Vijaya Bharathi

Abstract Classics Others

4  

Vijaya Bharathi

Abstract Classics Others

ಮಸಾಲೆ ಚಹಾ

ಮಸಾಲೆ ಚಹಾ

1 min
392


ಅವನು ಮತ್ತು ಅವಳು ದಿನವೂ ಒಂದೇ ಸಮಯದಲ್ಲಿ

ಚಹಾ ಅಂಗಡಿಗೆ ಬರುತ್ತಿದ್ದರು. ಬೆಳಿಗ್ಗೆ ೧೧.೩೦ ಮತ್ತು ಮಧ್ಯಾಹ್ನ ೪.೩೦ ರ ಹೊತ್ತಿಗೆ ಚಹಾ ಕುಡಿಯಲು ಕಾಕನ

ಚಿಕ್ಕ ಅಂಗಡಿಗೆ ಇಬ್ಬರೂ ತಪ್ಪದೇ ಹಾಜರಾಗುತ್ತಿದ್ದರು.

ಇಬ್ಬರೂ ಮಸಾಲೆ ಚಹಾ ವನ್ನೇ ಕುಡಿಯುತ್ತಿದ್ದರು.

ಒಂದು ದಿನ ಇಬ್ಬರೂ ಒಟ್ಟಿಗೆ ಒಂದು ಕಪ್ ಚಹಾವನ್ನು ಆರ್ಡರ್ ಮಾಡಿದಾಗ, ಚಾ ಅಂಗಡಿ ಕಾಕ ಇಂದು ಒಂದೇ ಕಪ್ ಮಸಾಲೆ ಟೀ ಸಿಗುವುದು ಇಬ್ಬರಿಗೂ ಬೈ ಟು ಮಾಡಿ ಕೊಡಲಾ ಎಂದಾಗ, ಅರ್ಧಂಬರ್ಧ ಮನಸ್ಸಿನಿಂದಲೇ ಅರ್ಧ ಕಪ್ ಮಸಾಲೆ ಕುಡಿದು ಹೊರಟರು. ಹೀಗೆ ಪ್ರಾರಂಭವಾದ ಇವರಿಬ್ಬರ ಬೈ ಟು ಚಹಾ, ವರ್ಷಗಟ್ಟಲೆ ಮುಂದುವರದಿದ್ದಲ್ಲದೆ, ಇಬ್ಬರನ್ನೂ ಒಟ್ಟಿಗೆ ಬೆಸೆಯಿತು.


ಅರ್ಧ ಕಪ್ ಚಹಾ ಇಬ್ಬರು ಅಪರಿಚಿತರನ್ನು ಒಟ್ಟಿಗೆ ಸೇರಿಸಿ ಪ್ರೇಮಿಗಳನ್ನಾಗಿಸಿ, ಜೀವನ ಪಯಣದಲ್ಲೂ ಒಟ್ಟಿಗೆ ಸೇರುವಂತೆ ಮಾಡಿತು.

ಇವರಿಬ್ಬರ ಮದುವೆಯಾಗಿ ಮೊದಲ ವಾರ್ಷಿಕೋತ್ಸವ ಬಂದಾಗ, ಅವನು ಅವಳನ್ನು

"ನಿನಗೆ ಇಷ್ಟವಾದುದನ್ನು ನಾನು ಇಂದು ನಿನಗೆ ಕೊಡಿಸುತ್ತೇನೆ,ಏನು ಬೇಕು?"ಎಂದು ಕೇಳಲಾಗಿ,ಅವಳು ಅವನ ಎದೆಗೆ ಒರಗಿ ಕೊಂಡು

"ನಮ್ಮಿಬ್ಬರನ್ನೂ ಬೆಸೆದ ಕಾಕನ ಚಹಾದ ಅಂಗಡಿಯಲ್ಲಿ ಅರ್ಧ ಕಪ್ ಟೀ ಕೊಡಿಸುತ್ತೀಯಾ?",ಎಂದಾಗ ಅವನಿಗೆ ತುಂಬಾ ಖುಷಿಯಾಯಿತು. ಅವಳನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿನ ಮಳೆಗರೆದ.

ಪ್ರೀತಿ ಯ ಅಮಲಿನಿಂದ ಹೊರಬಂದ ಅವರಿಬ್ಬರೂ ತಮ್ಮ ವಾರ್ಷಿಕೋತ್ಸವ ದ ಅಂಗವಾಗಿ ಕಾಕನ ಚಹಾ ಅಂಗಡಿಗೆ ಹೋಗಿ ಅರ್ಧ ಕಪ್ ಚಹಾ ಕುಡಿಯುತ್ತಾ ತಮ್ಮ ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ವರ್ಷ ಗಟ್ಟಲೆ ಯಿಂದ ತಮ್ಮ ಅಂಗಡಿಗೆ ಬರುತ್ತಿದ್ದ ಈ ಜೋಡಿಗೆ ಇಂದು ವಿಶೇಷ ವಾದ ಮಸಾಲ ಚಹಾ ಮಾಡಿ

ಕೊಟ್ಟ ಕಾಕ ಅವರಿಬ್ಬರಿಂದ ಹಣವನ್ನು ಪಡೆಯಲಿಲ್ಲ. ಕಾಕ ನ ಮಸಾಲೆ ಚಹಾ ಅವರಿಬ್ಬರ ವಾರ್ಷಿಕೋತ್ಸವ ದ ಉಡುಗೊರೆ ಎಂದಾಗ, ಇಬ್ಬರೂ ಒಬ್ಬರನ್ನೊಬ್ಬರು ನೋಡಿ ನಗುತ್ತಿದ್ದರು.



Rate this content
Log in

Similar kannada story from Abstract