nagavara murali

Abstract Others

1  

nagavara murali

Abstract Others

ಕಾಲ್ ಬಾಯ್

ಕಾಲ್ ಬಾಯ್

3 mins
84


ಶೇಖರ್ ಹಳ್ಳಿಯಲ್ಲಿ ಬೆಳೆದು SSLC ನಂತರ ಕಾಲೇಜು ಸೇರಲು ಬೆಂಗಳೂರಿಗೆ ಬಂದ ಸುಂದರ ಮೈಕಟ್ಟಿನ ಯುವಕ . ಆರು ಅಡಿ ಎತ್ತರ ಸದಾ ನಗು ಮುಖ ಆಕರ್ಷಕ ವ್ಯಕ್ತಿತ್ವ. ಎಷ್ಟು ಬೇಕೋ ಅಷ್ಟೇ ಮಾತು. ಓದಿನಲ್ಲಿ ಹೆಚ್ಚು ಆಸಕ್ತಿ. ಇವನ ಹಳ್ಳಿಯವರೇ ಆದ ರಾಜು ಮತ್ತು ಸೀನ ಇಬ್ಬರೂ ಸೇರಿ ಸಿಟಿಯಲ್ಲಿ ಮೊದ ಲೇ ಒಂದು ಮನೆ ಮಾಡಿದ್ದರು. ಇವನೂ ಅವರ ಜೊತೆ ಸೇರಿಕೊಂಡ. ಅವರಿಬ್ಬರೂ ನೌಕರಿ ಮಾಡುತ್ತಿದ್ದರು. ಸೀನ ಟ್ಯಾಕ್ಸಿ ಓಡಿಸುತ್ತಾ ಇದ್ದ. ರಾಜು ಒಂದು ಗಾರ್ಮೆಂಟ್ ಫ್ಯಾಕ್ಟರಿ ಯಲ್ಲಿ ಸೂಪರ್ ವೈಸರ್ ಆಗಿದ್ದ.


ಸೀನ ಒಂದು ದಿನ ಶೇಖರ್ ಗೆ ಹೇಳಿದ ನೀನು ಓದುತ್ತಿರೋವಾಗಲೇ ಸಂಪಾದನೆ ಮಾಡಬಹುದು ಗೊತ್ತಾ . ಸಿಟಿ ಲೈಫ್ ಬಹಳ ಕಷ್ಟ. ನಿಮ್ಮ ಮನೆಯವ ರೇನು ಅಷ್ಟು ಅನುಕೂಲಸ್ಥರಲ್ಲ ಅಂತ ನನಗೂ ಗೊತ್ತು. ನನ್ನ ಜೊತೆ ಒಂದೆರಡು ದಿನ ಬಂದರೆ ಸಹಾಯ ಮಾಡ್ತೀ ನಿ ಅಂದ. ಮೊದಲು ಮನಸ್ಸಿರಲಿಲ್ಲ. ಆದರೆ ಪ್ರಯತ್ನ ಮಾಡೋಣ ಒಳ್ಳೆಯ ಕೆಲಸ ಆದರೆ ಮಾಡೋದು ಇಲ್ಲ ಅಂದರೆ ಬಿಡೋದು ಅಂತ ಯೋಚಿಸಿ ಕೊನೇಗೆ ಒಪ್ಪಿದ. ನೋಡಪ್ಪ ಇದು night duty . ಕೈತುಂಬ ಹಣ ಬರುತ್ತೆ. ದೊಡ್ಡ ಮನುಷ್ಯರ ಸಂಪರ್ಕ ಇರುತ್ತೆ .ದೊಡ್ಡ ದೊಡ್ಡ ಹೋಟಲ್ ನಲ್ಲಿ ಊಟ ,ಮೋಜು ಮಸ್ತಿ ಕಾರಲ್ಲೇ ಓಡಾಟ ಇನ್ನೇನು ಬೇಕು ಹೇಳು ಅಂದಾಗ ಮೊದಲು ಹೆದರಿ ಇದ್ಯಾವುದೋ Drug ದಂಧೆ ಇರಬಹುದು ಅಂತ ತಿಳಿದು ಏನಪ್ಪಾ ನನ್ನ ಏನಂತ ತಿಳ್ಕೊಂಡಿ .ನಾನು ಓದಕ್ಕೆ ಇಲ್ಲಿಗೆ ಬಂದಿರೋನು. ನೀನು ಹೇಳೋದೆಲ್ಲ ಮಾಡಕ್ಕಾಗಲ್ಲ ಅಂದ. ನಿನ್ನ ಗುಣ ನಂಗೆ ಚೆನ್ನಾಗಿ ಗೊ ತ್ತು ಕಣೋ ನಾನ್ಯಾಕೆ ಅಂತ ಕೆಟ್ಟ ಕೆಲಸ ಮಾಡು ಅಂತೀನಿ. ನನಗೇನು ಬುದ್ಧಿ ಇಲ್ಲವೇ ಅಂದಾಗ sorry ನಾನು ತಪ್ಪು ತಿಳಿದೆ. ಹಾಗಾದರೆ ಅದೇನು ಹೇಳು ಅಂದ ಶೇಖರ್. ಇಷ್ಟ ಇದ್ದರೆ ನಾಳೆ ನನ್ನ ಜೊತೆ ಬಾ ಅಂತ ಹೇಳಿ ಹೊರಟು ಹೋದ.


