Kalpana Nath

Tragedy Others


4  

Kalpana Nath

Tragedy Others


ಹೀಗೊಬ್ಬ ತಂದೆ

ಹೀಗೊಬ್ಬ ತಂದೆ

4 mins 176 4 mins 176


ಯಶೋದ ಹೆಚ್ಚು ಓದಿದವಳಲ್ಲ. ಮನೆಯಲ್ಲಿ ವಯಸ್ಸಾದ ತಂದೆ ತಾಯಿ ತಂಗಿ ಒಬ್ಬ ಅಣ್ಣ. ಯಶೋದಳಿಗೆ ಮದುವೆ ಆಗುವ ಆಸೆ ಇರಲಿಲ್ಲ. ಅದಕ್ಕೆ ಕಾರಣ ಅವಳಲ್ಲಿ ಇದ್ದ ಸಣ್ಣ ನ್ಯೂನತೆ. ಹಲವಾರು ಮನೋ ವೈದ್ಯರು ನೋಡಿ ಮದುವೆ ಆದರೆ ಎಲ್ಲಾ ಸರಿ ಹೋಗುತ್ತೆ ಅಂತ ಹೇಳಿದರು.ಆದರೆ ಮದುವೆ ಆಗಲು ಭಯ. ಹೀಗಿರು ವಾಗ ಮದುವೆ ಬ್ರೋಕರ್ ಒಬ್ಬರು, ಒಬ್ಬ ಹುಡುಗನಿಗೆ ಎಲ್ಲಾ ತಿಳಿಸಿದ್ದೇನೆ ಅವನೂ ಒಪ್ಪಿದ್ದಾನೆ ಅವನಿಗೆ ಖಾಸಗಿಯಾಗಿ ಒಂದು ಉದ್ಯಮ ದಲ್ಲಿ ಪಾಲುದಾರ ನಿಂದ ಸ್ವಲ್ಪ ನಷ್ಟ ಆಗಿದೆ ಅದನ್ನೇ ದೊಡ್ಡ ಮಟ್ಟದಲ್ಲಿ ಉದ್ಯಮ ತಾನೇ ಮುಂದು ವರೆಸಿಕೊಂಡು ಹೋಗಲು ಈಗ ಹಣದ ಅವಶ್ಯಕತೆ ಇದೆ .ಮದುವೆ ಬೇಕಾದರೂ ಒಂದು ದೇವಸ್ಥಾನದಲ್ಲಿ ಸಿಂಪಲ್ ಆಗಿ ಮಾಡಿ ಕೊಡಿ , ಆದರೆ ಅದೇ ಹಣ ಕೊಟ್ಟು ಅವನ ಬಿಸಿನೆಸ್ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಹಾಯ ಮಾಡಿದರೆ ನಿಮ್ಮ ಮಗಳು ಚೆನ್ನಾಗಿ ಇರುತ್ತಾಳೆ ಎಂದಾಗ ಒಪ್ಪಿ ಅವರು ಹೇಳಿದಂತೆ ಮದುವೆಯೂ ಆಯಿತು. ಅಳಿಯ ಹೇಳೋ ದೆಲ್ಲ ಬರೀ ಸುಳ್ಳು ,ಕೆಟ್ಟ ಸಹವಾಸಗಳಿಂದ ಎಲ್ಲಾ ದುರಭ್ಯಾಸಗಳೂ ಜೊತೆಗೆ ಇರೋದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲಹೆತ್ತವರಿಗೆ. ಎಲ್ಲಾ ಹಣ ಕಳೆದು ಕೊಂಡು ಬರಿಗೈಲಿ ಬಂದು ನಿಂತಾಗ ಮಗಳ ಮುಖ ನೋಡಿ ಇದ್ದ ಒಂದು ಖಾಲಿ ಸೈಟ್ ನಲ್ಲಿ ಮನೆ ಕಟ್ಟಿ ಕೊಟ್ಟು ಅದನ್ನು ಅವಳ ಹೆಸರಿಗೆ ಬರೆದು ಕೊಟ್ಟರು. ಅವರಿಗೆ ಎರಡು ವರ್ಷಗಳಲ್ಲಿ ಒಂದು ಹೆಣ್ಣು ಮಗು ಆಯಿತು. ಅಪ್ಪ ಅಮ್ಮ ಹೋದಮೇಲೆ ಮನೆ ಮಾರು ವುದನ್ನ ಬಿಟ್ಟು ಬೇರೆ ದಾರಿ ಇಲ್ಲದೆ ಅದನ್ನೂ ಮಾರಿದರು. ಬಂದ ಹಣದಲ್ಲಿ ,ಗಂಡ ಅದನ್ನೂ ಹಾಳು ಮಾಡುವ ಭಯದಿಂದ ಮತ್ತೊಂದು ಮನೆ ತೆಗೆದು ಕೊಂಡು ಹೇಗೋ ಜೀವನ ಸಾಗಿಸಿ ಮಗಳನ್ನು SSLC ವರೆಗೂ ಕಷ್ಟ ಪಟ್ಟು ಓದಿಸಿದಳು ಯಶೋದ . ಮಗಳು ಬುದ್ದಿ ವಂತೆ ಅತಿ ಹೆಚ್ಚು ಅಂಕ ಪಡೆದರೂ ಮುಂದೆ ಓದಲು ಸಾಧ್ಯವಾಗದಿದ್ದಾಗ ಇವಳಿಗೆ ಮನೆಯ ಹತ್ತಿರ ಇದ್ದ ಖಾಸಗಿ ಕಂಪನಿಯಲ್ಲಿ ಒಬ್ಬರು ಕೆಲಸ ಕೊಟ್ಟರು. ಎರಡು ಮೂರು ವರ್ಷಗಳು ಕಳೆದಾಗ. ಮಗಳಿಗೆ ಹೇಗಾದರೂ ಮದುವೆ ಮಾಡಿ ಬಿಡಬೇಕೆಂದು ಯಶೋದಳ ಯೋಚ ನೆ .ಆದರೆ ಈಗಲೇ ಸಂಪಾದನೆ ಮಾಡಲು ಶುರು ಮಾಡಿ ದ್ದಾಳೆ ಮದುವೆ ಮಾಡಿ ಕೋಂಡು ಹೊರಟು ಹೋದರೆ ನಮ್ಮ ಗತಿ ಏನು , ಕೆಲವು ವರ್ಷಗಳ ಆದ ಮೇಲೆ ನೋ ಡೋಣ ಅಂತ ತಂದೆ. ಗಂಡನ ಮಾತು ಕೇಳದೆ ಅವರ ರಿವರ ಸಹಾಯದಿಂದ ವಯಸ್ಸಿಗೆ ಬಂದ ಹುಡುಗಿಯನ್ನ ಮನೆಯಲ್ಲಿ ಇಟ್ಟು ಕೊಳ್ಳೋದು ಬೆಂಕಿಯನ್ನ ಸೆರಗಿನಲ್ಲಿ ಕಟ್ಟಿ ಕೊಳ್ಳೋದು ಎರಡೂ ಒಂದೇ ನಮಗೆ ಕಷ್ಟ ಆದ ರೂ ಚಿಂತೆ ಇಲ್ಲ ಹೇಗಾದರೂ ಮದುವೆ ಮಾಡಿ ಬಿಡೋ ಣವೆಂದು ಯೋಚನೆ ಮಾಡುತ್ತಿದ್ದಾಗ , ತಾವಾಗಿಯೇ ಬಂದ ಯಾರೋ, ನೀವು ಮದುವೆಗೆ ಒಪ್ಪಿಗೆ ಕೊಟ್ಟರೆ ಸಾಕು ನಿಮ್ಮ ಪರಿಸ್ಥಿತಿ ನಮಗೆ ತಿಳಿದಿದೆ ನೀವೇನೂ ಖರ್ಚು ಮಾಡಬೇಡಿ ಎಲ್ಲಾ ನಾವೇ ಮಾಡ್ತೀವಿ ಅಂತ ಹೇಳಿದಾಗ ಗಂಡ ಒಪ್ಪದಿದ್ದರೂ,ಮದುವೆ ಮಾಡಿ ಕೊಟ್ಟಳು ಯಶೋದ.. ಮಗಳ ಅದ್ರುಷ್ಟ ಚೆನ್ನಾಗಿ ಇತ್ತು. ಅತ್ತೆ ಮಾವ ಒಳ್ಳೆಯವರೇ ಆಗಿದ್ದರು. ಇಬ್ಬರು ಮಕ್ಕಳು ಹುಟ್ಟಿ ಅವರ ವಿಧ್ಯಾಭ್ಯಾಸ ಮನೆ ಜವಾಬ್ದಾರಿ ಎಲ್ಲವ ನ್ನೂ ನಿಭಾಯಿಸಿ ತಂದೆ ತಾಯಿಗೂ ಪ್ರತಿ ತಿಂಗಳು ಹಣ ಮತ್ತು ದಿನಸಿ ಸಾಮಾನು ಕಳುಹಿಸಿ ಸಹಾಯ ಮಾಡುತ್ತಿ ಳು ಮಗಳು. ಕೆಲವು ವರ್ಷಗಳ ನಂತರ ಅಳಿಯ ತನ್ನ ಹೆಸರಲ್ಲಿ ಇದ್ದ ಒಂದು ನಿವೇಶನದಲ್ಲಿ ಮನೆ ಕಟ್ಟಲು ಯೋಚನೆ ಮಾಡಿ, ಅತ್ತೆ ಮಾವನಿಗೆ ನೀವು ಇಬ್ಬರೇ ಆ ಮನೆಯಲ್ಲಿ ಇರೋದು ಬೇಡ ಅದನ್ನುಮಾರಿಬಿಡಿ .ಬಂದ ಹಣ ಕೊಡಿ ನಿಮಗೆ ನಮ್ಮ ಮನೆಯ ಮೇಲೆ ನಿಮ್ಮಿಬ್ಬರಿ ಗೂ ಅನುಕೂಲವಾಗುವ ಹಾಗೆ ಕಟ್ಟಿ ಕೊಡ್ತೀವಿ ಅಂದಾಗ ಅರ್ಧ ಹಣ ಕೊಡ್ತೀವಿ ಉಳಿದ ಅರ್ಧ ಬ್ಯಾಂಕ್ ನಲ್ಲಿ ಇಟ್ಟು ಬರುವ ಬಡ್ಡಿಯಲ್ಲಿ ಹೇಗೋ ಜೀವನ ಮಾಡ್ತೀವಿ ಮದುವೆ ಆದಮೇಲೂ ಮಗಳನ್ನು ಕೇಳಕ್ಕೆ. ನಮಗೂ ಕಷ್ಟ ಆಗತ್ತೆ ಅಂದರಳು..ಅದಕ್ಕೂ ಒಪ್ಪಿದರು. ಕಷ್ಟಕಾಲ ಕಳೆದು ಹೇಗೋ ಸುಖವಾಗಿ ಇದ್ದಾರೆ ಅಂತ ಮಗಳು ಅಳಿಯ ನೆಮ್ಮದಿ ಇಂದ ಇದ್ದಾಗ , ಬಡ್ಡಿ ಹಣ ಕೈಗೆ ಪ್ರತಿ ತಿಂಗಳು ಕೈ ಸೇರುತ್ತಿದ್ದಂತೆ ಹಿಂದೆ ಇದ್ದ ಎಲ್ಲಾ ಕೆಟ್ಟ ಹವ್ಯಾಸಗಳೂ ಮತ್ತೆ ತಂದೆಯ ಹಿಂದೆಯೇ ಬಂತು. ಹಣಕ್ಕಾಗಿ ಮಗಳನ್ನ ಹಿಂಸೆ ಮಾಡೋದು . ಮಗಳು ಕೆಲಸ ಮಾಡುವ ಕಂಪನಿ ಹತ್ತಿರ ಹೋಗಿ ಹಣ ಕೊಡು ಇಲ್ಲದಿದ್ದರೆ ನಿಮ್ಮ ಬಾಸ್ ಹತ್ತಿರ ನಿನ್ನ ವಿಷಯ ಬೇರೆ ರೀತಿ ಹೇಳಿ ನಿನ್ನ ಮಾನ ಹರಾಜು ಹಾಕ್ತೀನಿ ಅಂತ ಹೆದ ರಿಸಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲು ಮಾಡುತ್ತಿದ್ದ ತಂದೆ ಅನ್ನೊ ಈ ಪ್ರಾಣಿ. ಅಳಿಯನಿಗೆ ವಿಷಯ ತಿಳಿದಾಗ ಬಹಳ ನೊಂದು ಮನೆ ಖಾಲಿ ಮಾಡಿಸಿ ಅವರು ಮನೆ ಕಟ್ಟಲು ಕೊಟ್ಟ ಹಣವನ್ನೂ ವಾಪಸ್ ಕೊಟ್ಟು ಬಿಟ್ಟರು. ಅತ್ತೆಯನ್ನು ಮಾತ್ರ ಬೇರೊಂದು ಮನೆ ಮಾಡಿ ಅವರಿಗೆ ನೀವು ಎಲ್ಲಿ ಇದ್ದೀರೆಂದು ತಿಳಿಸಬೇಡಿ ನಿಮ್ಮ ಫೋನ್ ನಂಬರ್ ಸಹಾ ಕೊಡಬೇಡಿ ಅಂತ ಹೇಳಿದ್ದರು. ಆರು ತಿಂಗಳು ಹೀಗೆ ಕಳೆದಾಗ ಆ ತಂದೆ ಅನ್ನೋ ರಾಕ್ಷಸ ಮಗಳ ಮೇಲೆ ಪೋಲಿಸ್ ಕಂಪ್ಲೇಂಟ್ ಕೊಟ್ಟು ತಾಯಿ ಮಗಳು ನನ್ನ ಹತ್ತಿರ ಇದ್ದ ಹಣವನ್ನು ಕಸಿದು ಕೊಂಡು ಹೊಡೆದು ನನ್ನನ್ನು ಮನೆ ಇಂದ ಹೊರಗೆ ಹಾಕಿದ್ದಾರೆ .ರಸ್ತೆ ಪಕ್ಕದಲ್ಲಿ ಮಲಗುವ ಹಾಗೆ ಮಾಡಿದ್ದಾರೆ ಅಂತ ಹೇಳಿದ್ದಕ್ಕೆ ಅವರು ಎಷ್ಟಾದರೂ ಅವರು ನಿನ್ನ ತಂದೆ . ಪ್ರತಿ ತಿಂಗಳು ಅವರಿಗೆ ಹಣ ಕೊಡೋದು ನಿನ್ನ ಧರ್ಮ. ನಿನ್ನ ಆಫೀಸ್ ಹತ್ತಿರ ಬರದ ಹಾಗೆ ನಾವು ನೋ ಡ್ಕೊತೀ ವಿ ಅಂದಾಗ ವಿಧಿ ಇಲ್ಲದೆ ಮಗಳು ಒಪ್ಪಿಕೊಳ್ಳಬೇಕಾ ಯ್ತು. ಇದಾದ ಒಂದು ತಿಂಗಳಲ್ಲಿ ಎಲ್ಲಕಡೆ ಲಾಕ್ ಡೌನ್ ಆಗಿ ಯಾವುದೋ ದೇವಸ್ಥಾನದಲ್ಲಿ ಮಲಗುತ್ತಿದ್ದ ಇವನಿಗೆ ಭಯ ಶುರು ಆಯ್ತು. ಹೇಗಾದರೂ ಹೆಂಡತಿ ಇರೋ ಜಾಗ ಹುಡುಕಿ ಮನೆ ಸೇರಿ ಕೊಳ್ಳಬೇಕು ಅಂತ ಪ್ಲಾನ್ ಮಾಡಿ ಅವರು ಮೊದಲು ಇದ್ದ ಪಕ್ಕದ ಮನೆ ಯವರ ಹತ್ತಿರ ಹೋಗಿ ನನ್ನ ಹೆಂಡತಿ ಒಳ್ಳೆಯವಳು ಆದರೆ ನನ್ನ ಮಗಳಿಗೆ ನಾವು ಒಟ್ಟಿಗೆ ಇರೋದು ಇಷ್ಟ ಇಲ್ಲ ಅಂದಾಗ ನಿಜ ಹೇಳ್ತಿದಾನೆ ಅಂತ ತಿಳಿದು ಫೋನ್ ನಂಬರ್ ಕೊಟ್ಟು ಬಿಟ್ಟರು. ಯಶೋದಳಿಗೆ ಫೋನ್ ಮಾಡಿ ನನಗೆ ಭಯ ಆಗತ್ತೆ ಸ್ವಲ್ಪ ದಿನ ನಿನ್ನ ಜೊತೆ ಇರಲು ಅವಕಾಶ ಮಾಡಿಕೊಡು ಆಮೇಲೆ ಎಲ್ಲಾ ಸರಿ ಹೋದಮೇಲೆ ಹೊರಟು ಹೋಗ್ತೀನಿ ಅಂತ ಅತ್ತು ಗೋ ಳಾಡಿದ್ದಕ್ಕೆ ಯಶೋದ ತಾನಿದ್ದ ಮನೆ ವಿಳಾಸ ಕೊಟ್ಟು ಬರಲು ಹೇಳುವ ಮೊದಲು ಮಗಳಿಗೆ ವಿಷಯ ತಿಳಿಸಿದಾಗ ,ಸುಖ ಅನ್ನೋದು ನಿನ್ನ ಹಣೆಯಲ್ಲಿ ಬರೆದಿಲ್ಲ . ಕಷ್ಟ ದೂರ ಹೋಗ್ತೀನಿ ಅಂತ ಅಂದರೆ ನೀನೇ ಬೇಡ ಬಾ ಅಂತ ಕರೆದ ಹಾಗಾಯ್ತು, ನಿನ್ನ ಇಷ್ಟ ಅಂತ ಹೇಳಿ ಸುಮ್ಮನಾದಳು ಮಗಳು.

