ಬದುಕಿನ ಪಾಠ
ಬದುಕಿನ ಪಾಠ




ಒಬ್ಬ ಸ್ವಾಮೀಜಿ ಸ್ಥಾಪಿಸಿದ ಹೆಣ್ಣು ಮಕ್ಕಳ ಕಾಲೇಜಿನ ಸಂಸ್ಥಾಪನಾ ದಿನದ ಕಾರ್ಯಕ್ರಮ ನಡೆಯುತ್ತಿತ್ತು. ಆ ಸ್ವಾಮಿಜಿ ಸಹಾ ಬೆಳೆಗ್ಗೆಯಿಂದಲೇ ಕಾರ್ಯಕ್ರಮದಲ್ಲಿ ಇದ್ದರು. ಅವರ ಸೆಕ್ರೆಟರಿ ಬಂದು ಕಿವಿಯಲ್ಲಿ ಏನೋ ಹೇಳಿದ ತಕ್ಷಣ ಇಬ್ಬರೂ ಎದ್ದು ಹೊರ ಬಂದು ಕಾರಿನಲ್ಲಿ ಹೊರಟೇ ಬಿಟ್ಟರು. ಎಲ್ಲರಿಗೂ ಆಶ್ಚರ್ಯ. ಯಾರಿಗೂ ಹೇಳದೆ ಹಾಗೆ ಎಂದೂ ಹೋಗುವುದೇ ಇಲ್ಲ. ಸಿಬ್ಬಂದಿ ವರ್ಗದಲ್ಲಿ ಬರೀ ಗುಸು ಗುಸು. ಅರ್ಧ ಗಂಟೆ ಕಳೆದಿರಬಹುದು. ಅಲ್ಲಿಗೆ ಸುಮಾರು ನೂರು ಪೊಲೀಸ್ ಮತ್ತು ಕೆಲವು SPGಯವರು ಬಂದು ಕಾಲೇಜ್ ನ ಸುತ್ತುವರೆದರು. ಆಗ ತಿಳಿದ ವಿಷಯ ರಾಷ್ಟ್ರಪತಿ dr ಅಬ್ದುಲ್ ಖಲಾಮ್ ವಿಧ್ಯಾರ್ಥಿನಿಯರನ್ನ ಉದ್ದೇಶಿಸಿ ಮಾತನಾಡಲು ಬರುತ್ತಿದ್ದಾರೆ ಅಂತ. ಅದೇ ಊರಿನ ಬೇರೊಂದು ಕಾರ್ಯಕ್ರಮ ಕ್ಕೆ ಆಗಮಿಸಿದ್ದ ರಾಷ್ಟ್ರಪತಿ ಗಳಿಗೆ ಸ್ವಲ್ಪ ಕಾಲ ಬಿಡುವಿದ್ದುದರಿಂದ ಆಶ್ರಮಕ್ಕೆ
ಬೇಟಿಕೊಡುವುದಾಗಿ ಹೇಳಿದರಂತೆ ಆದರೆ ಅವರು ಕಾಲೇಜು ಕಾರ್ಯಕ್ರಮದಲ್ಲಿ ಇರುವ ವಿಷಯ ತಿಳಿದು ಅಲ್ಲಿಗೇ (ಕಾಲೇಜಿಗೆ )ಹೋಗೋಣವೆಂದರಂತೆ. ಶಿಷ್ಟಾಚಾರ ಮುರಿಯದೆ ಸ್ವಾಮೀಜಿಯವರೇ ಅವರನ್ನ ಕರೆತರಲು ತಾವೇ ಖುದ್ದು ಹೋಗಿದ್ದರೆಂದು ನಂತರ ತಿಳಿಯಿತು ಅವರು ವಿಧ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಮೇಲೆ ಸಾಮಾನ್ಯವಾಗಿ ಪ್ರಶ್ನೋತ್ತರ ಕಾರ್ಯಕ್ರಮ. ಸಮಯ ಇಲ್ಲದ ಕಾರಣ ಅವರೇ, ನಾನು ಒಂದೇ ಒಂದು ಪ್ರಶ್ನೆ ಮಾತ್ರ ಕೇಳುತ್ತೇನೆ ಅಂತ ಅಂದು ಕೇಳಿದ ಪ್ರಶ್ನೆ ಎಲ್ಲರಿಗೂ ಆಶ್ಚರ್ಯ. ಅವರ ಪ್ರಶ್ನೆ ಐಶ್ವರ್ಯರಾಯ್ ಬಚ್ಚನ್ "ಮಿಸ್ ಇಂಡಿಯಾ "ಆಗಲು ಏನು ಕಾರಣ? ಒಬ್ಬ ಹುಡುಗಿ ಹೇಳಿದಳು ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದು . Next ಮತ್ತೊಬ್ಬ ಹುಡುಗಿ ರೂಪದಲ್ಲಿ ಉಳಿದವರನ್ನೆಲ್ಲಾ ಮೀರಿಸುವಂತೆ ಇದ್ದುದು next ಹೀಗೆ ಹಲವರು ಹಲವಾರು ಉತ್ತರ ಕೊಟ್ಟಮೇಲೆ ಒಂದು ಹುಡುಗಿ ಹೇಳಿದ್ದು , ನಾನು ಅಲ್ಲಿ ಇಲ್ಲದೆ ಇದ್ದ ಕಾರಣ ರಾಷ್ಟ್ರ ಪತಿಗಳು ನಕ್ಕು ಹೇಳಿದರಂತೆ ಇದೇ ನನಗೆ ಬೇಕಿದ್ದಉತ್ತರ. ತಮಾಷೆಗೆ ಈ ಮಗು ಉತ್ತರಸಿದ್ದರೂ ಅವಳಲ್ಲಿ ನನಗೇನು ಕಡಿಮೆ ಇಲ್ಲ. ಪ್ರಯತ್ನ ಮಾಡಿದರೆ ನಾನೂ ಸಹಾ ಸ್ಪರ್ಧೆಯಲ್ಲಿ ಗೆಲ್ಲಬಹುದು ಅನ್ನುವ ಆತ್ಮ ವಿಶ್ವಾಸ ಇದೆ. ಅದೇ ನಿಮ್ಮಲ್ಲಿ ಮುಖ್ಯ ಎಂದು ಹೇಳಿ ಆ ಹುಡುಗಿಯನ್ನ ಹತ್ತಿರ ಕರೆದು ತಾವು ಉಪಯೋಗಿಸುವ ಪೆನ್ ತೆಗೆದು ಕೊಟ್ಟರಂತೆ. ಆಗ ಎಲ್ಲರ ಗಮನ ಸೆಳೆದ ಮತ್ತೊಂದು ವಿಷಯವೆಂದರೆ ಆ ವಿಧ್ಯಾರ್ಥಿನಿಗೆ ಒಂದೇ ಕಾಲು.