ಮಾರನೆ ದಿನ ಸೀನ ದಿನಾ ಬರೋದಕ್ಕಿಂತ ಒಂದು ಗಂಟೆ ಮೊದಲೇ ಬಂದು ಯಾವುದೋ ಸೆಂಟು ಕ್ರೀಮ್ ಎಲ್ಲಾ ತಂದು ಇವತ್ತು ನಿನ್ನ ಜೀವನದಲ್ಲಿ ನೋಡೇ ಇಲ್ಲದ ಒಂದು ದೊಡ್ಡ ಹೋಟಲ್ ಗೆ ಕರೆದು ಕೊಂಡು ಹೋಗ್ತೀ ನಿ .ಅಲ್ಲಿ ಎಲ್ಲಾ ದೊಡ್ಡ ಮನುಷ್ಯರೇ ಇರ್ತಾರೆ.ಅವರ ಲೆವೆಲ್ ಗಂತೂ ನಾವು ಇರಕ್ಕೆ ಸಾಧ್ಯವಿಲ್ಲ. ಆದರೆ ಸ್ವಲ್ಪವಾದರೂ ಅವರು ನಮ್ಮ ಹತ್ತಿರ ಬಂದು ಮಾತ ನಾಡುವ ಹಾಗಾದರೂ ಇರಬೇಕಲ್ಲ ಅದಕ್ಕೆ ಅಷ್ಟೇ ಅಂದ. ಏನು ಕೆಲಸ ಅಂತ ಮಾತ್ರ ಗೊತ್ತಾಗ್ತಾ ಇಲ್ಲ. ಈಗಲೂ ಹೇಳು ಹೋಟಲ್ ನಲ್ಲಿ ಸಪ್ಲೈಯರ್ ಕೆಲಸಾನಾ ಅಂತ ಹೆದರಿ ಕೇಳಿದ. ಶೇಖರ್ ನಕ್ಕು ಅಷ್ಟು ಸುಲಭ ಅಲ್ಲಪ್ಪ ಅಲ್ಲಿ ಕೆಲಸ ಸಿಗೋದು. ನಾನು ಒಬ್ಬ ಕ್ಯಾಬ್ ಡ್ರೈವರ್ ಅಷ್ಟೆಲ್ಲಾ ಗೊತ್ತಿಲ್ಲ. ಹೋಟಲ್ ಕೆಲಸಾ ಅಂತೂ ಅಲ್ಲ. ಏನು ಇಷ್ಟು ಸೀಕ್ರೇಟ್ ಆಗಿ ಇಟ್ಟಿದಾನಲ್ಲ ಅಂತ ಕುತೂಹ ಲದಿಂದ ನೋಡು ಸೀನಣ್ಣ ಬೆಂಗಳೂರು ಬಗ್ಗೆ ನನಗೆ ಏನೂ ತಿಳಿದಿಲ್ಲ. ನೀನಾದರೋ ಇಲ್ಲಿ ಹಳಬ .ಎಲ್ಲಾ ಕಡೆ ಓಡಾಡ್ತೀ ನಿನ್ನ ನಂಬಿ ಬರ್ತೀನಿ ನಡಿ ಅಂತ ಹೇಳಿ ಇಬ್ಬರೂ ಕಾರಿನಲ್ಲಿ ಹೊರಟರು .


