Vijaya Bharathi

Abstract Inspirational Others

2  

Vijaya Bharathi

Abstract Inspirational Others

ಆತ್ಮ ವಿಶ್ವಾಸ

ಆತ್ಮ ವಿಶ್ವಾಸ

2 mins
112


ಕುಸುಮ ತುಂಬಾ ಧೈರ್ಯಶಾಲಿ ಹುಡುಗಿ.


ತಾನು ಎಂತಹ ಪರಿಸ್ಥಿತಿಯನ್ನೂ ಎದುರಿಸಿ ಗೆಲ್ಲಬಲ್ಲೆನೆಂಬ ಅತಿಯಾದ ಆತ್ಮವಿಶ್ವಾಸ. ಅವಳನ್ನು ನೋಡಿದವರೆಲ್ಲ ರೂ ಅವಳಿಗೆ "ದುರಹಂಕಾರಿ" ಎನ್ನುವ ಮಟ್ಟಿಗೆ ಅವಳಿಗೆ ಅವಳ ಮೇಲೆ ವಿಶ್ವಾಸ ವಿತ್ತು. ತುಂಬಾ ಬುದ್ಧಿವಂತೆ ಯಾಗಿದ್ದ ಕುಸುಮ ಎಲ್ಲಾ ತರಗತಿಗಳ ಪರೀಕ್ಷೆ ಯಲ್ಲೂ ಉತ್ತಮ ಅಂಕಗಳನ್ನು ಪಡೆಯುತ್ತಿದ್ದುದು ಅವಳ ಆತ್ಮ ವಿಶ್ವಾಸ ವನ್ನು ಮತ್ತೂ ಹೆಚ್ಚಿಸಿತು. ಒಂದು ವೇಳೆ ಅವಳು ನಿರೀಕ್ಷಿಸಿದಂತೆ ಅಂಕಗಳು ಬರದಿದ್ದರೆ, ಮನೆಯವರಿಗೆ ಅವಳ ಆರ್ಭಟವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಅತಿಯಾದ ಆತ್ಮವಿಶ್ವಾಸ ದಿಂದ ಮುಂದೆ ಅವಳು ತುಂಬಾ ನೋವು ನಿರಾಸೆ ಅನುಭವಿಸಬೇಕಾಗುತ್ತಿತ್ತು.


ಕೆಲವೊಮ್ಮೆ ಅವಳಿಗೆ ಅವಳ ಜೀವನದಲ್ಲಿ ಅನೇಕ ತೊಂದರೆಗಳೂ ಎದುರಾದವು. ಅವಳ ಜೀವನದ ಮುಖ್ಯ ವಾದ ತಿರುವುಗಳಲ್ಲಿ ಅವಳ ಅತಿಯಾದ ಆತ್ಮವಿಶ್ವಾಸ ಸೋಲಿಗೆ ದಾರಿ ಮಾಡಿಕೊಡುತ್ತಿತ್ತು.


ಒಮ್ಮೆ ವಿದ್ಯಾರ್ಥಿ ದೆಸೆಯಲ್ಲಿ ಒಂದು ಮುಖ್ಯ ವಾದ ಪರೀಕ್ಷೆ ಯ ರಿಸಲ್ಟ್ ಬಂದಾಗ ನಿರೀಕ್ಷಿತ ಅಂಕಗಳು ಬರದೇ, ಮುಂದಿನ ವಿದ್ಯಾಭ್ಯಾಸಕ್ಕೆ ಪಾಡು ಪಟ್ಟಿದ್ದು, ಇದೇ ರೀತಿ ಮನೆಯ ಹಿರಿಯರ ಹಿತವಚನಗಳಿಗೆ ಕಿವಿಗೊಡದೇ ವಿವಾಹದಂತಹ ದೊಡ್ಡ ತಿರುವಿನಲ್ಲಿ ಅನೇಕ ರೀತಿಯ ತೊಂದರೆಗೆ ಒಳಗಾಗಿದ್ದು,ಅತಿಯಾಗಿ ನಂಬಿಕೊಂಡಿದ್ದ ಜೀವನ ಸಂಗಾತಿಯ ಮುಖವಾಡ ಗಳು ಒಂದೊಂದೇ ಕಳಚುತ್ತಾ ಹೋದಾಗ ,ಹಂತ ಹಂತವಾಗಿ ಅವಳು ನೋವು ಅನುಭವಿಸುತ್ತಾ ಹೋದದ್ದು, ಎಲ್ಲವೂ ಅವಳ ಅತಿಯಾದ ಆತ್ಮವಿಶ್ವಾಸ ದ ಫಲಿತಗಳಾದವು.

ಹತ್ತು ವರ್ಷಗಳ ವೈವಾಹಿಕ ಜೀವನದಲ್ಲಿ ಸೋಲುತ್ತಾ ಹೋದ ಕುಸುಮ, ಒಂದು ಬಾರಿ ತನ್ನ ತಾಯಿಯ ಹತ್ತಿರ "ಅಮ್ಮ, ನಾನು ಕೆಲವರನ್ನು ತುಂಬಾ ನಂಬಿ ಮೋಸ ಹೋದೆ. ನಾನು ಅಂದುಕೊಂಡಂತೆ ಏನೂ ನಡೆಯಲಿಲ್ಲ. ಈಗ ಹಿಂದಕ್ಕೆ ಬಾರದಷ್ಟು ದೂರ ಸಾಗಿ ಬಿಟ್ಟಿದ್ದೇನೆ. ನನ್ನ ಮೊದಲಿನ ಆತ್ಮ ವಿಶ್ವಾಸ ಈಗ ಕುಗ್ಗಿ ಹೋಗಿ, ನನ್ನ ಮೇಲೆ ನನಗೇ ನಂಬಿಕೆ ಕಳೆದುಕೊಂಡಿದ್ದೇನೆ."ಎಂದು ಬೇಸರದಿಂದ ಹೇಳಿಕೊಂಡಾಗ ,. ಅವಳ ಅಮ್ಮ ಅವಳಿಗೆ ತಿಳಿಹೇಳುತ್ತಾ,ಅವಳಿಗೆ ಧೈರ್ಯ ತುಂಬುತ್ತಾಳೆ.


