Kalpana Nath

Classics Fantasy Inspirational

4  

Kalpana Nath

Classics Fantasy Inspirational

ಕಾಲ್ಪನಿಕ ಕಥೆ

ಕಾಲ್ಪನಿಕ ಕಥೆ

2 mins
123



ಒಂದು ಪುರಾತನ ದೇಗುಲ. ಅಲ್ಲಿ ಬಹಳ ದಿನಗಳಿಂದ ಒಂದು ನಾಯಿ ಪೂಜಾ ಸಮಯಕ್ಕೆ ಬಂದು ಗರುಡ ಗಂಭದ ಹತ್ತಿರ ನಿಂತು ಬೊಗಳು ವುದು. ನಗಾರಿ ಭಾರಿಸುವವನು ಸಮಯಕ್ಕೆ ಸರಿಯಾಗಿ ಬರದಿದ್ದರೆ ಪಕ್ಕದಲ್ಲೇ ಇದ್ದ ಅವನ ಮನೆ ಮುಂದೆ ಹೋಗಿ ಬೊಗಳುವುದು, ಹೊರಗೆ ಹೋಗುವ ಎಲ್ಲರ ಕೈಚೀಲಗಳನ್ನ ಮೂಸಿ ನೋಡುವುದು ಹೀಗೆ ಅನೇಕ ರೀತಿಯ ದೇಗುಲಕ್ಕೆ ಸಂಭಂದ ಪಟ್ಟ ಕೆಲಸಗಳನ್ನ ಮಾಡುತ್ತಿತ್ತು. ಅಲ್ಲಿಗೆ ಬರುವವರಿಗೆ ಇದೊಂದು ಕುತೂಹಲಕರ ವಿಷಯವಾಗಿತ್ತು. ಒಂದು ದಿನ ಯಾರೋ ಒಬ್ಬ ಮಹಾತ್ಮರು ದೇವಸ್ಥಾನಕ್ಕೆ ಬರುವರಿದ್ದರು. ಹಿಂದಿನ ದಿನದಿಂದ ಬಹಳ ಸಂಭ್ರಮದಿಂದ ಎಲ್ಲಕಡೆ ಓಡಾಡಿಕೊಂಡಿತ್ತು. ಆ ಮಹಾತ್ಮರು ಬರುವಾಗ ಮೆರವಣಿಗೆಯಲ್ಲಿ ತಾನೂ ಸೇರಿಕೊಂಡಿತು. ಯಾವುದೊ ಬೀದಿ ನಾಯಿ ಅಂತ ಹೊರಗಿನಿಂದ ಬಂದವರು ತಿಳಿಯದೆ ಕಲ್ಲು ತೆಗೆದುಕೊಂಡು ಹೊಡೆದಾಗ ಕಾಲಿಗೆ ಬಿದ್ದು ಅರಚುತ್ತಾ ಪಕ್ಕಕ್ಕೆ ಬಂದು ನಿಂತಿತು. ಯಾರೋ ಅದರ ಬಗ್ಗೆ ತಿಳಿದವರು ಅದಕ್ಕೆ ಔಷದೋಪಚಾರ ಮಾಡಿದರು. ಅಂದಿನ ಕಾರ್ಯಕ್ರಮ ಎಲ್ಲಾ ಮುಗಿದು ದೇಗುಲದ ಹೊರಗೆ ಬರುವಾಗ ಆ ಮಹಾತ್ಮರ ಕಣ್ಣಿಗೆ ಕುಂಟುತ್ತಾ ಬರುತ್ತಿದ್ದ ನಾಯಿ ಕಂಡಿತು. ಅವರ ದಿವ್ಯದೃಷ್ಟಿಗೆ ನಾಯಿಯ ಹಿಂದಿನ ಜನ್ಮದ ವೃತ್ತಾಂತ ತಿಳಿಯಿತು. ಹತ್ತಿರ ಹೋಗಿ ನಾರಾಯಣಪ್ಪ ಏನಿದು ಕಾಲು ಅಂತ ಕೇಳಿ ಅದರ ತಲೆ ಸವರಿದರು. ಅದರ ಕಣ್ಣಲ್ಲಿ ನೀರು ಸುರಿಯಿತು. ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ. ಆಗ ಅವರು ವಿವರವಾಗಿ ಅಲ್ಲಿದ್ದವರಿಗೆ ಹೇಳಿದ್ದು, ಬಹಳ ವರ್ಷಗಳ ಕೆಳಗೆ ರಾಜನ ಆಳ್ವಿಕೆ ಇದ್ದಾಗ ನಾರಾಯಣಪ್ಪ ಎನ್ನುವ ವ್ಯಕ್ತಿ ಇದೇ ದೇಗುಲದ ಧರ್ಮಾಧಿಕಾರಿ. ತುಂಬಾ ಪ್ರಾಮಾಣಿಕ. ಒಂದು ಚಿಕ್ಕಾಸು ವತ್ಯಾಸವಾಗದೆ ನೋಡಿಕೊಳ್ಳುತ್ತಿದ್ದ. ಅವನ ಒಬ್ಬಳೇ ಮಗಳ ಮದುವೆಯಾದ ಮೇಲೆ ಅಳಿಯನನ್ನ ಇವನ ಸಹಾಯಕ್ಕಾಗಿ ಲೆಕ್ಕಪತ್ರ ನೋಡಿಕೊಳ್ಳಲು ಇಟ್ಟುಕೊಂಡ. ಅವನ ಪ್ರಾಮಾಣಿಕತೆ ಬಗ್ಗೆ ಮಾವ ಎಂದೂ ಪ್ರಶ್ನಿಸಲಿಲ್ಲ. ಒಂದು ದಿನ ಮಗಳ ಕತ್ತಿನಲ್ಲಿ ಹೊಳೆಯುತ್ತಿರುವ ವಜ್ರದ ಕಂಠಿ ಹಾರ ನೋಡಿ ಗಾಬರಿಯಾದ. ಕೋಪ ನೆತ್ತಿಗೇರಿತು. ಇಬ್ಬರನ್ನೂ ಮನೆಯಿಂದ ಹೊರಹಾಕಿದ. ಆದರೆ ಈ ವಿಷಯ ರಾಜನಿಗಾಗಲಿ ಅಥವ ಬೇರೆ ಅಧಿಕಾರಿಗಳಿಗಾಗಲಿ ತಿಳಿಸದೇ ಮುಚ್ಚಿಟ್ಟ. ಗಲಾಟೆಯಲ್ಲಿ ಮಗಳಿಂದ ಆ ಹಾರ ತೆಗೆದುಕೊಳ್ಳದೆ ಮರೆತು ಬಿಟ್ಟಿದ್ದ. ಬೇರೆ ಊರಿಗೆ ಹೋಗಿ ಅದನ್ನ ಮಾರಿ ಜೀವನ ಮಾಡಬಹುದೆಂದು ಹೊರಟ ಅಳಿಯ ಮಗಳು ರಾಜಭಟರ ಕೈಲಿ ಸಿಕ್ಕಿಹಾಕಿ ಕೊಂಡಾಗ ಧರ್ಮಾಧಿಕಾರಿಯೂ ಶಿಕ್ಷೆ ಅನುಭವಿಸಬೇಕಾಯ್ತು. 


