Kalpana Nath

Abstract Children Stories Inspirational

1.5  

Kalpana Nath

Abstract Children Stories Inspirational

ಜಗವನ್ನೇ ಬೆಳಗಿದ ಬಾಲಕ

ಜಗವನ್ನೇ ಬೆಳಗಿದ ಬಾಲಕ

1 min
33


 


ತಂದೆ ಇಲ್ಲದ ಒಬ್ಬ ಹುಡುಗ ಶಾಲೆಯಿಂದ ಮನೆಗೆ ಬಂದವನೇ ತಾಯಿಗೆ ಅವನ ಶಾಲೆಯ ಮುಖ್ಯೋಪಾದ್ಯಾಯರು ಕೊಟ್ಟಿದ್ದ ಒಂದು ಪತ್ರವನ್ನ ತೋರಿಸಿದ. ತಾಯಿಗೆ ಓದಿದ ತಕ್ಷಣ ದಿಗ್ಭ್ರಮೆ ಆಯ್ತು. ಪತ್ರದಲ್ಲಿ ನಿಮ್ಮ ಮಗ ಈ ಶಾಲೆಯಲ್ಲಿ ಮುಂದುವರೆಯುವುದು ಕಷ್ಟ. ಅವನ ಶ್ರವಣ ಶಕ್ತಿ ಬಹಳ ಕಡಿಮೆ. ಹತ್ತಿರದಿಂದ ಹೇಳಿದ್ದು ಮಾತ್ರ ಅವನಿಗೆ ಕೇಳುತ್ತೆ. ಇಲ್ಲೇ ನಾವು ವೈದ್ಯರಿಂದ ತಪಾಸಣೆ ಮಾಡಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಇವನಿಂದ ಬೇರೆ ಮಕ್ಕಳಿಗೂ ಓದಿನಲ್ಲಿ ಹಿನ್ನಡೆ ಆಗುವುದರಿಂದ ಇಂತಹವರಿಗಾಗಿಯೇ ಇರುವ ಬೇರೆ ಶಾಲೆಗೆ ಕಳುಹಿಸಲು ಶಿಫಾರಸು ಮಾಡುತ್ತೇವೆ. ಇವನ ಮುಂದುವರಿಕೆ ಇಲ್ಲಿ ಅಸಾಧ್ಯ. ತಾಯಿ ಒಂದು ನಿರ್ಧಾರಕ್ಕೆ ಬಂದು ತಾನೇ ಮಗನಿಗೆ ಮನೆಯಲ್ಲಿ ಹೇಳಿಕೊಡಲು ಪ್ರಾರಂಭ ಮಾಡಿದಳು.    ಮಗನಿಗಾಗಿಯೇ ತಾನು ಹೆಚ್ಚು ಪುಸ್ತಕಗಳನ್ನು ಓದಿ ಪಾಠ ಮಾಡುತ್ತಿದ್ದಳು. ಅವನ ಜ್ಞಾಪಕ ಶಕ್ತಿ ಮತ್ತು ಕುತೂಹಲದ ಪ್ರಶ್ನೆಗಳು ಅವಳನ್ನ ಬೆರಗು ಗೊಳಿಸಿತು. ಒಂದು ದಿನ ಇಡೀ ಪ್ರಪಂಚವೇ ಮರೆಯಲಾಗದ ದೊಡ್ಡ ವಿಜ್ಞಾನಿಯಾದ. ಆ ಬಾಲಕನೇ ಜಗತ್ತಿಗೆ ಬೆಳಕು ಕೊಟ್ಟ ಅಮೆರಿಕಾದ ವಿಜ್ಞಾನಿ "ಥಾಮಸ್ ಅಲ್ವಾ ಎಡಿಸನ್ "


Rate this content
Log in

Similar kannada story from Abstract