"ನೋಡು ಮಗು, ಮನುಷ್ಯ ಯಾವುದೇ ಕೆಲಸ ಮಾಡುವುದಕ್ಕೂ ಅವನಲ್ಲಿ ಆತ್ಮ ವಿಶ್ವಾಸ ವಿರಬೇಕಾಗಿರುವುದು ತುಂಬಾ ಮುಖ್ಯ. ತನ್ನ ಸಾಮರ್ಥ್ಯದ ಬಗ್ಗೆ ತನಗೇ ವಿಶ್ವಾಸ ವಿಲ್ಲದೇ ಇರುವವನು ಏನನ್ನೂ ಸಾಧಿಸಲಾರ. ಹಾಗಂತ ಅತಿಯಾದ ಆತ್ಮವಿಶ್ವಾಸವೂ,ಕೆಲವು ಸಾರಿ ಶಾಪವಾಗಲೂ ಬಹುದು. ನೀನು ನಿನ್ನ ಜೀವನದಲ್ಲಿ ನಿನ್ನ ಅತಿಯಾದ ಆತ್ಮವಿಶ್ವಾಸದಿಂದ ಮನುಷ್ಯ ರ ಸ್ವಭಾವವನ್ನು ಗುರುತಿಸುವುದರಲ್ಲಿ ಮೋಸ ಹೋದೆ. ನಿನ್ನ ಮದುವೆಯ ವಿಷಯದಲ್ಲಿ ನಿನ್ನ ಗಂಡನಾಗುವವನ ಮಾತಿನ ಮೇಲೆ ಅತಿಯಾದ ನಂಬಿಕೆ ಇಟ್ಟು, ನಾವು ಹಿರಿಯರು ಹೇಳಿದ ಸಲಹೆಯನ್ನು ತಿರಸ್ಕರಿಸಿದೆ. ಅದರ ಪರಿಣಾಮವಾಗಿ ನಿನ್ನ ಜೀವನದಲ್ಲಿ ತುಂಬಾ ಎಡರು ತೊಡರುಗಳನ್ನು ಎದುರಿಸಬೇಕಾಯಿತು. ಈಗ ನೀನು ಯುಕ್ತಾಯುಕ್ತ ವಿವೇಚನೆಗಳಿಂದ ಎಲ್ಲರನ್ನೂ ಸರಿಯಾಗಿ ಅಳೆಯುವುದನ್ನು ಕಲಿತುಕೊಳ್ಳಬೇಕು. ಇದುವರೆಗೂ ನಿನ್ನ ಅತಿಯಾದ ಆತ್ಮವಿಶ್ವಾಸದಿಂದ ಸರಿತಪ್ಪುಗಳನ್ನು ಗುರುತಿಸುವಲ್ಲಿ ತಪ್ಪಾಗಿಹೋಗಿದೆ.


ಆದರೆ ಕಾಲ ಮಿಂಚಿಲ್ಲ.. ಇನ್ನು ಮುಂದೆ ಎಲ್ಲವನ್ನೂ ಅಳೆದು ತೂಗಿ ನೋಡಿ, ಮುಂದೆ ಹೆಜ್ಜೆ ಇಡು. ನೀನು ಹೆಜ್ಜೆ ಇಡುವ ದಾರಿಯ ಬಗ್ಗೆ ನಿನಗೆ ಆತ್ಮ ವಿಶ್ವಾಸ ವಿರಲಿ,ಆದರೆ ಅದು ಅತಿಯಾಗಿರುವುದು ಬೇಡ. ಮುಂದೆ ಎಲ್ಲವೂ ಸರಿಹೋಗುತ್ತದೆ. ಡೊಂಟ್ ವರಿ.ಆಲ್ ದ ಬೆಸ್ಟ್"ಎಂದು ಹೇಳಿ, ಅಮ್ಮ ,ಕುಸುಮ ಳ ಬೆನ್ನು ತಟ್ಟಿ ಅವಳನ್ನು ಸಮಾಧಾನ ಪಡಿಸಿದಾಗ, ಅಮ್ಮನ ಮಾತುಗಳನ್ನು ತದೇಕ ಚಿತ್ತದಿಂದ ಕೇಳಿದ ಕುಸುಮ , ಅಮ್ಮ ನನ್ನು ತಬ್ಬಿಕೊಂಡು "ಥ್ಯಾಂಕ್ಸ್ ಅಮ್ಮ, ನೀನೆಷ್ಟೊಂದು ತಿಳಿದುಕೊಂಡಿದ್ದೀಯ ಅಂತ ನನಗೆ ಇಂದೇ ಗೊತ್ತಾಗಿದ್ದು" ಎಂದಾಗ


ಕುಸುಮ ಳ ಅಮ್ಮ ಮಗಳ ಬೆನ್ನು ನೇವರಿಸುತ್ತಾ "ಹಿತ್ತಲ ಗಿಡ ಮದ್ದಲ್ಲ" ,,ಎಂದಾಗ ನಗುವ ಸರದಿ ಇಬ್ಬರದೂ ಆಯಿತು.


Rate this content
Log in

Similar kannada story from Abstract