ಅದೇ ನಾರಾಯಣಪ್ಪನೇ ಇದು ಎಂದು ಹೇಳುತ್ತಿದ್ದಾಗ ಅಲ್ಲಿಗೆ ಮತ್ತೆರೆಡು ನಾಯಿಗಳು ಬಂತು. ಆ ಎರಡು ನಾಯಿಗಳು ಎಂದೂ ದೇಗುಲದ ಒಳಗೆ ಬಂದಿರಲಿಲ್ಲ . ಪಾದರಕ್ಷೆ ಬಿಡುವ ಕಡೆ ಸದಾ ಮಲಗಿರುತ್ತಿತ್ತು. ಅವುಗಳನ್ನ ಕಂಡು ಮಹಾತ್ಮರು ಹೇಳಿದರು. ಏನು ನಾರಾಯಣಪ್ಪ ನಿನ್ನ ಮಗಳು ಅಳಿಯ ಇಲ್ಲೇ ಇದ್ದರೂ ನಿನಗೆ ಗೊತ್ತಿಲ್ಲ. ಅಥವ ನಿನಗೆ ನೋಡಲು ಇಷ್ಟವಿಲ್ಲವೇ ಅಂದಾಗ ಬಾಲ ಅಲ್ಲಾಡಿಸಿತು. ಅಲ್ಲಿಂದ ಆ ಮಹಾತ್ಮರು ಹೊರಡುವಾಗ ಈ ನಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ ಇದು ಇಲ್ಲಿ ಇರುವವರೆಗೂ ಯಾವ ಕಳ್ಳತನದ ಭಯವಿರದು ಅಂತ ಹೇಳಿದರು.


Rate this content
Log in

Similar kannada story from Classics