nagavara murali

Classics Inspirational Others

3  

nagavara murali

Classics Inspirational Others

ಮನುಷ್ಯತ್ವ

ಮನುಷ್ಯತ್ವ

2 mins
163



ವೆಂಕಟರಾಯ ಒಬ್ಬ ಕಷ್ಟ ಜೀವಿ. ಚಿಕ್ಕ ವಯಸ್ಸಿನಲ್ಲೇಅಣ್ಣನ ಬಲವಂತಕ್ಕೆ ಮದುವೆ ಯಾದ ಹೆಂಡತಿ ಎಂದೋ ಇವನನ್ನ ಬಿಟ್ಟು ಮತ್ಯಾರ ಜೊತೆಗೋ ಓಡಿಹೋಗಿದ್ದಳು.ಅದೇ ಕೊರಗ ಲ್ಲೇ ಕುಡಿತದ ಚಟ ಶುರುವಾಯಿತು. ಇವನು ಒಂದು ಪೊಲೀ ಸ್ ಸ್ಟೇಷನ್ ಮುಂದೆ ಇದ್ದ ಗಿಡಗಳಿಗೆ ನೀರು ಗೊಬ್ಬರ ಹಾಕೋದು ,ಕಸ ಗುಡಿಸುವುದು ಅಲ್ಲದೇ ಅವರು ಹೇಳುವ ಎಲ್ಲಾ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡಿಕೊಂಡು ದಿನ ಕಳೆ ಯುತ್ತಿದ್ದ.ಒಂದು ದಿನ ಬೆಳಿಗ್ಗೆ ಪೊಲೀಸ್ ಸ್ಟೇಶನ್ ಎದುರೇ ಭೀಕರ ಅಫಘಾತ . ವೇಗವಾಗಿ ಬಂದ ಕಾರೊಂದು ಸ್ಕೂಟರ್ ನಲ್ಲಿ ಬರುತ್ತಿದ್ದ ವ್ಯಕ್ತಿಗೆ ಗುದ್ದಿ ಪಕ್ಕದಲ್ಲಿ ತುಂಬಿ ಹರಿಯುತ್ತಿದ್ದ ದೊಡ್ಡ ಮೋರಿ ಒಳಗೆ ಸ್ಕೂಟರ್ ಸಮೇತ ಸವಾರ ಬಿದ್ದು ಬಿಟ್ಟಾಗ ಆ ಸಮಯಕ್ಕೆ ಅಲ್ಲಿದ್ದ ವೆಂಕಟರಾಯ ಮೋರಿಯಲ್ಲಿ ಇಳಿದು ಅವರನ್ನ ಮೇಲಕ್ಕೆ ಎತ್ತಿದ. ಅವರಿಗೆ ಮಾತನಾಡಲು ಸಹಾ ಆಗುತ್ತಿರಲಿಲ್ಲ. ಅವರು ಏನೋ ಹೇಳಕ್ಕೆ ಪ್ರಯತ್ನ ಮಾಡ್ತಿದಾರೆ. ನೀರು ಕುಡಿಸಿ ಅದೇನೆಂದು ತಿಳಿಯಲು ಪ್ರಯತ್ನ ಮಾಡಿದಾಗ ಅಲ್ಲಿಗೆ ಬಂದ ಮತ್ತೊಬ್ಬರಿಗೆ ಅರ್ಥವಾಯ್ತು. ಸ್ಕೂಟರ್ ಹೋದರೂ ಹೋಗಲಿ  ನನ್ನ ಬ್ಯಾಗ್ ಯಾರಾದರೂ ತಂದು ಕೊಡಿ ಅಂದದ್ದು ತಿಳಿದು ತಕ್ಷಣ ಮೋರಿಗೆ ಮತ್ತೆ ಇಳಿದು ಎದೆ ಎತ್ತರ ಹರಿಯುತ್ತಿದ್ದ ಕೊಳಕು ನೀರಲ್ಲಿ ಹುಡು ಕಾಡಿ ಇಲ್ಲವೆಂದು ಕೈ ಆಡಿಸಿದ. ಆಗ ಅವರು ಜೋರಾಗಿ ಅತ್ತು ಬಿಟ್ಟರು..ಅವರ ಸ್ಥಿತಿ ನೋಡಲಾರದೆ ಮತ್ತೆ ಇಳಿದು ಈಗ ಮುಳುಗಿ ಹುಡುಕಾಡಿದ. ಅಷ್ಟು ಹೊತ್ತಿಗೆ ಬಹಳ ಜನ ಸೇರಿ ದ್ದರು.ಪೋಲೀಸಿನವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು.

