ಮೋಹನನ ಜಾದೂ
ಮೋಹನನ ಜಾದೂ
ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ.
ಜಾದು.
ಮೋಹನ್ ಚಿಕ್ಕಂದಿನಿಂದ ಅತೀ ಹೆಚ್ಚು ಟಿವಿ ನೋಡುವ ಗೀಳು ಬೆಳೆಸಿಕೊಂಡು ಬೆಳೆದಂತಹ ಹುಡುಗ. ಯಾವಾಗಲೂ ಕಾರ್ಟೂನ್ , ಕಾರ್ಟೂನ್ ಅಂತ ರಿಮೋಟ್ ಕಂಟ್ರೋಲ್ಲರ್ ಯಾರ ಕೈಗೂ ಕೊಡದೇ, ಸರಿಯಾಗಿ ಹೋಮ್ ವರ್ಕ್ ಮಾಡದೇ , ಓದದೇ , ತನಗೆ ಹೇಗೆ ಬೇಕೋ ಹಾಗೆ ಬೆಳೆದ ಹುಡುಗ ಮೋಹನ್. ಚಿಕ್ಕಂದಿನಲ್ಲಿ ಆತ ನೋಡುತ್ತಿದ್ದ ಜಾದೂ ಕಾರ್ಯಕ್ರಮಗಳು ಆತನನ್ನು ಆಕರ್ಷಿಸಿದವು. ಆ ಆಕರ್ಷಣೆ ಆತ ಬೆಳೆದಂತೆ ಅವನೊಡನೆ ಅದೂ ಕೂಡ ಬೆಳೆಯಿತು. ಅದೇಷ್ಟೆಂದರೆ ಮೋಹನ್ ಜಾದೂ ಮಾಡುವುದನ್ನು ಕಲಿಯಲೆಂದೇ ಕ್ಲಾಸಗೆ ತೆರಳಿದನು.
ಮೊದ ಮೊದಲು ಜಾದೂ ಮಾಡುವುದು ಆತನಿಗೆ ಸುಲಭ ಆಗಿರಲಿಲ್ಲ. ಆದರೆ ಓದಿನಲ್ಲಿ ಹಿಂದಿದ್ದ ಆತ ಹೇಗಾದರೂ ಮಾಡಿ ಇದರಿಂದಲಾದರೂ ತಾನು ಹೆಸರು , ಕೀರ್ತಿ ಮಾಡಬೇಕೆಂದು ಹಠಕ್ಕೆ ಬಿದ್ದು ಇನ್ನೂ ಹೆಚ್ಚು ಕಲಿಯತೊಡಗಿದನು. ಅಪ್ಪ ಅಮ್ಮ ಮಗನ ಈ ಜಾದೂ ಮಾಡುವ ಕಲಿಕೆ ಇಷ್ಟವಿಲ್ಲದಿದ್ದರೂ , ಇರುವ ಒಬ್ಬ ಮಗನ ಆಸೆಯನ್ನು ಈಡೇರಿಸದಿದ್ದರೆ ನಾವೆಂತಹ ಪಾಲಕರು , ಅವನಿಗಿಷ್ಟ ಇರುವ ಕಲಿಕೆಯಲ್ಲಿ ಸಾಗಿ , ಬೆಳೆಯಲಿ ಎಂದು ಹರಸಿ ಆಶೀರ್ವದಿಸಿದ್ದರು.
ಆ ಆಶೀರ್ವಾದ ಫಲ ಕೊಟ್ಟಿತ್ತು. ಮಗ ಮೋಹನ್ ದೊಡ್ಡ ಜಾದೂಗಾರನಾಗಿ ಬೆಳೆದನು. ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಸಹ ಜಾದೂ ಕಾರ್ಯಕ್ರಮ ನೀಡುತ್ತಾ , ಹೆಸರು ಮಾಡಿದನು. ಹಣ ಸಂಪಾದಿಸಿದನು. ತಾನು ಕಂಡ ಕನಸು ಈ ಜಾದೂ ಮಾಡುವ ಕೆಲಸದಿಂದ ಈಡೇರಿತ್ತು.