Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Kalpana Nath

Comedy Tragedy Others


3.9  

Kalpana Nath

Comedy Tragedy Others


ಚಾಣಾಕ್ಷ ಕಳ್ಳ !

ಚಾಣಾಕ್ಷ ಕಳ್ಳ !

1 min 74 1 min 74


ಡಾಕ್ಟರ್ ಒಬ್ಬರು ರೋಗಿಯೊಬ್ಬರನ್ನ ವಿಚಾರಿಸಲು ಅವರ ಮನೆಗೆ ಬಂದಿದ್ದರು. ಹೊರಡುವಾಗ ನೋಡಿದರೆ ತಾವು ತಂದಿದ್ದ ಸ್ಕೂಟರ್ ಕಾಣುತ್ತಿಲ್ಲ. ಪೊಲೀಸ್ ಕಂಪ್ಲೇಂಟ್ ಕೊಟ್ಟಾಯ್ತು. ಮಾರನೇದಿನ ಅದೇ ಜಾಗದಲ್ಲಿ ಸ್ಕೂಟರ್ ನಿಂತಿದ್ದು ಕಂಡು ಮನೆಯವರಿಗೆ ಆಶ್ಚರ್ಯ.ಸ್ಕೂಟರ್ ಸೀಟಿನ ಮೇಲೊಂದು ಕವರ್ ನೋಡಿ, ಒಡೆದು ನೋಡಿದರೆ ಅದರಲ್ಲೊಂದು ಪತ್ರ. ದಯವಿಟ್ಟು ಕ್ಷಮಿಸಿ ನಾನು ಕಳ್ಳ ಅಲ್ಲ ನಮ್ಮ ಅಣ್ಣನಿಗೆ ಅಫಘಾತವವಾಗಿರುವ ವಿಷಯ ತಿಳಿದು ತಕ್ಷಣ ಹೋಗಬೇಕಾದ ಅನಿವಾರ್ಯವಿತ್ತು. ನನ್ನ ಸ್ಕೂಟರ್ start ಆಗದೆ ಇದ್ದುದರಿಂದ ಸುಮ್ಮನೆ ಪ್ರಯತ್ನ ಮಾಡಿದೆ ನಿಮ್ಮ ಸ್ಕೂಟರ್ ನನ್ನ key ಯಿಂದ start ಆಗಿದ್ದಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಬೇರೆ ದುರುದ್ದೇಶವಿಲ್ಲ. ನಾನು ಮಾಡಿದ ತಪ್ಪಿಗೆ ಇದರೊಂದಿಗೆ ನಾಲ್ಕುಜನಕ್ಕೆ ಬಾಲ್ಕನಿ ಸಿನಿಮಾ ಟಿಕೆಟ್ (ಇಂದು ರಾತ್ರಿ ಸೆಕೆಂಡ್ ಶೋ ) ಇಟ್ಟಿದ್ದೇನೆ. ಹೋಗಿಬನ್ನಿ ಎಂದು ಬರೆದಿದ್ದುದನ್ನ ಕಂಡು, ಡಾಕ್ಟರಿಗೂ ತಿಳಿಸಿಸ್ಕೂಟರ್ ಕೊಟ್ಟು. ಸಂತೋಷದಿಂದ ನಾಲ್ಕುಜನ ಸಿನಿಮಾ ನೋಡಲು ಹೋದರು. ನಗುನಗುತ್ತಲೇ ಮನೆಗೆ ಬಂದಾಗ ದೊಡ್ಡ ಆಘಾತ. ಬೀಗ ಒಡೆದು ಮನೆಯಲ್ಲಿ ಒಂದು ಸಾಮಾನು ಬಿಡದೇ ಖಾಲಿ ಮಾಡಿದ್ದಾರೆ. ಬಾಗಿಲಲ್ಲಿ ಮತ್ತೊಂದು ಪತ್ರ . ಸಿನಿಮಾ ಚೆನ್ನಾಗಿತ್ತಾ. ಹೇಗಿದೆ ನನ್ನ ಬುದ್ದಿವಂತಿಕೆ.?


Rate this content
Log in

More kannada story from Kalpana Nath

Similar kannada story from Comedy