murali nath

Abstract Inspirational Others


4  

murali nath

Abstract Inspirational Others


ಕಷ್ಟಗಳ ಮೂಟೆ

ಕಷ್ಟಗಳ ಮೂಟೆ

1 min 8 1 min 8


ಒಮ್ಮೆ ಒಂದು ಊರಿನಲ್ಲಿ ಹಲವರಿಗೆ ಒಂದೇ ದಿನ ಕನಸಿನಲ್ಲಿ ದೇವರು ಪ್ರತ್ಯಕ್ಷವಾಗಿ ನಿಮ್ಮ ಎಲ್ಲಾ ಕಷ್ಟಗಳಿಗೆ ಪರಿಹಾರ ಹುಡುಕೊಣವೆಂದು ಕೊಂಡಿದ್ದೇನೆ ಆದ್ದರಿಂದ ನಾಳೆ ಎಲ್ಲರೂ ಹತ್ತು ಗಂಟೆಗೆ ನಿಮ್ಮ ನಿಮ್ಮ ಕಷ್ಟಗಳನ್ನ ನಿಮ್ಮೂರ ಹನುಮನ ಗುಡಿಗೆ ಮೂಟೆ ಕಟ್ಟಿ ಹೊತ್ತು ತನ್ನಿ ಎಂದು ಹೇಳಿದ. ಬೆಳಗ್ಗೆ ಎದ್ದವರೆ ಇದ್ದ ಕಷ್ಟಗಳೆಲ್ಲ ಇಂದಿಗೆ ಮುಗಿಯಿತು ಎಂದುಕೊಂಡು ಎಲ್ಲರೂ ಕಷ್ಟಗಳನ್ನೆಲ್ಲ ಮೂಟೆ ಕಟ್ಟಿ ತಂದರು . ಇವರಿಗಾಗಿ ಮೊದಲೇ ಕಾದಿದ್ದ ದೇವರು ಮೂಟೆಗಳನ್ನು ಒಂದು ಕಡೆ ಇರಿಸಿ ಅದರ ಮೇಲೆ ತಮ್ಮ ತಮ್ಮ ಹೆಸರುಗಳನ್ನ ಬರೆಯಲು ತಿಳಿಸಿದ. ಹಾಗೆ ಮಾಡಿದ ಮೇಲೆ ಎಲ್ಲರಿಗೂ ತಿಳಿಸಿದ್ದು ಐದು ನಿಮಿಷ ಆದಮೇಲೆ ಗಂಟೆ ಬಾರಿಸಲಾಗುತ್ತೆ ಆಗ ನೀವು ನಿಮ್ಮದಲ್ಲದ ಬೇರೆಯವರ ಮೂಟೆಗಳನ್ನ ತೆಗೆದುಕೊಳ್ಳಬಹುದು. ಏಕೆಂದರೆ ನೀವು ಯಾವಾಗಲೂ ನಿಮ್ಮಕಷ್ಟವೆ ಬೇರೆಯವರ ಕಷ್ಟಕ್ಕಿಂತಲೂ ದೊಡ್ಡದೆಂದು ಯೋಚಿಸುತ್ತೀರಲ್ಲವೇ . ಹಾಗಾಗಿ ಈ ಉಪಾಯ. ಒಂದುಸಾರಿ ತೆಗೆದುಕೊಂಡದ್ದನ್ನ ಬದಲಿಸುವಂತಿಲ್ಲ ಒಪ್ಪಿಗೆ ತಾನೇ ಎಂದು ಕೇಳಿದಾಗ ಒಬ್ಬ ಹೇಳಿದನು ಸ್ವಾಮಿ ಯಾರದೋ ತಿಳಿಯದ ಕಷ್ಟಗಳಿಗಿಂತ ,ನಮಗೆ ತಿಳಿದಿರುವ ಕಷ್ಟಗಳ ಜೊತೆಗೆ ಬದುಕುವುದೇ ಮೇಲು ನನಗೆ ಷರತ್ತು ಒಪ್ಪಿಗೆ ಇಲ್ಲ. ಅದಕ್ಕೆ ಎಲ್ಲರೂ ಇವನು ಹೇಳಿದ್ದು ಸರಿ ಗೊತ್ತಿಲ್ಲದ ಕಷ್ಟಗಳು ನಮಗೆ ಬೇಡ ಇರುವ ಕಷ್ಟ ಇರಲಿ ನಿನ್ನ ದಯೆ ಮಾತ್ರ ನಮ್ಮ ಮೇಲಿರಲಿ ಎಂದರು. ಕೊನೆ ಗಳಿಗೆಯಲ್ಲಿ ಒಬ್ಬ ಓಡೋಡಿ ಬಂದ ಅವನ ಕಯ್ಯಲ್ಲಿ ಸಣ್ಣ ಚೀಲ ಮಾತ್ರ ಇದ್ದುದ್ದನ್ನ ಕಂಡು ದೇವರು ಕೇಳಿದ, ಇಷ್ಟು ಚಿಕ್ಕ ಚೀಲ ತರಲು ಇಷ್ಟು ಸಮಯವೇ ಎಂದಾಗ ಇಲ್ಲಾ ಸ್ವಾಮಿ ಲಾರಿಯಲ್ಲಿ ಬರುತ್ತಿದೆ ಅಂದ. ಎಲ್ಲರೂ ದೇವರೊಂದಿಗೆ ನಕ್ಕರು. 


ಇದೊಂದು ಕಾಲ್ಪನಿಕ ಕಥೆಯಾದರೂ ನಮ್ಮ ಜೀವನಕ್ಕೆ ಹತ್ತಿರ ವಿರುವ ವಾಸ್ತವ ಸಂಗತಿ. ಏನಂತೀರಿ?


 


Rate this content
Log in

More kannada story from murali nath

Similar kannada story from Abstract