Vijayalaxmi C Allolli

Children Stories Fantasy Children

4  

Vijayalaxmi C Allolli

Children Stories Fantasy Children

ನನ್ನ ಬಾಲ್ಯದ ಆಟಗಳು

ನನ್ನ ಬಾಲ್ಯದ ಆಟಗಳು

1 min
338


ನಾವು ಆಡಿದ್ದು ಮಣ್ಣಿನ ನೆಲದ ಮೇಲೆಯೆ ಹಾಗಾಗಿ

ಮೂರು ಚಿಕ್ಕ ಚಿಕ್ಕ ಗುಂಡಿಗಳನ್ನು ಮಾಡಿ,ಅದರಲ್ಲಿ ಯಾವುದಾದರೂ ಒಂದರಲ್ಲಿ ಬಳೆಚೂರುಗಳನ್ನು ಹಾಕಿ ಮುಚ್ಚಿ ಬಿಡುತ್ತಿದ್ದೇವು.ಸಹಆಟಗಾರ್ತಿಗೆ ನಮ್ಮನೆಗೆ(ಗುಂಡಿಗಳಿಗೆ ಮನೆ ಎನ್ನುವುದು)ಬಾ ಎಂದು ಆಹ್ವಾನ ಕೊಟ್ಟು,ಬಳೆಚೂರುಗಳಿರುವ ಗುಂಡಿ ಹುಡುಕಿ ಎಂದು ಸವಾಲು ಹಾಕುತ್ತಿದ್ದೇವು.ಅವರು ಸರಿಯಾಗಿ ಊಹಿಸಿದರೆ ಆ ಬಳೆಚೂರುಗಳೆಲ್ಲಾ ಅವರಿಗೆ,ತಪ್ಪು ಊಹಿಸಿದರೆ ನಾವು ಬಚ್ಚಿಟ್ಟಷ್ಟು ಬಳೆಚೂರುಗಳನ್ನು ಅವರು ಅವರ ಹತ್ತಿರ ಇರುವ ಬಳೆಚೂರುಗಳಲ್ಲಿ ಎಣಿಸಿ ನಮಗೆ ಕೊಡುವುದು....

ಹೇಗಿದೆ ನಮ್ಮ ಬಳೆಚೂರು ಆಟ...


   ಸಣ್ಣ ಮಣ್ಣಿನ ಒಲೆಯ ಮೇಲೆ 

ಹಳೆ ಡಬ್ಬಿಯ ಮುಚ್ಚಳವನ್ನು ಪಾತ್ರೆ ಮಾಡಿ ಅದರ ಮೇಲಿಟ್ಟು,

ಜಾಲಿಗಿಡದ ಎಲೆನಾ ಅಕ್ಕಿ ಅಂತಾ ತಿಳ್ಕೊಂಡು,

ಅದೆ ಗಿಡದ ಹಸಿರು ಹೂವುಗಳನ್ನು ಸಾಸಿವೆ ಮಾಡಿ,

ಅದೆ ಗಿಡದ ಹಳದಿ ಹೂವುಗಳನ್ನು ರವೆ ಮಾಡಿ,

ಅಡುಗೆ ಮಾಡಿ ಸುಳ್ಳಪಳ್ಳ ಊಟ ಮಾಡುನು ಅಂತಾ ಗೆಳತಿಯರೊಂದಿಗೆ ಆಡಿದ ಆ ಸುಂದರ ಕ್ಷಣಗಳು

ಮತ್ತೆ ಬರಬಾರದಾ....


ಗ್ರಾಮೀಣ ಪ್ರದೇಶಗಳಲ್ಲಿ ಗಂಡು ಮಕ್ಕಳಿಗೆ ಮೀಸಲಾದ ಆಟ ಈ ಗೋಲಿ ಆಟ...

ಅಪ್ಪನ ಜೇಬಿಂದ ದುಡ್ಡು ಕದ್ದು ಗೋಲಿತಂದು ಆಡಿದವರೆಷ್ಟೊ;

ಅಮ್ಮನ ಕಾಡಿ ಬೇಡಿ ಗೋಲಿತಂದು ಆಡಿದವರೆಷ್ಟೊ;

ಹೊಲಕ್ಕೆ ಹೋಗಿ ಬುತ್ತಿ ಕೊಟ್ಟು ಬಾ ಎಂದರೆ ಗೋಲಿಗೆ ದುಡ್ಡು ಕೊಡು ಹೋಗುತ್ತೇನೆ ಎಂದವರೆಷ್ಟೊ;

ಮಣ್ಣಿನ ನೆಲದಲ್ಲಿ ಬೊಕಿ(ಸಣ್ಣ ತೆಗ್ಗು)ತೆಗೆದು ಗೋಲಿಗಳನ್ನು ಅದರೊಳಗೆ ಬೆರಳುಗಳಿಂದ ಉರುಳಿಸುತ್ತಾ ಸೇರಿಸುವ ಆಟವೆ ಬಲುಚಂದ,

ಅಪ್ಪಿತಪ್ಪಿ ಹೆಣ್ಣು ಮಕ್ಕಳಾಡಿದರೆ 'ಅದೇನ ಗಂಡುಬಿರಿ ಹಾಗೆ ಗೋಲಿ ಆಡತೈತಿ' ಅಂತಾ ಬೈಯೊಕೆ ಶುರುಮಾಡಿಬಿಡುತ್ತಿದ್ದರು.ಕಾಂಕ್ರೀಟ್ ರಸ್ತೆಯ ಪಟ್ಟಣದಲ್ಲಿರುವ ಮಕ್ಕಳಿಗೆ ಈ ಆಟ ಕಾಣಸಿಗದು...



Rate this content
Log in