nagavara murali

Comedy Crime Others

3  

nagavara murali

Comedy Crime Others

ಹೀಗೂ ಕಾಡಿತ್ತು ಮಾಯೆ

ಹೀಗೂ ಕಾಡಿತ್ತು ಮಾಯೆ

1 min
225



ಹೆಲ್ಮೆಟ್ ಇಲ್ಲ ಅಂಥ ಪೋಲಿಸ್ ನಿಲ್ಲಿಸಿದಾಗ. ಸಾರ್ ಇಲ್ಲೇ ಪಕ್ಷದ ಹೋಟಲ್ ನಲ್ಲಿ ಕಾಫಿ ಕುಡಿದೆ . ಅಲ್ಲೇ ಬಿಟ್ಟಿದೀನಿ ತರಕ್ಕೆ ಹೋಗ್ತಾ ಇದೀನಿ .ನಂಬದೆ ಇದ್ದರೆ ಗಾಡಿ ಇಲ್ಲೇ ಬಿಟ್ಟು ಹೋಗಿ ತರತೀನಿ ಅಂದ. ನೀನು ಏನು ಹೇಳ್ತಾ ಇದೀ ಅಂತ ಅರ್ಥ ಆಗಲ್ಲ ಮಾಸ್ಕ್ ತೆಗೆದು ಹೇಳು ಅಂದರು .ಇದನ್ನ ಮತ್ತೊಬ್ಬ ವೀಡಿಯೋ ಮಾಡ್ತಿದ್ದ. ಮಾಸ್ಕ್ ತೆಗೆದು ಹೇಳಿದ. ಆರ್. ಸಿ ಬುಕ್ಕು, ಎಲ್ಲಾ ಸರಿ ಇತ್ತು .ಹೋಗಿ ಹೆಲ್ಮೆಟ್ ತರಲಾ ಅಂದ ಕೀ ಕೊಟ್ಟು ಹೋಗಿ ಬೇಗ ಬಾ ಅಂದ್ರು. ಓಡೋಡಿ ಹೋದ .ಅಲ್ಲಿ ಹೋಟಲ್ ನಲ್ಲಿ ಹೆಲ್ಮೆಟ್ ಇರಲಿಲ್ಲ. 

ಆಯ್ಯೋ ದೇವರೇ ಅಂತ ವಾಪಸ್ ಬಂದ .ಅಲ್ಲಿ ಪೋಲೀಸೂ ಇಲ್ಲ ಸ್ಕೂಟರೂ ಇಲ್ಲ. ಅಲ್ಲೇ ಇದ್ದ ಅಂಗಡಿಯವರನ್ನ ಕೇಳಿ ದ .ಅವರು ಅಲ್ಲೇ ಕಾಣೋ ಪೋಲೀಸ್ ಸ್ಟೇಷನ್ ನಲ್ಲಿ ಕೇಳಿ ಅಂದರು. ಅಲ್ಲಿ ಗೆ ಹೋದ್ರೆ ಹೇಳಿದ್ರು ಅದು ನಮ್ಮ ಸರಹದ್ದಿಗೆ ಬರಲ್ಲ .ರಸ್ತೆಗೆ ಆ ಕಡೆ ಆದರೆ ಮಾರ್ಕೆಟ್ ಸ್ಟೇಷನ್ ಅಂದ ರು .ಆಟೋ ಹಿಡಿದು ಅಲ್ಲಿಗೆ ಹೋದ. ಅಲ್ಲಿ ಇದು ಕ್ರೈಮ್ ಬ್ರಾಂಚ್ . ನೀವು ಎ ಸಿ ಪಿ ಟ್ರಾಫಿಕ್ ಅವರ ಕಛೇರಿ ಯಲ್ಲಿ ಕೇಳಿ ಅಂದಾಗ ವಿಧಿ ಇಲ್ಲದೆ ಮತ್ತೆ ಆಟೋ ಹಿಡಿದು ಅಲ್ಲಿಗೆ ಬಂದ .ಅಲ್ಲಿ ಕೇಳಿದ್ದಕ್ಕೆ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದರೆ ಅದನ್ನ ತಂದು ಅಲ್ಲಿ ಇನ್ಸ್ಪೆಕ್ಟರ್ ಒಬ್ಬರು ಸ್ಕೂಲ್ ಫೀಲ್ಡ್ ನಲ್ಲಿ ಇಟ್ಟು ಕೊಂಡಿರ್ತಾರೆ ದುಡ್ಡು ಕೊಟ್ಟು ತೊಗೊಂಡು ಹೋಗಿ ಇಲ್ಲಾ ಅಂದರೆ ಕೋರ್ಟ್ ಗೆ ಹೋಗಿ ಬಿಡಿಸಿ ಕೊಳ್ಳ ಬೇಕು ಅಂದಾಗ, ಸಾರ್ ಏನನ್ಯಾಯ ಸಾರ್ ಇದು ಅಂತ ಅಲ್ಲಿಗೆ ಹೋದರೆ ಅವರು ಹೆಲ್ಮೆಟ್ ಇಲ್ಲದೆ ಗಾಡಿ ಓಡ್ಸಿ, ಮಾಸ್ಕ್ ಹಾಕ್ಕೊಳ್ದೆ ಮಾತಾಡಿ , ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿ, ಹೆಲ್ಮೆಟ್ ತರ್ತೀನಿ ಅಂತ ಸುಳ್ಳು ಹೇಳಿ ನಮ್ಮ ಅಮೂಲ್ಯ ಸಮಯ ಹಾಳು ಮಾಡಿದ್ದೇ ಅಲ್ಲದೆ ವಾದ ಮಾಡಿರೋದು ಎಲ್ಲಾ ರೆಕಾರ್ಡ್ ಆಗಿದೆ ಅಂತ ಹೇಳಿದಾಗ ಕೇಳಿ ಅಲ್ಲೇ ತಲೆ ತಿರುಗಿ ಬಿದ್ದ ಪಾಪ. 



Rate this content
Log in

Similar kannada story from Comedy