Shridevi Patil

Tragedy Crime Others

4  

Shridevi Patil

Tragedy Crime Others

ಅಪರಾಧಗಳ ಕೇಂದ್ರ ಡ್ರಗ್ಸ್ ಸೇವನೆ.

ಅಪರಾಧಗಳ ಕೇಂದ್ರ ಡ್ರಗ್ಸ್ ಸೇವನೆ.

1 min
410


ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ.

ಅಪರಾಧ.


ಸಾಗರಿ ಅರುಣ್ ಅವರದು ಇಪ್ಪತ್ತು ವರ್ಷಗಳ ಯಶಸ್ವಿ ದಾಂಪತ್ಯವಾಗಿತ್ತು. ಅವರ ಪ್ರೀತಿಗೆ ಸಾಕ್ಷಿಯಾಗಿ ಹದಿನಾಲ್ಕು ವರ್ಷದ ಮಗಳು ಸಹ ಇದ್ದಳು.

ಸಾಗರಿ ವೈದ್ಯೆ ಆದರೆ, ಅರುಣ್ ಬಿಸಿನೆಸ್ ಮ್ಯಾನ್. ಮೀಟಿಂಗ್ ಎಂದು ಭಾರತದ ಆಚೆಯೇ ಇರುತ್ತಿದ್ದ ಅರುಣ್ ತಿಂಗಳಿಗೊಮ್ಮೆ ಮಾತ್ರ ತನ್ನ ಸ್ವಂತ ಮನೆಗೆ ಭೇಟಿ ನೀಡುತ್ತಿದ್ದ. ತಿಂಗಳಿನ ಬಹುಪಾಲು ಮಗಳೊಂದಿಗೆ ಇರದಿದ್ದನ್ನು ಒಂದೇ ದಿನದಲ್ಲಿ ತೂಗಿಸಲು ಮಗಳಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದ. ಕೆಲ ಉಡುಗೊರೆಗಳು ಅವಳಿಗೆ ಅಗತ್ಯವಿರದಿದ್ದರೂ ತನ್ನ ಶ್ರೀಮಂತಿಕೆ ತೋರಿಕೆಗಾಗಿ ಅರುಣ್ ಹೀಗೆಲ್ಲ ಮಾಡುತ್ತಿದ್ದ.

ಅತ್ತ, ಸಾಗರಿ ಸಹ ಆಸ್ಪತ್ರೆಯ ಆಡಳಿತ ಮಂಡಳಿಗೆ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಳು.ಈ ಜವಾಬ್ದಾರಿಯುತ ಕೆಲಸ ಸಾಗರಿಯ ಹೆಗಲ ಮೇಲೆ ಬಿದ್ದ ಕ್ಷಣದಿಂದ ಸಾಗರಿಯೂ ಅರುಣ್ ತರಹ ತುಂಬಾ ಬ್ಯುಸಿ ಆದಳು. ಇಬ್ಬರಿಗೂ ಹೆಸರು ಮಾಡುವ ಹುಚ್ಚಿತ್ತು. ಇದರಿಂದ ಮಗಳನ್ನು ನೋಡಿಕೊಳ್ಳಲು ಆಯಾಗಳ ನೇಮಕವಾಯಿತು. ಮಗಳ ಪ್ರತಿಯೊಂದು ಆಗುಹೋಗುಗಳ ಜವಾಬ್ದಾರಿ ಆಯಾಗಳದ್ದಾಗಿತ್ತು. 


ಯಾರು ಎಷ್ಟೇ ಪ್ರೀತಿ ಮಾಡಿ , ಕಾಳಜಿ ಮಾಡಿದರೂ ಸಹ ಅದು ಅಪ್ಪ ಅಮ್ಮನ ಪ್ರೀತಿ ಕಾಳಜಿಗೆ ಸರಿಸಮವಾದೀತೆ? ಅಪ್ಪ ಅಮ್ಮನ ಮಮತೆ , ವಾತ್ಸಲ್ಯಕ್ಕೆ ಸಾಟಿಯಾದೀತೆ? ಇಲ್ಲಿ ಸಹ ಆಗಿದ್ದು ಅದೇ. ಅಪ್ಪ ಅಮ್ಮನ ಪ್ರೀತಿಯ ಕೊರತೆಯ ಕಾರಣವೋ ಅಥವಾ ಅಪ್ಪ ಅಮ್ಮ ಕೆಲಸ ಕೆಲಸ ಅಂತ ಕೆಲಸಕ್ಕೆ ಒತ್ತು ಕೊಟ್ಟು ತನ್ನನ್ನು ಕಡೆಗಣಿಸಿದ್ದಕ್ಕೆ ಕೋಪವೋ ಏನೋ ಗೊತ್ತಿಲ್ಲ, ಮಗಳು ದಿನದಿಂದ ದಿನಕ್ಕೆ ಮಾಡುವ ಕೆಟ್ಟ ಕೆಲಸಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. 

ಡ್ರಗ್ಸ್ ಸೇವನೆ ಮಾಡುತ್ತ , ಪಾರ್ಟಿ ಪಬ್ಬು , ಮೋಜು ಮಸ್ತಿ ಅಂತ ತಿರುಗುತ್ತ ಕಾಲಹರಣ ಮಾಡುತ್ತಿದ್ದಳು. ಇವಳು ಮಾಡುವ ಕೆಲಸಗಳಿಗೆ ಒಬ್ಬ ಆಯಾ ಕುಮ್ಮಕ್ಕು ಕೊಡುತ್ತಿದ್ದಳು. ಈ ವಿಷಯ ಅಪ್ಪ ಅಮ್ಮನಿಗೆ ತಿಳಿಯಲು ಆ ಆಯಾ ಬಿಟ್ಟಿರಲಿಲ್ಲ. ಹೀಗೆ ಅವಳು ದಿನದಿಂದ ದಿನಕ್ಕೆ ಡ್ರಗ್ಸ್ ಇಂಜೆಕ್ಟ್ ಮಾಡಿಕೊಳ್ಳುತ್ತ ನಶೆಯಲ್ಲೇ ದಿನಗಳೆಯುತ್ತಿದ್ದಳು.


ಮಗಳು ಹೀಗೆ ದೊಡ್ಡ ಅಪರಾಧ ಮಾಡುವಲ್ಲಿ ಅಪ್ಪ ಅಮ್ಮನೂ ಕಾರಣರಾದರು.


Rate this content
Log in

Similar kannada story from Tragedy