Vijayalaxmi C Allolli

Children Stories Comedy Drama

4  

Vijayalaxmi C Allolli

Children Stories Comedy Drama

ಏಲಿಯನ್

ಏಲಿಯನ್

1 min
368


ಮಕ್ಕಳು ಮತ್ತು ಗಂಡನ ಜೊತೆಗೆ ಚೀರಾಡುತ್ತಾ ಮನೆಗೆಲಸ ಮಾಡುವುದು ನಮ್ಮ ಸೂರಕ್ಕಳಿಗೆ ಸಾಕಾಗಿ ಹೋಗಿತ್ತು.ಬೆಳಗ್ಗೆ ಎದ್ದಾಗಿನಿಂದ, ರಾತ್ರಿ ಮಲಗುವವರೆಗೂ ವಿಶ್ರಾಂತಿ ಪಡೆಯದೆ ಮನೆ ಕೆಲಸ ಮಾಡಿದರೂ,"ನೀನು ಮನೆಯಲ್ಲೆ ಇರುವವಳು,ಏನು ಮಾಡ್ತಾ ಇದೀಯಾ"ಎಂದು ಮೂದಲಿಸುವ ಗಂಡನಿಂದ ಮತ್ತು ಪುಸ್ತಕ,ಆಟದ ಸಾಮಾನುಗಳನ್ನು ಹರವಿದಾಗ ಎತ್ತಿ ಇಡಿ ಎಂದು ಹೇಳಿದರೂ, ಮಕ್ಕಳು ಎತ್ತಿ ಇಡದೆ ಒಂಥರಾ ಕಾಟಾ ಕೊಡುವ ಮಕ್ಕಳಿಂದ ನಮ್ಮ ಸೂರಕ್ಕಗ ವಿಶ್ರಾಂತಿ ಬೇಕಾಗಿತ್ತು


ಹೀಗೆ ಒಂದು ದಿನ,'ಈ ಗಂಡ ಮತ್ತು ಮಕ್ಕಳನ್ನು ಬಿಟ್ಟು,ಬೇರೆ ಪ್ರಪಂಚಕ್ಕೆ ಹೋಗ ಬೇಕೆಂದು', ನಿರ್ಧಾರ ಮಾಡಿಯೇ ಬಿಟ್ಟಳು.

ಹಾಗೆ ಮನೆಯಿಂದ ಹೊರಟೆ ಬಿಟ್ಟಳು.ನಡೆದಳು,ಓಡಿದಳು,ಹಾಗೆ ಓಡುತ್ತಾ , ಓಡುತ್ತಾ ಸುಸ್ತಾಗಿ ಒಂದು ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಕುಳಿತಳು.ಸುಸ್ತಾಗಿದ್ದರಿಂದ ನಿದ್ದೆಗೂ ಜಾರಿದಳು.ಎಚ್ಚರವಾದಾಗ ಅವಳಿಗೆ ಬಾಯಾರಿಕೆಯಾಗಿತ್ತು.ನೀರು,ನೀರು ಎಂದಳು ಆಗ ಒಬ್ಬ ಬಂದು ,'ಇಲ್ಲಿ ನೀರು ಸಿಗಲ್ಲಾ ,ತಗೋ ಈ ಮಾತ್ರೆ,ಇದನ್ನ ತಗೊಂದ್ರೆ ನೀರು ಕುಡಿದ ಹಾಗೆ ಆಗುತ್ತೆ' ಅಂತಾ ಒಂದು ಮಾತ್ರೆಯನ್ನು ಕೊಟ್ಟ..ಅದನ್ನು ಕೈಯಲ್ಲಿ ಹಿಡಿದು,'ನೀನು ಯಾರು ಎಷ್ಟು ವಿಚಿತ್ರ ಇದಿಯಾ ನೀನು'ಎಂದು ಸೂರಕ್ಕಿ ಕೇಳಿದಳು.'ಹಾಂ ನಮ್ಮ ಜಾಗಕ್ಕೆ ಬಂದು ನನ್ನನ್ನೆ ಯಾರು?ಅಂತಾ ಕೇಳ್ತಿಯಾ?'ಎನ್ನುತ್ತಾ ನಾನು ಏಲಿಯನ್ ಇದು ನನ್ನ ಜಗತ್ತು.'ನೀನ್ಯಾಕೆ ಬಂದೆ ಇಲ್ಲಿ' ಎಂದು ಸೂರಕ್ಕಳಿಗೆ ಮರಳಿ ಕೇಳಿತು....'ಅಯ್ಯೋ!!!ಅದನ್ಯಾಕೆ ಕೇಳ್ತಿಯಾ ಏಲಿಯನ್....ಗಂಡ,ಮಕ್ಕಳಿಗೆ ಮಾಡಿ ಮಾಡಿ ಸಾಕಾಗಿ ವಿಶ್ರಾಂತಿ ಹುಡುಕುತ್ತಾ ಬಂದು ನಿನ್ನ ಲೋಕಕ್ಕೆ ಬಂದಬಿಟ್ಟೆ'ಎಂದಳು ಸೂರಕ್ಕ....

'ಅಯ್ಯೋ ಸೂರಕ್ಕ,ನಿನಗೆ ಮಾತ್ರ ಅಲ್ಲಾ ನನಗೂ ಹಾಗೆ ಆಗಿದೆ'ಎಂದಿತು ಆ ಹೆಣ್ಣು ಏಲಿಯನ್...

ಅಷ್ಟರಲ್ಲಿ ಮಕ್ಕಳು ಬಂದು,ಅಮ್ಮಾ ಏಳು.ಶಾಲೆಗೆ ಹೋತ್ತಾಗುತ್ತೆ ಎಂದು ಏಳು ಗಂಟೆಯಾದರು ಏಳದ ಅಮ್ಮನನ್ನು ಎಬ್ಬಿಸಿದರು ಸೂರಕ್ಕನ ಮಕ್ಕಳು.

'ಇವು ಮುಗಿಯದ ಕಥೆ ಎಂದು' ನಿತ್ಯದ ದಿನಚರಿ ಪ್ರಾರಂಭಿಸಿದಳು ಸೂರಕ್ಕ...


Rate this content
Log in