Gireesh pm Giree

Abstract Drama Inspirational

4.0  

Gireesh pm Giree

Abstract Drama Inspirational

ಜೀವನ ನೌಕೆ

ಜೀವನ ನೌಕೆ

1 min
218


ಜೀವನ ಎನ್ನುವುದು ಹಗಲು ರಾತ್ರಿ ಇದ್ದ ಹಾಗೆ. ಇಲ್ಲಿ ಬೆಳಕೆಂಬ ನಗುವು, ಇರುಳೆಂಬ ಭಯವು ಎದರಾಗುವುದು ಸಹಜ. ಈ ಜಗದಲ್ಲಿ ಅತ್ತಾಗ ಒರೆಸೋ ಕೈಗಳಿಗಿಂತ ಪರಸ್ಪರ ಬಡೆದಾಡುವ ಕೈಗಳೇ ಜಾಸ್ತಿ. ನೋವಲ್ಲಿ ಸ್ಪಂದಿಸುವ ಮನಸ್ಸಿಗಿಂತ ನಲಿವಲ್ಲಿ ಜೊತೆ ಸೇರಿ ಪಾರ್ಟಿ ಮಾಡುವ ಮೋಜುಗಾರೇ ತುಸು ಹೇರಳ. ಬಿದ್ದಾಗ ಎತ್ತದೆ ಅವನ ತುಳಿಯಲು ಕೂಡ ಹೇಸದ ಜನರು. ಅರಳು ಮರಳು ಮಾತುಗಳನ್ನು ಆಡಿ ಮರಳು ಮಾಡುವುದು . ಬಣ್ಣ ಬಣ್ಣದ ಮುಖವಾಡ ಧರಿಸಿ ನಂಬಿಕೆಯೆಂಬ ಚೆಂಡನ್ನು ಅವರ ಅಂಗಳದಲ್ಲಿ ಬೇಕಾದ ರೀತಿ ಆಡಿಸುವರು. ನಾವು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತೇವೆ. ಪ್ರೀತಿ ಎಂಬ ಪಗಡೆ ಆಟವಾಡಿ "ನಾನು ನಿನ್ನನ್ನು ಪ್ರೀತಿ ಮಾಡುವೆ" ಎನ್ನುವವಳೆ ಕೊನೆಗೆ ಹೆಚ್ಚಿನ ಸಂದರ್ಭದಲ್ಲಿ ಮೋಸ ಮಾಡಿ "ನೀನ್ಯಾರು"? ಎಂದು ಕೇಳಿದ ಉದಾಹರಣೆ ಕೂಡ ಇದೆ. ಇದುವೇ ನಾವಿರುವ ಜಗತ್ತು. ಜಗದ ಮಾಯೆ ತಿಳಿಯುವಷ್ಟರಲ್ಲಿ ಎಷ್ಟೋ ಜನರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಅದಾಗಲೇ ಕಳೆದುಕೊಂಡಿರುತ್ತಾರೆ. ಇನ್ನುಳಿದ ಜೀವನವನ್ನು ಹಳೇ ನೆನಪಲಿ ಕಳೆಯುತ್ತಾರೆ .

  ಎಷ್ಟೋ ಬಾರಿ ಮನಸ್ಸಿನಲ್ಲಿ ಅಂದುಕೊಂಡದ್ದು ಇದೆ. ಈ ನಾಲ್ಕು ದಿನ ಜೀವಿಸುವ ನಾವು ಅಹಂಕಾರ ಅಂಧಕಾರದಲ್ಲಿ ಕಳೆಯಬೇಕಾ? ಮೋಸ ವಂಚನೆ ಮಾಡಿ ಮತ್ತೊಬ್ಬರ ಜೀವನದ ಹಳಿಯ ತಪ್ಪಿಸಬೇಕ?. ಬದಲು ಉಪಕಾರ ಮಾಡದಿದ್ರು ಕಡೇ ಪಕ್ಷ ಉಪದ್ರ ಮಾಡದೇ ಇರಬಹುದಲ್ಲ. ಏಳುಬೀಳಂಬ ಈ ಬಾಳಿನ ಸುತ್ತ ನೋವು ನಲಿವೆಂಬ ಹುತ್ತ ಎಲ್ಲರ ಬಾಳಲ್ಲೂ ಇರುವಾಗ ನಾನೇ ಎನ್ನುವುದೇಕೆ?. ನಾನೇ ಶ್ರೇಷ್ಠ ಎನ್ನುವ ಬದಲು ನಾವೆಲ್ಲರೂ ಶ್ರೇಷ್ಠ ಎನ್ನುವುದು ಒಳಿತು. ಯಾಕೆಂದರೆ ನಾ ಎನ್ನುವ ಸ್ವಾರ್ಥ ನಮ್ಮ ತಲೆಯ ಕೆಡಿಸಿದರೆ ನಾವೆಂಬ ಮನೋಭಾವ ಐಕ್ಯತೆಯನ್ನು ಪಸರಿಸುತ್ತದೆ.

   ಬದುಕಲಿ ಬರುವ ಯಾವ ಕಷ್ಟಗಳು ದೊಡ್ಡದಲ್ಲ. ಬದಲಾಗಿ ಅದನ್ನು ಸರಿಯಾದ ಬಾಣವೆಂಬ ಜ್ಞಾನವನ್ನು ಹೂಡಿ ಎದುರಾದ ಸಂಕಟವನ್ನು ಜಯಿಸಬೇಕು. ಸೋತೆ ಎಂದು ಕುಗ್ಗದೆ ಗೆದ್ದೆ ಎಂದು ಹಿಗ್ಗದೆ ನೋವಿಗೂ ಬಗ್ಗದೆ ಇರಬೇಕು ಎಲ್ಲರೊಂದಿಗೆ ನೀನು. ಬಿದ್ದಾಗ ನಕ್ಕವರೆದರು ಒಮ್ಮೆ ಎದ್ದು ನಕ್ಕು ಬಿಡು ಆಗ ಅವರು ನಿನ್ನ ನೋಡಿ ಸುಮ್ಮನಾಗುತ್ತಾರೆ. 


Rate this content
Log in

Similar kannada story from Abstract