ರಾತ್ರಿ ಹನ್ನೊಂದು ಗಂಟೆ ಇರಬಹುದು. ಒಂದು ದೊಡ್ಡ ಹೋಟಲ್ ಮುಂದೆ ಇವರ ಕಾರು ಬಂದಾಗ ಅಲ್ಲಿ ಒಬ್ಬ 

ಕೈ ತೋರಿಸಿ ಕಾರು ನಿಲ್ಲಿಸಲು ಹೇಳಿದ.ಇಬ್ಬರೂ ಕಾರಿನಿಂ ದ ಇಳಿದರು .ಪಕ್ಕದಲ್ಲಿ ಒಂದು ಬಿ .ಎಂ .ಡಬ್ಲೂ ಕಾರು ನಿಂತಿತ್ತು. ಒಳಗೆ ನನ್ನ ಕ್ಯಾಬ್ ಬಿಡಲ್ಲ. ಇವರ ಕಾರಿನಲ್ಲಿ ಕೂತುಕೋ ಅಂತ ಬಾಗಿಲು ತೆಗೆದು ಇವರ ಹೆಸರು ಡೇವಿಡ್ ಇವರ ಕಾರ್ ಗೆ ಪಾಸ್ ಇರೋದರಿಂದ ಯಾವಾಗ ಬೇಕಾದರೂ ಒಳಗೆ ಹೋಗಬಹುದು.ಇವರ ಜೊತೆ ಹೋಗು. ಡೇವಿಡ್ ನೀವೇ ಡೀಟೈಲಾಗಿ ಇವನಿಗೆ ತಿಳಿಸಿ ಅಂತ ಹೇಳಿ ಬೆಳಗ್ಗೆ ಮೀಟ್ ಮಾಡ್ತೀನಿ ಅಂತ ಹೊರಟು ಹೋದ ಸೀನ.


ಐಶಾರಾಮಿ ಹೋಟೆಲ್ .ಜೀವನದಲ್ಲಿ ಮೊದಲ ಸಲ ಇಂತಹ ಹೋಟಲ್ ಒಳಗೆ ಬಂದಿರೋದು ಅದೂ ಮಧ್ಯ ರಾತ್ರಿ ಏನೂ.ಅರ್ಥ ವಾಗ್ತಿಲ್ಲ. ಡೇವಿಡ್ ಹೆಚ್ಚು ಮಾತಾ ಡಲ್ಲ. ಬಿಳಿ ಯೂನಿಫಾರಮ್ ಕಂಡು ಇವನೂ ಡ್ರೈವರ್ ಅಂದುಕೊಂಡ. ರೂಮ್ ನಂಬರ್ 24 ರಲ್ಲಿ ನಿಮ್ಮನ್ನ ಮೇಡಂ ಇಂಟರ್ವ್ಯೂ ಮಾಡ್ತಾರೆ .ನಿಮ್ಮದು ಊಟಾ ಆಯ್ತಾ ಇಲ್ಲದೇ ಹೋದರೆ ಮೇಡಂ ಜೊತೆಗೆ ರೂಮ್ ನಲ್ಲೇ ಮಾಡಿ. ನಾನು ಬೆಳಗ್ಗೆ ಆರು ಗಂಟೆಗೆ ಬಂದು ನಿಮ್ಮನ್ನ pick ಮಾಡ್ತೀನಿ. ನನ್ನ ನಂಬರ್ ತೊಗೋಳಿ ಅಂತ ಕೊಟ್ಟು ಹೊರಟು ಹೋದ.


