Gireesh pm Giree

Abstract Action Others

4.0  

Gireesh pm Giree

Abstract Action Others

ಬದುಕು

ಬದುಕು

1 min
202


ನಿನ್ನೆಯಂತೆ ಇಂದಿರಲ್ಲ ನಾಳೆಯಂತೆ ನಿನ್ನೆ ಇರದು. ಏನನ್ನು ಗ್ರಹಿಸಲು ಸಾಧ್ಯವಾಗದ ಪಯಣವೇ ಬದುಕು. ಏಳು ಬೀಳಿನ ಜೊತೆಗೆ ಹೆಜ್ಜೆ ಹಾಕುತ್ತಾ. ಸೋಲು ಗೆಲುವಿನ ಪಂದ್ಯ ನಿರಂತರ ಆಡುತ್ತಾ. ನೋವು ನಲಿವಿನ ಸವಿ ನೆನಪಿನ ಕ್ಷಣಗಳು ಜೀವನದಲ್ಲಿ ಎದುರಾಗುವ ಅನೇಕ ಘಟನೆಗಳು ಊಹೆಗೂ ನಿಲುಕದು. ಈ ಜೀವನ ಪಯಣದಲ್ಲಿ ಅದೆಷ್ಟೋ ಮಂದಿ ಮಿಂಚಂತೆ ಬಂದು ಮರೆಯಾದರೆ ಇನ್ನೂ ಸಾಮಾನ್ಯರಲ್ಲಿ ಅಸಮಾನ್ಯರು ನಮ್ಮ ಬಾಳ ಬೆಳಗು ಸೂರ್ಯನಂತೆ ಸದಾ ಅವರ ಬೆಳಕೆಂಬ ಪ್ರೀತಿ -ಜ್ಞಾನ ನಮ್ಮನ್ನು ಎತ್ತರಕ್ಕೆ ಕೊಂಡು ಹೋಗುತ್ತದೆ.

  ಬದುಕು ಬದುಕಿರುವಷ್ಟು ಆದರೆ ಬದುಕಿರುವರೆಗೂ ಪರೋಪಕಾರ ಮಾಡದಿದ್ದರೂ ಪರವಾಗಿಲ್ಲ ಆದರೆ ಉಪದ್ರ ಮಾತ್ರ ಮಾಡಬಾರದು. ಬಾಳಲ್ಲಿ ಸಮಸ್ಯೆಗಳು ಸಮುದ್ರದ ಅಲೆಗಳಂತೆ ನಿರಂತರ ಅದರಿಂದ ಹೊರಬರಲು ಅಲೆಗಳ ಜೊತೆಗೆ ಸೆಣಸಾಡಬೇಕು. ಸೋತರೆ ಅದು ಗೆಲುವಿನ ಮೆಟ್ಟಿಲಾದರೆ. ಗೆದ್ದರೆ ಇನ್ನೂ ಗೆಲ್ಲಲು ಇನ್ನಷ್ಟು ಇದೆ ಎಂದು ದಾರಿ ತೋರಿಸುವ ದಿಕ್ಸೂಚಿ. ಅದೆಷ್ಟು ಮಂದಿ ಸೋಲಾಯಿತು ಎಂದು ವ್ಯಥೆಪಟ್ಟು ಹಾಗಾಗ ಬೇಕಿತ್ತು ಹೀಗಾಯಿತು ಚಿಂತಿಸುತ್ತ ತಮ್ಮ ಜೀವನದ ಸುಖ ಸಮಯವನ್ನು ಕೈ ಚೆಲ್ಲುತ್ತಾರೆ.

    ಸಮಸ್ಯೆ ಕಡಲಲ್ಲಿ ತೇಲುವ ಬದಲು ಅದರಿಂದ ಹೊರಬರಲು ಯೋಜಿಸಬೇಕು. ಯಾಕೆಂದರೆ ಸಮಯ ಎಲ್ಲರಿಗೂ ಒಂದೇ ಆದರೆ ಅದನ್ನು ಬಳಸಿಕೊಳ್ಳುವಲ್ಲಿ ಹೆಚ್ಚಿನವರು ವಿಫಲರಾಗುತ್ತಾರೆ. ಸಮಯದ ಪರಿಪಾಲನೆ ಯಶಸ್ಸಿನ ಕೈ ಕನ್ನಡಿಯಾಗಿದೆ. ತನ್ನ ಪರಿಶ್ರಮ ಸಾಧನೆಗೆ ಸೋಪಾನ ಆದರೆ ಆತ್ಮ ಬಲವು ಛಲಕ್ಕೆ ಮತ್ತು ಶಕ್ತಿಗೆ ಮುನ್ನುಡಿಯನ್ನು ಜೀವನದಲ್ಲಿ ಬರೆಯುವುದರಿಂದ ಉತ್ತಮ ಯಶಸ್ಸು ನಮ್ಮದಾಗುತ್ತದೆ.

  ಈ ಬದುಕಿನ ಉದ್ದಕ್ಕೂ ಅನೇಕ ತಿರುವುಗಳನ್ನು ಕಾಣಬಹುದು. ಜೀವನ ಎನ್ನುವ ಪಯಣದಲ್ಲಿ ಪ್ರತಿ ಸಂಚಿಕೆಯಲ್ಲೂ ಇರುವಿದೆ. ಆ ತಿರುವು ಸಮಯ ಬಂದಾಗಲೇ ದೃಶ್ಯವಾಗುವುದರಿಂದ ಇದು ಗೌಪ್ಯವಾದ ಉತ್ತರ ಸಿಗದ ಒಗ್ಗಟ್ಟಿನಂತೆ ಇರುತ್ತದೆ. ಪ್ರಶ್ನೆಯ ಜಾಡು ಹಿಡಿದು ಹೋದಾಗ ಆ ಸಮಯ ಬಂದಾಗಲೇ ಉತ್ತರ ಸಿಗುತ್ತದೆ.

   ಮಾನವ ಸಮಯಕ್ಕೆ ಕುಣಿಯೋ ಪಾತ್ರಧಾರಿ ವಿಧಿ ಎಲ್ಲರನ್ನೂ ಕುಣಿಸೋ ಸೂತ್ರಧಾರಿ . ಆತನೇ ಕಾಲ ಬದುಕಿನ ಉದ್ದಕ್ಕೂ ಖುಷಿಯ ರೂವಾರಿ ಹೊತ್ತವನು -ದುಃಖದ ಸವಾರಿಯನ್ನು ಮಾಡುವವನು ಆತನೇ.

 ಕಾಲಾಯ ತಸ್ಮೈ ನಮಃ


Rate this content
Log in

Similar kannada story from Abstract