Vijaya Bharathi.A.S.

Abstract Thriller Others

4  

Vijaya Bharathi.A.S.

Abstract Thriller Others

ಕೋಲ್ಮಿಂಚು

ಕೋಲ್ಮಿಂಚು

1 min
339


ಆಕಾಶದಲ್ಲಿ ರಾತ್ರಿಯ ವೇಳೆ ಇದ್ದಕ್ಕಿದ್ದಂತೆ ಒಂದು ರೀತಿಯ ಕೋಲ್ಮಿಂಚು ಕಾಣತೊಡಗಿತು. ಬಿಲ್ಲಿನಿಂದ ಹೊರಬಂದ ಬಾಣ ಭೂಮಿಯನ್ನು ನಿಧಾನವಾಗಿ ಸ್ಪರ್ಶಿಸುತ್ತದೋ ಎಂಬಂತೆ ಆ ವಿಚಿತ್ರ ವಾದ ವಸ್ತು, ಭುವಿಯ ಮೇಲಿರುವವರಿಗೆ ಅಚ್ಚರಿಯನ್ನುಂಟು ಮಾಡುತ್ತಿತ್ತು.

"ಇದೇನು ಆಕಾಶಕಾಯವೋ? ಯಾರೋ ದೇವತೆಗಳು ಮೇಲಿನಿಂದ ಬಿಟ್ಟ ಆಗ್ನೇಯಾಸ್ತ್ರವೋ? ಅಥವಾ ಉಲ್ಕಾಪಾತವೋ?", ಭೂಮಿಯಿಂದ ಜನರು ಬಿಟ್ಟ ಕಣ್ಣು ಬಿಟ್ಟು ನೋಡುತ್ತಾ ಇದ್ದರು. ಆಕಾಶದಲ್ಲಿ ಇಂತಹ ವಿಚಿತ್ರವಾದ ಚಿಹ್ನೆಗಳು ಉಂಟಾದರೆ, ದೇಶದಲ್ಲಿ ಏನಾದರೊಂದು ಅನಾಹುತವಾಗುತ್ತದೆ ಎಂದು. ಜ್ಯೋತಿಷ್ಯಜ್ಞರು ಮಾಧ್ಯಮದ ಮೂಲಕ ಬೊಬ್ಬೆ ಹೊಡೆದು ಜನರನ್ನು ಗಾಬರಿಗೊಳಿಸುತ್ತಿದ್ದರೆ, ಖಗೋಳ ಶಾಸ್ತ್ರಜ್ಞರು ಇದು ಯಾವ ರೀತಿಯ ಹೊಸ ಗ್ರಹವೋ?, ಉಪಗ್ರಹವೋ?, ಎಂದು ತಮ್ಮ ಸಂಶೋಧನೆಯ ಕಡೆ ಗಮನ ಕೊಡುತ್ತಿದ್ದರು. 

ಹೀಗೆ ಅವರವರ ಕ್ಷೇತ್ರಗಳಲ್ಲಿ ಅವರವರು ಚಿಂತನೆ ನಡೆಸುತ್ತಿದ್ದರು.


ಒಂದು ದಿನ ಬೆಳಿಗ್ಗೆ ಬೆಳಿಗ್ಗೆ ಇದ್ದಕ್ಕಿದ್ದಂತೆ ಒಂದು ಪುಟ್ಟ ದ್ವೀಪ ವೇ ಭೂಮಿಯೊಳಗೆ ಮುಳುಗಿಹೋಯಿತೆಂಬ ಸುದ್ದಿ ಜಗತ್ತಿನಲ್ಲಿ ಹರಡತೊಡಗಿತು. ಈ ಸುದ್ದಿ ಕೇಳಿದ ಜನರೆಲ್ಲರೂ ಆ ವಿಚಿತ್ರ ಆಕಾಶದ ಕೋಲ್ಮಿಂಚಿನ ಬಾಣದ ಬಗ್ಗೆಯೇ ಮಾತನಾಡಿಕೊಂಡರು. 

ಅಚ್ಚರಿ ಎಂಬಂತೆ ಈ ಅವಘಡ ಮುಗಿದು ಒಂದು ಪುಟ್ಟ ದ್ವೀಪ ಭೂಮಿಯೊಳಗೆ ಮುಳುಗಿ ಹೋದ ಬಳಿಕ ಆಗೆಲ್ಲಾ ಕಾಣುತ್ತಿದ್ದ ವಿಚಿತ್ರ ಕೋಲ್ಮಿಂಚು ಮರೆಯಾಗಿ ಹೋಗಿತ್ತು.



Rate this content
Log in

Similar kannada story from Abstract