Shridevi Patil

Classics Inspirational Others

4  

Shridevi Patil

Classics Inspirational Others

ಬೆಂಕಿಯಲ್ಲಿ ಅರಳಿದ ಹೂವು.ಭಾಗ 3.

ಬೆಂಕಿಯಲ್ಲಿ ಅರಳಿದ ಹೂವು.ಭಾಗ 3.

2 mins
303


ನಾದಿನಿಯ ಮಗನ ಜೊತೆಗೆ ಕಮಲಾಳ ಮದುವೆ ಮಾಡಲು ತನಗೆ ಒಪ್ಪಿಗೆ ಇದೆಯೆಂದು ಖುಷಿಯಿಂದ ಹೆಂಡತಿ ಹೇಳಿದ್ದನ್ನು ಕೇಳಿದ ರಂಗಪ್ಪ, ಸರಿ ಕಣೇ ನನಗಂತೂ ಹಾಲು ಕುಡಿದಷ್ಟು ಸಂತೋಷವಾಯಿತು. ಎಲ್ಲಿ ನೀನು ಅವರ ಆಸ್ತಿ ಕಮ್ಮಿ ಇದೆಯೆಂದು ಈ ಮದುವೆಗೆ ಒಪ್ಪುವುದಿಲ್ಲ ಏನೋ ಎಂದುಕೊಂಡಿದ್ದೆ ಅಂತ ಹೇಳಿದನು.


ಶಾಂತಮ್ಮ: ರೀ , ಆಸ್ತಿ ಎಷ್ಟಿದ್ದರೇನು? ಮೊದಲು ನಮ್ಮ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ ಅಂತ ಒಮ್ಮೆ ಯೋಚಿಸಿ. ದುಡಿಮೆಯೇ ದೇವರೆಂದು ನಂಬಿ , ಚೆನ್ನಾಗಿ ದುಡಿದರೆ ಆ ದೇವರೆಂದು ತನ್ನನ್ನು ನಂಬಿದವರನ್ನು ಕೈ ಬಿಡುವುದಿಲ್ಲ. ಹುಡುಗ ಒಳ್ಳೆಯವನು. ನಮಗೆ ಬೇಕಿರುವುದೂ ಅದೇ ಅಲ್ವೇ? ಆದ್ದರಿಂದ ನೀವು ಅವರಿಗೆ ನಮ್ಮ ಕಮಲಾಳನ್ನು ನೋಡುವುದಕ್ಕೆ ಬರಲು ಹೇಳಿ ಬಿಡಿ.


ರಂಗಪ್ಪ: ಆಯ್ತು ಬಿಡೇ, ಹೇಳ್ತೀನಿ. ಇವಾಗ ಆಷಾಢ ಇರೋದ್ರಿಂದ ಒಂದು ತಿಂಗಳು ಕಳೆದ ಮೇಲೆ ಬರೋಕೆ ಹೇಳಿದರಾಯ್ತು.


ಶಾಂತಮ್ಮ: ಆಯ್ತು ಹಾಗೆ ಮಾಡಿದ್ರಾಯ್ತು ಬಿಡಿ.


ರಂಗಪ್ಪ: ಇದೆಲ್ಲ ಸರಿ , ಒಬ್ಬ ಮಗಳದು ಏನೋ ಆಯ್ತು, ಇವಳ ಹಿಂದೇನೆ ಸರೋಜಾನೂ ಬಂದೆ ಬಿಟ್ಟಳು ಅಲ್ವಾ?


ಶಾಂತಮ್ಮ: ರೀ, ಇವಳದು ಮಾಡಿ ಮುಗಿಸೋಣ , ಅವಳದು ಮುಂದೆ ನೋಡೋಣ , ಅದಕ್ಕಾಗಿ ಈಗಿಂದಾನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ. ದೇವರಿದ್ದಾನೆ ಮುಂದಿನ ದಾರಿ ಆತನೇ ತೋರಿಸುವನು. ಈಗ ತೋರಿಸಿದ ಹಾಗೆ.


ರಂಗಪ್ಪ: ಆಯ್ತು ಬಿಡೇ, ನೀನು ಇಷ್ಟೊಂದು ಹೇಳಿದ ಮೇಲೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ, ನಮ್ಮ ಅಕ್ಕ ಭಾವ ದೊಡ್ಡ ಮನಸ್ಸು ಮಾಡಿ , ಕಮಲಾಳನ್ನು ಒಪ್ಪಿಕೊಂಡು , ಕೊಡೋದು ತಗೊಳ್ಳೋದರ ಕುರಿತು ಮಾತಾಡಿದರೆ ಒಳ್ಳೆಯದಾಗುತ್ತೆ. ನಮಗೂ ಎಲ್ಲವನ್ನೂ ಸಿದ್ಧ ಮಾಡ್ಕೊಳೋಕೆ ಸ್ವಲ್ಪ ಸಮಯ ಸಿಕ್ಕ ಹಾಗೆ ಆಗುತ್ತೆ.


ಶಾಂತಮ್ಮ: ನೋಡೋಣ , ನಾವು ಅಂದುಕೊಂಡಂತೆ ಆದ್ರೆ ಬಹಳ ಒಳ್ಳೆಯದು. ದೇವರಿದ್ದಾನೆ , ಸಮಾಧಾನದಿಂದ ಇರೋಣ.


ರಂಗಪ್ಪ: ಆಯ್ತು ನೀನು ಹೇಳಿದಂತೆ ಆಗ್ಲಿ.


ಶಾಂತಮ್ಮ: ರಿ ಕರೆಂಟು ಬಂದು ಅರ್ಧ ಗಂಟೆ ಆಯ್ತು. ಬೇಗ ಹೊಲದ ಕಡೆಗೆ ಹೋಗ್ರಿ. ನೀರು ಹಾಯಿಸೋದು ಇತ್ತಲ್ವಾ ಇನ್ನೊಂದು ಅರ್ಧ ಎಕರೆ.ಮರೇತರೆನ್ರಿ?


ರಂಗಪ್ಪ: ಇಲ್ಲ ಇಲ್ಲ, ಇದೋ ನೋಡು ಈಗ ಹೊರಟೆ ಬಿಟ್ಟೆ. ಲೇಟಾದ್ರೆ ಮತ್ತೆ ಕರೆಂಟ್ ಹೋಗ್ಬಿಡುತ್ತೆ, ಹಾಗೇನಾದ್ರೂ ಆದ್ರೆ ಮತ್ತೆ ಕಷ್ಟ , ಮತ್ತ್ ನಾಳೆವರೆಗೂ ಕಾಯ್ಬೇಕಾಗುತ್ತೆ, ಒಂದ್ ಕಪ್ ಚಹಾ ಮಾಡಿಕೊಟ್ರೆ ಹೊರಟೆ ಬಿಟ್ಟೆ.


ಶಾಂತಮ್ಮ: ಆಯ್ತು ಈಗ್ಲೇ ಮಾಡ್ಕೊಂಡು ಬರ್ತೀನಿ. ಚಹಾ ಜೋಡಿ ನಾಷ್ಟಾನು ಮಾಡ್ತೀನಿ ಇರಿ , ನೀರು ಹಾಯಿಸಿ ಬರೋದಂದ್ರೆ ಲೇಟಾಗುತ್ತೆ.


ರಂಗಪ್ಪ: ಬೇಡ ಬೇಡ, ಹಸಿವಿಲ್ಲ, ಊಟ ಮಾಡೋದೆ ಲೇಟಾಯಿತಲ್ವಾ, ಚಹಾ ಮಾತ್ರ ಮಾಡು.


ಶಾಂತಮ್ಮ: ಸರಿ ರಿ ಆಯ್ತು ಮಾಡ್ಕೊಂಡು ಬರ್ತೀನಿ.


ರಂಗಪ್ಪ ಚಹಾ ಕುಡಿದು ಹೊರಟನು.


ಶಾಂತಮ್ಮ ಗಂಡ ಹೋದ ದಾರಿಯನ್ನೇ ನೋಡುತ್ತಾ ಬಾಗಿಲ ಬಳಿ ಬಂದು ನಿಂತಳು. ಮಕ್ಕಳಿಗಾಗಿ ಚಿಂತಿಸುವ ಗಂಡನ ಮನಸ್ಸನ್ನು ಕಂಡು ಖುಷಿಯಾಗಿ ಆನಂದ ಭಾಷ್ಪ ಸುರಿಸಿದಳು. ಮಕ್ಕಳು ಹೆಚ್ಚಿದ್ದರೂ ದುಡಿಯಲೂ ಬೇಸರಿಸಿಕೊಳ್ಳದ , ಸದಾ ನಗು ಮೊಗದಿಂದ ಇರುವ ಗಂಡನನ್ನು ನೋಡುತ್ತಾ ಮೈ ಮರೆತಳು.



Rate this content
Log in

Similar kannada story from Classics