Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಬಿಡುಗಡೆ

ಬಿಡುಗಡೆ

1 min
125


ಅದೊಂದು ಅರಮನೆಯಂತಹ ದೊಡ್ಡ ಮನೆ. ಬೇಕಾದಷ್ಟು ದುಡ್ಡು ಕಾಸಿದ್ದರೂ,ಆ ಮನೆಯ ಹೆಂಗಸರು ಗಂಡಸರು ಹಾಕಿದ ಗೆರೆ ದಾಟುವುದಿಲ್ಲ. ಆ ಮನೆಯ ಮೂರನೇ ತಲೆಮಾರಿನ ಹೆಣ್ಣು ಮಗಳು ಸುಮನಾ, ಆ ಮನೆಯ ಉಸುರುಗಟ್ಟಿಸುವ ವಾತಾವರಣದಿಂದ ಬಿಡುಗಡೆ ಪಡೆದು, ಸ್ವಾತಂತ್ರ್ಯ ವಾಗಿ ತಾನು ತನ್ನ ಕಾಲಮೇಲೆ ನಿಲ್ಲಬೇಕೆಂದು ನಿರ್ಧರಿಸಿದಳು. ಆ ಮನೆಯ ಯಾವ ಹೆಣ್ಣು ಮಕ್ಕಳಿಗೂ ಇದುವರೆಗೂ ಸಿಗದೀದ್ದ ಕಾಲೇಜು ವಿದ್ಯಾಭ್ಯಾಸ ಕ್ಕೆ ಹಠ ಮಾಡಿ ‌ಮನೆಯಿಂದ ಹೊರಬಂದಳು. ಆಗ ಅವಳಿಗೆ ಹೊರಗಿನ ಸ್ವಾತಂತ್ರ್ಯದ ವಾತಾವರಣದ ಅನುಭವವಾಯಿತು

ಮುಂದೆ ಅವಳು ಚೆನ್ನಾಗಿ ಓದಿ, ವಿದೇಶಕ್ಕೂ ಹೋಗಿ ಬಂದಳು. 

ಸ್ತ್ರೀ ಸ್ವಾತಂತ್ರ್ಯ ದ ಅನುಭವ ಅವಳಿಗಾಗಿ ತುರ್ತು. ನಂತರ ಅವಳ ಮನೆಯ ಎಲ್ಲಾ ಹೆಣ್ಣು ಮಕ್ಕಳಿಗೂ ಓದುವ ಸ್ವಾತಂತ್ರ್ಯ ಗಳಿಸಿಕೊಟ್ಟಳು.

ಆ ಮನೆಯ ಹಿರಿಯರು ಸುಮನಾಳನ್ನು ತುಂಬಾ ದ್ವೇಷಿಸುತ್ತ್ತಿದ್ದರು. ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಸಿತೆಂಬಂತಾಯಿತು. 

ಗಂಡಸರ ಕೈಗೊಂಬೆಯಾಗಿ ಅವರು ಹೇಳಿದಷ್ಟು ನನ್ನು ಕೇಳಿಕೊಂಡಿತು ತ್ತಿದ್ದ ಆ ಮನೆಯ ಮಹಿಳೆಯರಿಗೆ ಸುಮನಾಳ ಹೋರಾಟದ ಫಲವಾಗಿ ಸ್ವಾತಂತ್ರ್ಯ ದ ಅನುಭವವಾಯಿತು.


Rate this content
Log in

Similar kannada story from Abstract