವ್ಯಾಮೋಹದಿಂದ ಬೆಳೆಸಿದ್ದೇವೆ ಎನ್ನಲಾರೆವು.ಮಕ್ಕಳ ಮೇಲಿನ ಪ್ರೀತಿ ನೋವು ನೀಡಲಾರದು.ಆದರೆ ವ್ಯಾಮೋಹ ಅತಿಯಾದ ನೋವನ್ನು ನೀಡುತ್ತದೆ.ಮಕ್ಕಳ ಮೇಲಿನ ವ್ಯಾಮೋಹ ತಂದೆ ತಾಯಿಯರನ್ನು ಕುರುಡಾಗಿಸಿರುತ್ತದೆ.ಮಕ್ಕಳಿಗೆ ನೋವಾಗದಂತೆ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಏನನ್ನು ಹೇಳದೆ ತಪ್ಪು ಹೆಜ್ಜೆ ಇಡುವಾಗ ತಡೆಯಲಾಗದೆ ಒದ್ದಾಡುವಂತಾಗಿರುತ್ತದೆ.ಮಕ್ಕಳ ಮೇಲಿನ ವ್ಯಾಮೋಹ ಮಕ್ಕಳನ್ನು ಸರಿ ದಾರಿಯಲ್ಲಿ ಬೆಳೆಸುವುದನ್ನು ತಡೆಯುತ್ತದೆ.ಇದಕ್ಕೆ ಉತ್ತಮ ಉದಾಹರಣೆ ಮಹಾಭಾರತ ದ ದೃಥರಾಷ್ಟ್ರ.ಆತ ತನ್ನ ಮಕ್ಕಳಿಗೆ ನೋವಾಗಬಾರದು ನನ್ನ ಮಕ್ಕಳು ಸೋಲಬಾರದು ಎಂಬ ಕಾರಣಕ್ಕಾಗಿ ಅವರು ಮಾಡಿದ್ದೆಲ್ಲವನ್ನೂ ಸಹಿಸಿಕೊಳ್ಳುತ್ತಾ ಮಕ್ಕಳು ದೂರವಾಗುತ್ತಾರೆ ಎಂಬ ಭಯದಲ್ಲಿ ನೋವನ್ನು ಅನುಭವಿಸುತ್ತಾ ಸಾಯುವವರೆಗೂ ದುಃಖಿಸುತ್ತಾ ಬದುಕಬೇಕಾಯಿತು.ಮಕ್ಕಳ ಮೇಲಿನ ವ್ಯಾಮೋಹದಿಂದ ನೋವು ತಪ್ಪಿದಲ್ಲ ಎಂಬುದಕ್ಕೆ ಕನ್ನಡಿ ಹಿಡಿದಂತೆ ಸ್ಪಷ್ಟ ಪಡಿಸುವಂತಿದೆ ಗಾಂಧಾರಿ ದೃಥರಾಷ್ಟ್ರ ರ ನೋವು.ಹೆತ್ತವರಿಗೆ ತಾವು ಹೆತ್ತ ಹತ್ತು ಮಕ್ಕಳ ಮೇಲೆ ಪ್ರೀತಿ ಇದ್ದರೂ ವ್ಯಾಮೋಹ ಒಬ್ಬನ ಮೇಲೆ ಅಧಿಕವಾಗಿರುತ್ತದೆ.ಹಾಗೆಯೇ ದೃತರಾಷ್ಟ್ರನಿಗೆ ತನ್ನ ನೂರು ಮಕ್ಕಳ ಪೈಕಿ ದುರ್ಯೋಧನನ ಮೇಲಿನ ವಿಪರೀತ ವ್ಯಾಮೋಹ ವಿನಾಶಕ್ಕೆ ನಾಂದಿಯಾಯಿತು.

