Gireesh pm Giree

Abstract Drama Inspirational

3  

Gireesh pm Giree

Abstract Drama Inspirational

ಡಿಗ್ರೀ ಜೀವನ

ಡಿಗ್ರೀ ಜೀವನ

2 mins
288


ಹಳೆ ವರುಷ ಉರುಳಿ ಹೊಸ ವರ್ಷ ಬರುವ ಗಳಿಗೆ ಇನ್ನೇನು ಇನ್ನೇನು ಸಮೀಪಿಸುತ್ತಿದೆ. ಕಳೆದು ಹೋದ ಸೆಕೆಂಡ್ ನಿಮಿಷ ಗಂಟೆ ದಿನ ತಿಂಗಳುಗಳು ಹೋದ ವೇಗವೇ ತಿಳಿಯದು. ಕಳೆದ ಕ್ಷಣದಲ್ಲಿ ನನಗಾದ ಅನುಭವ ಇನ್ನು ಬರೀ ನೆನಪು ಮಾತ್ರ. ನೆನಪಿನ ಭೇಟೆಯ ಬೆನ್ನೇರಿ ಹೋದಾಗ ಹೇ ದೇವ!ಆ ಕ್ಷಣ ಮರಳಿ ಬರಲೆಂದು ನನ್ನನ್ನು ಎಡಬಿಡದೆ ಕಾಡುತ್ತಿದೆ . ಕಳೆದು ಹೋದ 2022ರ ವಸಂತದಲ್ಲಿ ನನ್ನ ನೆನಪಿನ ಬುತ್ತಿಯಲ್ಲಿ ಸದಾ ಅನುರಣಿಸುವ ರಿಂಗಣಿಸುವುದು ಡಿಗ್ರೀ ಜೀವನ.

    ಮೂರು ವರ್ಷದ ನನ್ನ ಡಿಗ್ರಿ ಪಯಣ ಆ ವರ್ಷ ದಡ ಸೇರಿತು. ಪದವಿ ಎನ್ನುವ ಕನಸಿನ ಪಟ್ಟವನ್ನು ಧರಿಸುವ ಖುಷಿ ಒಂದಡೆಯಾದರೆ. ಕಾಲೇಜಿಗೆ ಹಳೆ ವಿದ್ಯಾರ್ಥಿಗಳಾದವೆಂಬ ನೋವು ಮತ್ತೊಂದೆಡೆ.

    ತರಗತಿಯ ಕಿಟಕಿಯಿಂದ ಬರುವ ಮಧುರ ತಂಗಾಳಿಯ ಹಾಜರಿಗೆ ಆಕಳಿಸುವ ಬಾಯಿ. ತಿರುಗುವ ಫ್ಯಾನು, ಕಪ್ಪಗಿನ ಉದ್ದನೆಯ ಬೋರ್ಡು ಅದರ ಮೂಲೆಯಲ್ಲಿ ತೇಲುವ ಶುಭನುಡಿ. ನನ್ನ ಭಾರ ಹೊರುವ ಬೆಂಚು . ಹಳೇ ಇತಿಹಾಸದ ಚಿತ್ರ ಲಿಪಿಯ ನೆನಪಿಸುವಂತಹ ಡೆಸ್ಕ್ ನಲ್ಲಿ ಮೂಡಿದ್ದ ಕಲಾತ್ಮಕ ಶೈಲಿ. ಸದಾ ಪ್ರೀತಿಯಿಂದ ವಿದ್ಯಾಧಾರೆಯೆರೆವ ಗುರುಗಳು. ಸಕ್ಕರೆ ಮನಸ್ಸಿನ ಅಕ್ಕರೆ ಗೆಳೆಯರು. ಕ್ಯಾರಿ ಡೋರ್ ನಲ್ಲಿ ನಿಂತು ಅತ್ತಿಂದಿದ್ದ ಹೋಗುವ ಬಣ್ಣದ ಚಿಟ್ಟೆಗಳು. ಅಬ್ಬಾ! ಎಂಥಹಾ ರಸ ನಿಮಿಷ .