ಶೇಖರ್ ಗೆ ಒಂದು ನಿಮಿಷ ಏನಿದು ಮೇಡಂ ಅಂತಾರೆ ಇಂಟರ್ವ್ಯೂ ಅಂತಾರೆ ಮೇಡಂ ಜೊತೆಗೆ ಊಟ ಮಾಡಿ ಅಂತಾರೆ ಬೆಳಗ್ಗೆ ಬಂದು pick ಮಾಡ್ತೀನಿ ಅಂತಾರೆ . Room ಬೇರೆ book ಮಾಡಿದಾರೆ. ಒಂದೂ ಅರ್ಥ ಆಗಲ್ಲವಲ್ಲ ಅಂತ ತಲೆ ಬಿಸಿ ಆಯ್ತು. ಆಗ ಅಲ್ಲಿಗೆ ಸುಮಾರು ನಲವತ್ತು ವರ್ಷ ವಯಸ್ಸಿನ ಹೆಂಗಸು ಬಂದು ಹಾಯ್ ನಿಮ್ಮ ಹೆಸರು ಶೇಖರ್ ತಾನೇ ಬನ್ನಿ .ನಾನು ನಿಮ್ಮ ಹತ್ತಿರ ಮಾತನಾಡೋದಿದೆ .ಲೇಟಾಯ್ತು ಮೊದಲು ಊಟ ಆರ್ಡರ್ ಮಾಡ್ತೀನಿ ಅಂತ bell ಮಾಡಿ ದರು . Room boy ಬಂದ . ಎರಡು regular ಅಂದರು.ಅರ್ಧ ಗಂಟೆಗೆ ಎರಡು ಊಟ ಬಂತು .ಅಲ್ಲಿ ಯವರೆಗೂ ಶೇಖರ್ ಬಗ್ಗೆ ಎಲ್ಲಾ ಕೇಳಿ ವಿಚಾರಿಸಿದ್ದರು.


ನಗುನಗುತಾನೇ ತನ್ನ ಬಗ್ಗೆ ಎಲ್ಲಾ ಹೇಳಿಕೊಂಡ. ಊಟ ಮಾಡಿದ ಮೇಲೆ hot, cold ಏನು ಬೇಕು ಅಂದರು .

ಶೇಖರ್ ನನಗೆ ಏನೂ ಬೇಡ ಅಂದ. ಈ ಹೆಂಗಸು ಅವನು ತಂದಿದ್ದ drinks ನ ನಿಧಾನವಾಗಿ ಕುಡಿದರು . ಆಗ ಲೂ ಫೋನ್ ಕರೆಗಳು ಬರ್ತಾನೇ ಇತ್ತು.switch off  ಮಾಡಿ ,ಶೇಖರ್ ಇವತ್ತು ನಿಮ್ಮ interview mostly ಆಗಲ್ಲ ಲೇಟಾ late ಆಯ್ತು. ನಾಳೆ ನೋಡೋಣ ಇಲ್ಲೇ ಮಲಗಿ ಬೆಳಗ್ಗೆ ಹೋಗಿ. ತೊಗೋಳಿ ಇವತ್ತಿನದು ಅಂತ ಐದು ಸಾವಿರ ಎಣಿಸಿ ಕೊಟ್ಟು ತೂರಾಡ್ತಾ ಹೋಗಿ ಪಕ್ಕದಲ್ಲಿ ಇದ್ದ ಹಾಸಿಗೆಯ ಮೇಲೆ ದೊಪ್ ಅಂತ ಬಿದ್ದರು.