ಇಂದು ಅದೆಷ್ಟೋ ಜನ ಮಕ್ಕಳ ಹೆಸರಿಗೆ ಆಸ್ತಿ ಬರೆದರೆ ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿ ಮಕ್ಕಳಿಗೆ ಆಸ್ತಿ ಹಂಚಿ ಬೀದಿಗೆ ಬಿದ್ದಿದ್ದಾರೆ.ಮಕ್ಕಳ್ಳನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡದೆ ಅವರಿಗಾಗಿ ಆಸ್ತಿ ಮಾಡಿ ವ್ಯಾಮೋಹದಿಂದ ಹಂಚಿ ನೋವನ್ನು ಅನುಭವಿಸುತ್ತಾರೆ.ಈ ವ್ಯಾಮೋಹ ಮನುಷ್ಯನ ಸಹಜ ಗುಣ.ಸೃಷ್ಠಿಯಲ್ಲಿ ಮಾತನಾಡುವ ಹಾಗು ಯೋಚಿಸುವ ಗುಣ ಇರುವ ಏಕೈಕ ಜೀವಿ ಮಾನವನದ್ದು.ಹಾಗಾಗಿ ಮುಂದಿನ ದಿನಗಳನ್ನು ಯೋಚಿಸುತ್ತಾ ಲೆಕ್ಕಹಾಕುತ್ತಾ ಹಂಚಬೇಕಾದ ಪ್ರೀತಿಯ ಬಗ್ಗೆ ಯೋಚಿಸುತ್ತಾನೆ.ಮನೆಯಲ್ಲಿ ಗಂಡು ಮಕ್ಕಳಿಗೆ ಸಿಕ್ಕುವ ಪ್ರಾಶಸ್ತ್ಯ ಹೆಣ್ಣು ಮಕ್ಕಳಿಗೆ ಸಿಗುವುದಿಲ್ಲ.ಕಾರಣ ಗಂಡು ತಂದೆ ತಾಯಿಯರನ್ನು ನೋಡಿಕೊಳ್ಳುವವ ಎಂಬ ಕುರುಡು ಪ್ರೀತಿಯ ವ್ಯಾಮೋಹದ ಸುಳಿಯಲ್ಲಿ ಸಿಲುಕಿರುತ್ತಾರೆ.ಹಾಗಾಗಿ ಗಂಡು ಮಕ್ಕಳಿಗಾಗಿ ಹಂಬಲಿಸುತ್ತಾರೆ.ನಿಜಾಂಶವೇನೆಂದರೆ ಹೆಂಡತಿಯಾಗಿ ಮನೆಗೆ ಬರುವ ಹುಡುಗಿಯ ಸಹಾಯವಿಲ್ಲದೆ ಗಂಡಿಗೆ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ.ಇದು ತಿಳಿದಿದ್ದರೂ ಗಂಡು ಮಕ್ಕಳ ಮೇಲಿನ ವ್ಯಾಮೋಹ ಕಡಿಮೆಯಾಗಲ್ಲಿಲ್ಲ.


           ಈ ಪ್ರೀತಿ ಮತ್ತು ವ್ಯಾಮೋಹಕ್ಕೆ ಇರುವ ಒಂದು ಚಿಕ್ಕ ಗೆರೆಯ ವ್ಯತ್ಯಾಸವನ್ನು ನಾವು ಪ್ರಕೃತಿಯಲ್ಲಿರುವ ಇತರ ಜೀವಿಗಳಲ್ಲಿ ಕಾಣುತ್ತೇವೆ. ಆದರೆ ಅದರ ಬಗ್ಗೆ ಗಮನಹರಿಸುವುದು ಕಡಿಮೆ.ಪ್ರಾಣಿ ಪಕ್ಷಿಗಳಿಗೆ ತಮ್ಮ ಸಂತಾನದ ಮೇಲೆ ಅಗಾಧವಾದ ಪ್ರೀತಿ ಇರುತ್ತದೆ.ಒಂದು ಹಂತದವರೆಗೆ ಜೋಪಾನ ಮಾಡಿ ನಂತರ ಸ್ವಾತಂತ್ರವಾಗಿ ದೈರ್ಯವಾಗಿ ಬದುಕುವ ಮಾರ್ಗವನ್ನು ತಿಳಿಸಿ ಏನನ್ನೂ ಅಪೇಕ್ಷಿಸದೆ ತಮ್ಮ ಪಾಡಿಗೆ ಬದುಕುತ್ತವೆ.ಉತ್ತಮ ಉದಾಹರಣೆ ಎಂದರೆ ನಿತ್ಯ ನೋಡುವ ಬೆಕ್ಕು ಮತ್ತೆ ನಾಯಿ.ಬೆಕ್ಕು ತನ್ನ ಮರಿಗಳಿಗೆ ಹೇಳಿ ಕೊಡುವ ಪಾಠ ಯಾವ  ಶಿಕ್ಷಕಿಯರಿಗಿಂತಲೂ ಕಡಿಮೆಯಿಲ್ಲ.ಪ್ರೀತಿಯಿಂದ ಜೋಪಾನ ಮಾಡಿ ಏನನ್ನು ಬಯಸದೆ ಬುದ್ಧಿ ಕಲಿಸುತ್ತದೆ.ಇನ್ನು ನಾಯಿಯನ್ನು ಗಮನಿಸಿದಾಗಲು ಇಂತದೇ ಪಾಠ ಕಾಣಬಹುದು.

