ಮನವೆಂಬ ಮರ್ಕಟ
ಮನವೆಂಬ ಮರ್ಕಟ
ಒಬ್ಬ ಹೃದಯವಂತ ರಾಜ. ಯಾರೂ ಕಷ್ಟದಲ್ಲಿ ಇರಬಾರದೆಂದು ಅವನ ತುಡಿತ. ಒಮ್ಮೆ ಒಬ್ಬ ಅವಸರದಿಂದ ಓಡುತಿದ್ದ ಮನುಷ್ಯನನ್ನು ನೋಡಿ ಏನೋ ತೊಂದರೆ ಆಗಿರಬೇಕೆಂದು ತಿಳಿದು ಕೇಳಿದ ಅದಕ್ಕೆ ಅವನು ನಿಮ್ಮ ಅರಮನೆಯ ಪಶ್ಚಿಮ ದ್ವಾರದ ಬಂಡೆಯ ಕೆಳಗೆ ಒಂದು ಬೆಳ್ಳಿ ನಾಣ್ಯ ಇಟ್ಟಿದ್ದೀನಿ. ಅದರ ಅವಶ್ಯಕತೆ ಈಗ ಇದೆ ಅದಕ್ಕಾಗಿ ಹೋಗುತ್ತಿದ್ದೇನೆ ಎಂದ.
ಬೇಡ ಅದನ್ನ ಬೇರೆ ಯಾವಾಗಲಾದರೂ ತೆಗೆದುಕೋ ಆ ಒಂದು ನಾಣ್ಯದ ಬದಲು ಐದು ನಾಣ್ಯ ನಾನು ಕೊಡುತ್ತೀನಿ ಉಪಯೋಗಿಸಿಕೊ ಅಂದ. ಕೊಡಿ ಇದಕ್ಕೆ ಅದನ್ನೂ ಸೇರಿಸಿದರೆ ಆರು ಆಗುತ್ತಲ್ಲ ಅಂದ.
ರಾಜ
ಹೋಗಲಿ ಹತ್ತು ನಾಣ್ಯ ತೆಗೆದುಕೋ ಅದು ಅಲ್ಲೇ ಇರಲಿ ಅಂದಾಗಲೂ, ಹತ್ತಕ್ಕೆ ಒಂದು ಸೇರಿಸಿದರೆ ಹನ್ನೊಂದು ಆಗತ್ತಲ್ಲ ಅಂದ. ರಾಜ ಸುಮ್ಮ ನಾಗಲಿಲ್ಲ ನನ್ನ ಅರಮನೆಯ ಅರ್ಧ ಭಾಗ ಕೊಡುತ್ತೇನೆ ಆಗಬಹುದೇ ಅಂದ. ಆಗಲೂ ಹಾಗಾದರೆ ಅದನ್ನ ಪಶ್ಚಿಮದ ಕಡೆ ಕೊಡುತ್ತೀರಾ ಅಂತ ಕೇಳಿದ. ರಾಜನಿಗೆ ಅಲ್ಲಿಯ ವರೆಗಿಯೂ ಇದ್ದ ತಾಳ್ಮೆ ಇಲ್ಲದಾಗಿ ಇವನ ಆ ನಾಣ್ಯವನ್ನೂ ಕೊಡದೆ ಇಲ್ಲಿಗೆ ತನ್ನಿಅಂತ ಅಲ್ಲಿದ್ದ ಭಟರಿಗೆ ಹೇಳಿದ. ಆ ಒಂದು ನಾಣ್ಯವೂ ಇಲ್ಲದಾಯ್ತು.
ನೀತಿ : ಒಳ್ಳೆಯತನವನ್ನ ದುರುಪಯೋಗ ಮಾಡಿಕೊಳ್ಳಬಾರದು ಹಾಗೇ ದುರಾಸೆಯೂ ಒಳ್ಳೆಯದಲ್ಲ.