Shridevi Patil

Drama Inspirational Others

4  

Shridevi Patil

Drama Inspirational Others

ದೂರದ ದರ್ಶನ.

ದೂರದ ದರ್ಶನ.

1 min
471


ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ.

ದೂರದರ್ಶನ. 


ಈ ದೂರದರ್ಶನ ಎನ್ನುವ ಮಾಯೆ ಒಮ್ಮೆ ನಮ್ಮೊಳಗೆ ಮನೆ ಮಾಡಿದರೆ ಸಾಕು , ಅದು ನಮ್ಮನ್ನು ಕುಂತಲ್ಲಿ ಕೂರಲಾರದೆ , ನಿಂತಲ್ಲಿ ನಿಲ್ಲಲಾಗದೆ , ಸದಾ ಆ ದೂರದರ್ಶನದ ಮುಂದೆಯೇ ಇರುವಂತೆ ಮಾಡುತ್ತದೆ. ಒಬ್ಬರೇ ಇದ್ದಾಗ ಜೊತೆಗಾತಿಯ ಹಾಗೆ ಈ ದೂರದರ್ಶನ ಕೆಲಸ ಮಾಡುತ್ತದೆ. ಆದರೆ ಒಮ್ಮೊಮ್ಮೆ ನಮ್ಮ ಸಮಯವನ್ನು ಹಾಳು ಮಾಡುವಲ್ಲಿ ಈ ದೂರದರ್ಶನ ಕೆಲಸ ಮಾಡುತ್ತದೆ. 


ಮಾಯಾ ಮತ್ತು ಮಾಲಾ ಅಕ್ಕ ತಂಗಿಯರು. ಇಬ್ಬರು ಅವಳಿ ಮಕ್ಕಳು. ಓದುವುದರಲ್ಲಿ , ನಯ ವಿನಯದಲ್ಲಿ , ಕೆಲಸ ಮಾಡುವುದರಲ್ಲಿ ಸದಾ ಮೇಲುಗೈ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ತೀರ ಹೇಳಿಕೊಳ್ಳುವಂತೆಯೂ ಅಲ್ಲ , ತೀರ ಕಡು ಬಡವರೂ ಅಲ್ಲ. ಒಂತರಾ ಮಧ್ಯಮ ವರ್ಗದ ಕುಟುಂಬದವರು. ಆದರೂ ಅಪ್ಪ ಅಮ್ಮನ ದುಡಿಮೆ ಸಾಲುತ್ತಿರಲಿಲ್ಲ. ಇದರಿಂದ ಮನೆಯಲ್ಲಿ ಹೇಳಿಕೊಳ್ಳುವಂತಹ ದುಬಾರಿ ಮನೆ ಬಳಕೆಯ ವಸ್ತುಗಳು ಇರಲಿಲ್ಲ. 


ಮಾಯಾ ಮತ್ತು ಮಾಲಾ ಶಾಲೆಗೆ ಹೋಗಿ ಬಂದಂತೆ , ಗೆಳತಿಯರ ಒಡನಾಟ ಹೆಚ್ಚಿದಂತೆ ಅವರಿಬ್ಬರ ಬಯಕೆಗಳು ಹೆಚ್ಚತೊಡಗಿದವು. ದಿನವೂ ಒಂದೊಂದು ಹೊಸ ವಸ್ತುಗಳ ಬೇಡಿಕೆ ಇಡತೊಡಗಿದರು. ಒಂದಿನ ಮೊಬೈಲ್ ಫೋನ್ , ಮತ್ತೊಂದು ದಿನ ಇಯರ್ ಫೋನ್ , ಇನ್ನೊಂದು ದಿನ ದೂರದರ್ಶನ ಹೀಗೆ ಪಟ್ಟಿ ಬೆಳೆಯುತ್ತಲೇ ಇತ್ತು. ಇವರ ಬೇಡಿಕೆ ಮುಷ್ಕರದವರೆಗೂ ಬಂದಿತು. ಆಗ ಅಪ್ಪ ಅಮ್ಮ ಒಂದು ನಿರ್ಧಾರಕ್ಕೆ ಬಂದರು. ಮೊಬೈಲ್ ತಂದರೆ ಮುಂದೊಂದು ದಿನ ಇಬ್ಬರೂ ಒಂದಕ್ಕೆ ಕಿತ್ತಾಡ್ತಾ ಜಗಳ ಮಾಡಿದರೂ ಮಾಡಬಹುದು. ಆದ್ದರಿಂದ ಮೊಬೈಲ್ ಬದಲಾಗಿ ನಾವು ದೂರದರ್ಶನ ( ಟಿ ವಿ) ತಂದರೆ ಎಲ್ಲರಿಗೂ ಉಪಯೋಗ ಆಗುತ್ತದೆ ಎಂದು ಯೋಚಿಸಿ ದೂರದರ್ಶನ ತಂದರು.


ದೂರದರ್ಶನ ಬಂದಿದ್ದೆ ತಡ, ಅಕ್ಕ ತಂಗಿ ಇಬ್ಬರೂ ಅದರಲ್ಲೇ ನಿರತರಾಗಿ ಓದನ್ನು ಅಲಕ್ಷ್ಯ ಮಾಡುತ್ತ ಬಂದರು. ಇದರಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಳ್ಳುವ ಹಂತಕ್ಕೆ ಬಂದರು. 


ಇದನ್ನು ಗಮನಿಸಿದ ಅಪ್ಪ ಅಮ್ಮ ಅವರಿಗೆ ಸ್ಟ್ರಿಕ್ಟ್ ಆಗಿ ಟೈಮ್ ಟೇಬಲ್ ಹಾಕಿ ಕೊಟ್ಟರು. ಆ ಪ್ರಕಾರ ಮಕ್ಕಳಿಬ್ಬರು ಓದುವ ಹಾಗೂ ಟಿವಿ ನೋಡುವ ಸಮಯವನ್ನು ಸರಿಯಾಗಿ ಪಾಲಿಸಿದರು. ಮುಂದಿನ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಪಾಸಾದರು.


Rate this content
Log in

Similar kannada story from Drama