ಮಕ್ಕಳನ್ನು ಪ್ರೀತಿಯಿಂದ ಬೆಳೆಸುವುದಕ್ಕೂ ವ್ಯಾಮೋಹದಿಂದ ಬೆಳೆಸುವುದಕ್ಕು ಬಹಳಾ ವ್ಯತ್ಯಾಸವಿದೆ.ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕ ಶಿಕ್ಷಕಿಯರು ತಾವು ಪಾಠ ಮಾಡುವ ಮಕ್ಕಳಿಗೆ ಗದರುತ್ತಾರೆ ಹೆದರಿಸುತ್ತಾರೆ ಶಿಕ್ಷಿಸುತ್ತಾರೆ ಎಂದ ಮಾತ್ರಕ್ಕೆ ಪ್ರೀತಿ ಇಲ್ಲ ಎಂದಲ್ಲ.ಅವರಿಗೆ ತಮ್ಮ ವಿದ್ಯಾರ್ಥಿಗಳು ಒಳ್ಳೆಯ ದಾರಿಯಲ್ಲಿ ನಡೆಯಬೇಕೆಂಬ ಹಂಬಲವಷ್ಟೆ.ಮಕ್ಕಳ ಮೇಲಿನ ವ್ಯಾಮೋಹ ಪ್ರಾರಂಭದಲ್ಲಿ ಸಂತಸ ತಂದರು ನಂತರ ಪಶ್ಚಾತ್ತಾಪ ಅನುಭವಿಸುವಂತೆ ಮಾಡುತ್ತದೆ.. ತಮಗೆ ಕಷ್ಟವಾದರೂ ತೊಂದರೆ ಇಲ್ಲ, ತಮಗೆ ನೋವಾದರೂ ಚಿಂತೆ ಇಲ್ಲ, ಕೈಯಲ್ಲಿ ದುಡ್ಡಿಲ್ಲ ದಿದ್ದರೂ ಸಾಲ ಮಾಡಿ ಮಕ್ಕಳಿಗೆ ರುಚಿ ರುಚಿಯಾಗಿ ತಿನ್ನಿಸುವುದರಿಂದ ಮಕ್ಕಳಿಗೆ ಕೇಳಿದ್ದನೆಲ್ಲಾ ಕೊಡಿಸುವುದರಿಂದ ಮಕ್ಕಳ ಮಾತಿನಂತೆ ನಡೆಯುವುದರಿಂದ ಅವರನ್ನು ಪ್ರೀತಿಯಿಂದ ಬೆಳೆಸಿದ್ದೇವೆ ಎಂದರ್ಥವಲ್ಲ.ಮಕ್ಕಳ ಮೇಲಿನ ವ್ಯಾಮೋಹ ಇವೆಲ್ಲವನ್ನೂ ಮಾಡಿಸಿರುತ್ತದೆ.ಮಕ್ಕಳ ಮೇಲಿನ ವ್ಯಾಮೋಹ ಅವರನ್ನು ಹಠಮಾರಿಯನ್ನಾಗಿ ಮಾಡಿಸುತ್ತದೆ ಹೊರತು ಪ್ರೀತಿಯ ಬೆಲೆ ತಿಳಿಸಲಾಗದು.ಅತಿಯಾದರೆ ಅಮೃತವು ವಿಷ ಎಂಬಂತೆ ಪ್ರೀತಿಯಾಗಲಿ ವ್ಯಾಮೋಹವಾಗಲಿ ಜಾಸ್ತಿಯಾದರೆ ಅನಾಹುತಗಳೇ ಹೆಚ್ಚು.ಗಿಡಕ್ಕೆ ಅತಿಯಾಗಿ ನೀರು ಗೊಬ್ಬರ ಹಾಕಿದರೆ ಉತ್ತಮ ಫಲ ಕೊಡದು.ಅವಶ್ಯಕತೆಗೆ ಅನುಗುಣವಾಗಿ ಬೇಕಾದನ್ನು ನೀಡಿದರೆ ಮಾತ್ರ ಉತ್ತಮ ಫಲಿತಾಂಶ ದೊರೆಯುವುದು.ಪ್ರೀತಿ ಹಾಗು ವ್ಯಾಮೋಹದ ನಡುವೆ ವ್ಯತ್ಯಾಸವಿದೆ..ಎರಡು ಒಂದೇ ಅಲ್ಲ..

       ಅತಿಯಾದರೆ ವ್ಯಾಮೋಹ

        ತಪ್ಪಿಸಲಾಗದು ನೋವ...


Rate this content
Log in

Similar kannada story from Abstract