     ಒಂದು ಕಡೆ ಡಿಗ್ರೀ ಜೀವನಕ್ಕೆ ವಿರಾಮ ಹಾಡಿದರೆ ಅದರ ಜೊತೆ ಮೂರು ವರ್ಷ ಶಿಸ್ತಿನ ಪಾಠವನ್ನು ಬೋಧಿಸಿದ ಎನ್ ಸಿ ಸಿಯನ್ನು ಬಿಡಲು ಮನಸಾದ್ರು ಹೇಗೆ ಬರುತ್ತದೆ?. ಅಲ್ಲಿ ಸಿಕ್ಕ ಅನುಭವ ನನ್ನನು ಒಬ್ಬ ಉತ್ತಮ ಮಾತುಗರನ್ನಾಗಿ , ನಾಯಕನನ್ನಾಗಿಮಾಡುವ ಜೊತೆ ದೇಶದ ಮೇಲಿನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ಸೈನಿಕರ ಜೀವನ ತುಂಬಾನೇ ಹತ್ತಿರದಿಂದ ನೋಡುವ ಸೌಭಾಗ್ಯ ನನ್ನದಾಯಿತು. ಹಳೆ ವಿದ್ಯಾರ್ಥಿಗಳೆಂಬ ಪಟ್ಟದ ಜೊತೆ ಎಕ್ಸ್ ಎನ್ ಸಿ ಸಿ ಕೆಡೆಟ್ ಎಂಬ ಬಿರುದು ನನ್ನ ಪಾಲಿಗೆ ಈ ವರ್ಷ ಒದಗಿತು.

     ಡಿಗ್ರಿ ಪಯಣ ಅದೆಷ್ಟು ಜೀವನದ ಪಾಠವನ್ನು ಹೇಳಿಕೊಟ್ಟಿದೆ ಬದುಕಿಗೆ ಹೊಸ ಅರ್ಥವನ್ನು ಬರೆದಿದೆ. ಲೇಖನಗಳು ವರದಿಗಳು ಗೊತ್ತಿಲ್ಲದ ನನ್ನಂತಹ ಸೋಮಾರಿಯ ಕೈಯಲ್ಲಿ ಲೇಖನಿಯನ್ನು ಹಿಡಿಸಿದ್ದು ಇದೇ ಕಾಲೇಜು. ಉತ್ತಮ ಓದುಗನನ್ನಾಗಿ, ನಾಯಕತ್ವ ಗುಣ ಚಿಗುರಿಸಿದ ವಿದ್ಯಾ ದೇಗುಲ. ಹಸಿದ ಹೊಟ್ಟೆಯ ತಣಿಸಿ ಓದಿಗೆ ಸದಾ ನೆರಳಾಗಿ ಬೆಳಕಾಗಿ ನಿಂತ ಇಲ್ಲಿನ ಅಧ್ಯಾಪಕ ಗುರು ವೃಂದದವರಿಗೆ ನಾನೆಂದು ಚಿರಋಣಿ. ಇನ್ನೂ ಬರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ನಿಮ್ಮ ಸೇವೆ ಸಿಗುವಂತಾಗಲಿ.

   ಮುಂದೆ ಬರುವ ಹೊಸ ವರ್ಷ ಹೊಸ ಹರುಷವ ತರಲಿ . ನೋವು ನಲಿವು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ. ಬದುಕು ಬದುಕಿರುವಷ್ಟು ಬದುಕಿನ ಉದ್ದಕೂ ಖುಷಿ ಶಾಶ್ವತ ಅಲ್ಲ ನೋವು ಕೂಡ ಬದುಗಿಗೆ ಬೇಕಾಗುಹೊಸ ವಸಂತ ಎಲ್ಲರಿಗೂ ಶುಭ ಉಂಟುಮಾಡಲಿ.



Rate this content
Log in

Similar kannada story from Abstract