Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಕಾಲಕಾಲ ಮಹಾಕಾಲ

ಕಾಲಕಾಲ ಮಹಾಕಾಲ

1 min
364


ಮೃಕಂಡು ಮತ್ತು ಮರುಧ್ವತಿ ದಂಪತಿಗಳು ಇದ್ದರು.ಅವರಿಗೆ ಮದುವೆಯಾಗಿ ಬಹಳ ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ. ನಂತರ ದಂಪತಿಗಳು ಶಿವನನ್ನು ಕುರಿತು ದೀರ್ಘ ತಪಸ್ಸು ಮಾಡಿದಾಗ, ಅವರ ತಪಸ್ಸಿಗೆ ಮೆಚ್ಚಿ ಪರಮೇಶ್ವರ ಅವರಿಗೆ ವರವನ್ನು ಬೇಡುವಂತೆ ಕೇಳಿದ. 

ಇಬ್ಬರೂ ತಮಗೆ ಮಕ್ಕಳ ಭಾಗ್ಯ ಕರುಣಿಸುವಂತೆ ಬೇಡಿಕೊಂಡರು. ಆಗ ಪರಮ ಶಿವ, ಅವರಿಗೆ ಎರಡು ರೀತಿಯ ದಾರಿಗಳನ್ನು ಸೂಚಿಸಿ,

'ನಿಮಗೆ ದೀರ್ಘ ಕಾಲ ಬಾಳಿ ಅಪ್ರಯೋಜಕ ವಾದ ದಡ್ಡ ಮಗ ಬೇಕೋ? ಹದಿನಾರು ವರ್ಷ ಕಾಲ ಬಾಳಿ ಜಗತ್ಪ್ರಸಿದ್ಧನಾದ ಮಗ ಬೇಕೋ?', ಎಂದು ಕೇಳಿದಾಗ, ಅವರು ತಮಗೆ ಅಲ್ಪಾಯುಷಿ ಮಗನೇ ಸಾಕೆಂದು ಕೇಳಿಕೊಂಡಾಗ ಶಿವ "ತಥಾಸ್ತು"ಎಂದ.

ಶಿವನ ಕೃಪೆಯಿಂದ ಮೃಕಂಡು ಮತ್ತು ‌ಮರುಧ್ವತಿ  ದಂಪತಿಗಳಿಗೆ ಒಂದು ಗಂಡು ಮಗುವಾಯಿತು. 

ಅದಕ್ಕೆ ಮಾರ್ಕಂಡೇಯನೆಂದು ಹೆಸರಿಟ್ಟರು.. ಮಗುವಿನ ಆಟಪಾಠಗಳಲ್ಲಿ ಮೈಮರೆತಿದ್ದ ಆ ದಂಪತಿಗಳಿಗೆ ,ಅವನಿಗೆ ಹದಿನಾರನೆಯ ವಯಸ್ಸು ತುಂಬುವಾಗ ತುಂಬಾ ಭಯವಾಗುತ್ತಿತ್ತು.


ಮಾರ್ಕಂಡೇಯ ಈಶ್ವರನ ಪರಮಭಕ್ತನಾಗಿದ್ದು. ಅವನು ಆಯಸ್ಸು ಮುಗಿಯುವ ದಿನ ಅವನು ಶಿವಲಿಂಗವನ್ನು ಭಕ್ತಿಯಿಂದ ಪೂಜಿಸುತ್ತಾ , ಶಿವನ ಲಿಂಗವನ್ನು ಆಲಂಗಿಸಿಕೊಂಡಿದ್ಯದ. ಆ ವೇಳೆಗೆ ಸರಿಯಾಗಿ ಯಮ ಪಾಶ ಅವನ ಕೊರಳಿಗೆ ಬಿದ್ದು ಅವನ ಆಯುಷ್ಯ ಮುಗಿಯುವ ಹಂತಕ್ಕೆ ‌ತಲುಪಿತ್ತು. 

ಆದರೆ ಅವನ ಪ್ರಾಣವನ್ನು ಕೊಂಡೊಯ್ಯಲು ಬಂದಿದ್ದ ಯಮ, ಹುಡುಗನ ಪ್ರಾಣ ತೆಗೆದುಕೊಂಡು ಹೋಗಬೇಕಾದಾಗ, ಯಮಪಾಶ ಶಿವನ ಮೇಲೆ ಬಿದ್ದು, ಕೋಪಗೊಂಡ ಶಿವ ಯಮನ ಮೇಲೆ ಉಗ್ರನಾದ. 

ಕಡೆಗೆ ತನ್ನ ಪರಮಭಕ್ತ ಮಾರ್ಕಂಡೇಯನಿಗೆ ಚಿರಂಜೀವಿಯಾಗುವಂತೆ ಹರಿಸಿ, ಅವನನ್ನು ಆಶೀರ್ವದಿಸಿದನು. ಶಿವನ ಕೃಪೆಯಿಂದ ತಮ್ಮ ಮಗನ ಆಯಸ್ಸು ವೃದ್ಧಿಯಾದುದನ್ನು ಕಂಡು

ಮೃಕಂಡು ಮತ್ತು ‌ಮರುಧ್ವತಿ ದಂಪತಿಗಳಿಗೆ ಮಹದಾನಂದವಾಯಿತು.


ಅಂದಿನಿಂದ ಮಾರ್ಕಂಡೇಯ ಚಿರಂಜೀವಿಯಾದನು.



Rate this content
Log in

Similar kannada story from Abstract