 ಹೀಗಿರುವಾಗ ಇವನು ಒಂದು ದಿನ ಬಾತ್ ರೂಮ್ ನಲ್ಲಿ ಜಾರಿ ಬಿದ್ದು ಬೆನ್ನು ಮೂಳೆ ಮುರಿದು ಆಸ್ಪತ್ರೆ ಸೇರಬೇಕಾಯ್ತು.ಹದಿನೈದು ದಿನ ಮಗ ಅಳಿಯ ಹೆಂಡತಿ ಮಾನವತಾ ಧ್ರುಷ್ಟಿಯಿಂದ ಹಣ ಖರ್ಚು ಮಾಡಿ, ಮನೆಯಿಂದಲೇ ಊಟ ತಿಂಡಿ ತಂದು ಕೊಟ್ಟು ಆರೈಕೆ ಮಾಡಿದರೂ ಮಗಳಿಗಾಗಲಿ ಅಳಿಯನಿಗಾಗಲಿ ಸಂತಸದ ಒಂದು ನಗುವಿಲ್ಲ ಇವನಿಂದ.

ಆಸ್ಪತ್ರೆಯಿಂದ ಮನೆಗೆ ಹೋಗುವ ಸಮಯಕ್ಕೆ ಸರಿಯಾ ಗಿ ಸರ್ಕಾರ ಇಷ್ಟು ದಿನ ಮುಚ್ಚಿಸಿದ್ದ ಸಾರಾಯಿ ಅಂಗಡಿ ಗಳು ತೆರೆದಿತ್ತು. ಯಶೋದಳಿಗೆ ಮತ್ತೆ ಕಷ್ಟ ಶುರುವಾ ಯ್ತು. ಹೊರಗೆ ಜನ ಓಡಾಡುತ್ತಿದ್ದಾರೆ ಕೋಲಿನ ಸಹಾ ಯದಿಂದ ನೀವೂ ಓಡಾಡ್ತಿದೀರಿ ಹೋಗಿ ಅಂದಾಗ ನಾನು ಹೋಗಲ್ಲ .ಬೇಕಾದರೆ ನೀನೇ ನಿನ್ನ ಮಗಳ ಮನೆಗೆ ಹೋಗು . ನಾನು ಈ ಮನೆ ಮಾಲೀಕರ ಹತ್ತಿರ ಆಗಲೇ ಮಾತನಾಡಿದ್ದೇನೆ ನಾನೇ ಇಲ್ಲಿ ಇರ್ತೀನಿ ಅಂದಾಗ ಹೆದರಿ ಮಗಳಿಗೆ ವಿಷಯ ತಿಳಿಸಿದಳು. ಆದರೆ ಮಗಳಿಂದ ಯಾವ ಉತ್ತರವೂ ಇಲ್ಲ. ಗಂಡ ಅಂತ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ತಪ್ಪಿಗೆ ಬೇರೆ ದಾರಿ ಕಾಣ ದೆ ಯಶೋದಳಿಗೆ ಆ.ಕಡೆ ಮಗಳೂ ದೂರ ಈ ಕಡೆ ಈ ರಾಕ್ಷಸ ನಿಂದಲೂ ತಪ್ಪದ ಕಿರುಕುಳ .ಜೀವನಪೂರ್ತಿ ಕಣ್ಣೀರಲ್ಲಿ ಕೈ ತೊಳೆಯುವುದು ತಪ್ಪದ ಯಶೋದಳ ಇಂದಿನ ಪರಿಸ್ಥಿತಿ .


Rate this content
Log in

More kannada story from Kalpana Nath

Similar kannada story from Tragedy