ಹತ್ತು ನಿಮಿಷ ವಾದರೂ ವೆಂಕಟರಾಯ ಮೇಲೆ ಬರದೇ ಇದ್ದಾಗ ಅಲ್ಲಿದ್ದವರೆಲ್ಲಾ ಹೆದರಿದರು. ಅಷ್ಟರಲ್ಲಿ ಯಾರೋ ಅಲ್ಲಿ ನೋಡಿ ಬಂದ ಅಂತ ಕೂಗಿದರು. ಕೈಲೊಂದು ಚರ್ಮ ದ ಬ್ಯಾಗ್ ಹಿಡಿದು ದೂರದಲ್ಲಿ ಬರುತ್ತಿದ್ದ. ಅಳುತ್ತಾ ಕೂತಿದ್ದ ವ್ಯಕ್ತಿ ಗೆ ಜೀವ ಬಂದ ಹಾಗಾಯ್ತು. ಓಡಿ ಹೋಗಿ ಬ್ಯಾಗ್ ತೆಗೆದು ಕೊಂಡು ನೋಡಿ ಅವನನ್ನು ಗಟ್ಟಿಯಾಗಿ ತಬ್ಬಿ ಹಿಡಿದು ಕಣ್ಣೀರು ಸುರಿಸಿದಾಗ ಅಲ್ಲಿದ್ದವರಿಗೆಲ್ಲಾ ಯಾವುದೋ ಸಿನೆಮಾ ಶೂಟಿಂಗ್ ನಂತೆಯೇ ಇತ್ತು.ಅಷ್ಟರಲ್ಲಿ ಕೆಲವರು ಹಗ್ಗಗಳನ್ನ ಕಟ್ಟಿ. ಸ್ಕೂಟರ್ ನ ಮೇಲಕ್ಕೆ ಎತ್ತಿ ನಿಲ್ಲಿಸಿ ಸ್ಟಾರ್ಟ್ ಮಾಡಕ್ಕೆ ಪ್ರಯತ್ನ ಮಾಡುತ್ತಿದ್ದರು. ಎಲ್ಲರ ಮುಂದೆಯೇ ಅವರು ವೆಂಕಟರಾಯನಿಗೆ ಹೇಳಿದರು. ಇದರಲ್ಲಿ ಬಂಗಾರದ ಆಭರಣಗಳು ಇದೆ. ಇದರಲ್ಲಿ ಕೈ ಹಾಕಿ ನಿನಗೆ ಏನು ಬೇಕೋ ಎಷ್ಟು ಬೇಕೋ ತೆಗೆದುಕೋ ಅಂತ ಹೇಳಿದರು. ಅಲ್ಲಿದ್ದ ಪೋಲೀಸರು ಅವನನ್ನು ಹುರಿದುಂಬಿಸಿದರು .ಒಳಗೆ ಕೈ ಹಾಕಿದ . ಬ್ಯಾಗ್ ಹಿಡಿದ ವ್ಯಕ್ತಿ ಕಣ್ಣು ಮುಚ್ಚಿದ್ದ .ಎಲ್ಲರ

ಗಮನ ಅವನ ಕೈ ಕಡೆಯೇ ಇತ್ತು.ನಿಧಾನವಾಗಿ ಕೈತೆಗೆದ .

ಮುಷ್ಟಿ ಕಟ್ಟಿದ್ದ. ಯಾರೋ ಕೇಳಿದರು ಅದರಲ್ಲಿ ಡೈಮಂಡ್ ಉಂಗುರ ಇದೆಯೇ ಅಂತ, ಅವನು ಹೇಳಿದ ಹೌದು ಮೂರು ಇದೆ.ಒಬ್ಬ ಕಾನ್ಸ್ಟೇಬಲ್ ಹೇಳಿದರು ವೆಂಕಟರಾಯನಿಗೆ ಇನ್ನು ಮುಂದೆ ವೆಂಕಟರಾಯಪ್ಪ ಅಂತಾನೆ ಕರೀ ಬೇಕಾಗುತ್ತೆ . ಅಷ್ಟರಲ್ಲಿ ಅವನ ಬೆರಳುಗಳು ಒಂದೊಂದೇ ತೆರೆದು ತೋರಿಸಿ ನನಗೆ ಏಕೆ ಸ್ವಾಮಿ ಅವರ ಒಡವೆ. ನಾವು ಬಂದಾಗಲೂ ಬರೀ ಕೈ. ಹೋಗುವಾಗಲೂ ಬರಿ ಕೈ ಅಂತ ತೆಲುಗಿನಲ್ಲಿ ಗಾದೆ ಮಾತು ಹೇಳಿ ,ನಿಮಗೆ ಕೊಡಲೇ ಬೇಕೆನಿಸಿದರೆ ನೂರು ರೂಪಾಯಿ ಕೊಡಿ ಸಾಕು ಅಂದ. ಐನೂರು ಕೊಡಲು ಹೋದರೂ ಕೈಯಿಂದ ಮುಟ್ಟಲಿಲ್ಲ.ಆಗ ಅಲ್ಲಿ ಇದ್ದವರೆಲ್ಲಾ ಬಾಯಿ ತುಂಬಾ ವೆಂಕಟರಾಯನನ್ನ ಹೊಗಳಿದರು .


Rate this content
Log in

Similar kannada story from Classics