Vijayalaxmi C Allolli

Abstract Classics Others

4.3  

Vijayalaxmi C Allolli

Abstract Classics Others

ಭಾವೀ ಅತ್ತೆ

ಭಾವೀ ಅತ್ತೆ

1 min
408



ಅತ್ತೆ ಅನ್ನುವ ಜೀವನದ ಪಾತ್ರವೆ ಮೊದಲು ಬಿಂಬಿಸುವುದು ಖಳನಾಯಕಿಯಾಗಿ . ಸೋದರತ್ತೆಯಾದರೆ ಅದು ಆಗಾಗ ಬಂದುಹೋಗುವ ಪಾತ್ರ , ಅದಕ್ಕೆ ಏನು ತಂಟೆ ತಕರಾರುಗಳಿರುವುದಿಲ್ಲ . ಆದರೆ ಈ ಖಾಯಂ ಅತ್ತೆ ಆಗೋದಿದೆಯೆಲ್ಲ ಆ ಪರಿಪೂರ್ಣ ಪಾತ್ರವೇ ಖಳನಾಯಕಿ ತರಾನೇ ಕಾಣುತ್ತೆ . 

ನಾನು ಮತ್ತು ನೀವುಗಳು ಒಂದು ದಿನ ಅತ್ತೆ ಆಗೋರೆ ಅಲ್ವಾ ? ಸೋ ನಾವೆಲ್ಲರು ಭಾವೀ ಅತ್ತೆಯಂದಿರೇ !!!!  

ಇದರಲ್ಲಿ " ಅಳಿಯನಿಗೆ ಅತ್ತೆ ಆಗೋದಕ್ಕೂ , ಸೊಸೆಗೆ ಅತ್ತೆ ಆಗೊದಕ್ಕೂ ತುಂಬಾ ವ್ಯತ್ಯಾಸವಿದೆ " ಅನ್ನೋದು ನನ್ನ ಅಭಿಪ್ರಾಯವಷ್ಟೆ . ( ಇದು ಆಗಾಗ ನನ್ನ ತಲೆಯಲ್ಲಿ ಬರೊ ವಿಚಾರ ಇವತ್ತು ಬರೆಯೋಕೆ ಅವಕಾಶ ಸಿಕ್ಕಿತು ನೋಡಿ ) .... ಹಾ !!!!! ಇವಳೇನು ಮಹಾನ್ ವ್ಯತ್ಯಾಸ ಕಂಡು ಹಿಡಿದಿದ್ದಾಳೆ ಅಂತ ಅನ್ಕೊ ಬೇಡಿ ಮತ್ತೆ . ಅಳಿಯ ಆಗೀಗ ಬಂದು ಹೋಗುವ ಅತಿಥಿಯಂತೆ ಇರುತ್ತಾರೆ . ಸೊಸೆ ಮನೆಯಲ್ಲೆ ಇರುತ್ತಾಳೆ . ( ನಮ್ಮ ಪುಣ್ಯ ಮಗ ದೊಡ್ಡ ಹುದ್ದೆಯಲ್ಲಿದ್ದು , ತನ್ನ ಹೆಂಡತಿಯನ್ನು ಸಾಕುವಷ್ಟು ಸಂಬಳ ಪಡೆಯುವವನಾದರೆ ಒಳ್ಳೆದು , ಆಗ ಅವರು ಆಗಾಗ ಬಂದು ಹೋಗುವ ಅತಿಥಿ ಆಗುತ್ತಾರೆ ) ಇಲ್ಲದಿದ್ದರೆ ದಿನವೂ ಮನೆಯಲ್ಲಿ ಮಹಾಯುದ್ಧವೆ  . ಅತ್ತೆ ಮತ್ತು ಸೊಸೆಯಂದಿರಲ್ಲಿ ಒಬ್ಬರಾದರೂ ಹೊಂದಾಣಿಕೆ ಸ್ವಭಾವ ತುಸು ಹೆಚ್ಚೇ ಇರುವವರಾದರೆ ಯುದ್ಧಕ್ಕೆ ಪ್ರವೇಶ ಇರುವುದಿಲ್ಲ .

ಮೊದಲಿನಿಂದಲೂ ಗುರುತು , ಪರಿಚಯ ಇರುವ ಕುಟುಂಬದಲ್ಲಿ ಮದುವೆಯಾದರೆ ಅವರವರ ಗುಣ ಸ್ವಭಾವಗಳನ್ನು ಅರಿತು ನಡೆಯುತ್ತಿರಬಹುದು . ದೂರದ ಊರಿನ ನೆಂಟಸ್ತನವಾದರೆ ಹೊಂದಿ ಕೊಳ್ಳಲು ಸಮಯ ಬೇಕಾಗಬಹುದು .

ಅಲ್ಲವೇ???



Rate this content
Log in

Similar kannada story from Abstract