ಏನಿದು ಹೆಂಗಸರೂ ಕುಡಿದು ನಾನು ಒಬ್ಬ ಒಳಗೆ ಇರೋವಾಗಲೇ ಹೀಗೆ ಧೈರ್ಯ ವಾಗಿ ಮಲಗಿ ಕೊಳ್ಳೋ ದು ಎಲ್ಲಾ ಕನಸಿನ ರೀತಿ ಇದೆ. ಜೊತೆಗೆ ಐದು ಸಾವಿರ ರೂಪಾಯಿ ಬೇರೆ ಏಕೆ ಕೊಟ್ಟರು .ಕೇಳೋಣ ಅನ್ನೊ ಅಷ್ಟರಲ್ಲಿ ತೂರಾಡ್ತಾ ಇದಾರೆ ಏನ್ಮಾಡೋದು ಅಂತ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿಗೆ ಶೇಖರ್ ಗೂ ತಲೆ ಭಾರ ಕಣ್ಣು ಮಂಜು ಮಂಜಾಗ್ತಿದೆ. ಹಾಗೇ ಇವನೂ ಹೋಗಿ ಪಕ್ಕದಲ್ಲಿ ಬಿದ್ದ.


ಹೈದರಾಬಾದ್ ನ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಕೆಲವು ಹುಡುಗರು ಅವರ ಮನೆಯವರು ಅಷ್ಟು ಅನುಕೂಲಸ್ಥ ರಲ್ಲದಿದ್ದರೂ ಹಾಸ್ಟೆಲ್ ನಿಂದ ರಾತ್ರಿ ಹೊತ್ತು ಕದ್ದು ಮು ಚ್ಚಿ ಹೊರ ಹೋಗಿ ದಿನಕ್ಕೆ ಹತ್ತು ಸಾವಿರದಿಂಧ ಇಪ್ಪತ್ತು ಸಾವಿರ ರೂಪಾಯಿವರೆಗೂ ಸಂಪಾದನೆ ಮಾಡ್ತಾರೆ ಅಂತ ಕೆಲವರು ಹೆಳುತ್ತಿದ್ದುದು ದೊಡ್ಡ ಸುದ್ದಿಯಾಗಿ ಇದು ಪೋಲೀಸರಿಗೂ ಗೊತ್ತಾಗಿ ಏನೂ ಮಾಡಲು ಸಾಧ್ಯವಿರಲಿಲ್ಲ . ಕಾರಣ ಇದು ಎಲ್ಲಾ ದೊಡ್ಡ ಮನುಷ್ಯರ ಹಾಗೂ ಅವರ ಪತ್ನಿಯರ ಕರಾಳ ದಂಧೆ. ಐಷಾರಾಮಿ ಹೋಟಲ್ ಗಳಲ್ಲಿ ರೂಮ್ ಬುಕ್ ಮಾಡಿ ಕಾಲೇಜು ಹುಡುಗರನ್ನು ಅವರ ಮನಬಂದಂತೆ ಉಪಯೋಗಿಸಿ ಕೊಂಡು ಕೈತುಂಬಾ ದುಡ್ಡು ಕೊಡೋದು. ಇದರ ಬಗ್ಗೆ "ಕಾಲ್ ಬಾಯ್" ಅನ್ನುವ ಹೆಸರಲ್ಲಿ ಸಿನಿಮಾ ಸಹಾ ಮಾಡಿದ್ದಾರಂತೆ.ಅನೇಕ ಅಮಾಯಕ ಮುಗ್ಧ ವಿಧ್ಯಾರ್ಥಿ ಗಳು ಬಲಿಯಾಗಿದ್ದಾರಂತೆ.ಆದರೆ ಹಣದ ಆಸೆಗೆ ಬಿದ್ದು ಯಾರಲ್ಲೂ ಹೇಳಿಕೊಳ್ಳುವುದಿಲ್ಲವಂತೆ.



Rate this content
Log in

Similar kannada story from Abstract