Ranjitha Agarwal.P

Tragedy Others

2  

Ranjitha Agarwal.P

Tragedy Others

ಆಕೆಯ ಕೊನೆಯ ಕೈ ತುತ್ತು

ಆಕೆಯ ಕೊನೆಯ ಕೈ ತುತ್ತು

6 mins
122


ಸೂಚನೆ: ಕಥೆಯ ಎಲ್ಲಾ ಪಾತ್ರಗಳು ಕಾಲ್ಪನಿಕ


ಪಾತ್ರಗಳು :

ಮಯುರ್ : ಎಂಜಿನಿಯರ್ ಹಾಗೂ ಒಂದು ದೊಡ್ಡ ಸಂಸ್ಥೆಯ ಮುಖ್ಯಸ್ಥ

ಐಶ್ವರ್ಯ : ಮಯುರ್ ನ ಹೆಂಡತಿ

ಕಾವೇರಿ : ಮಯುರ್ ನ ತಾಯಿ 


ರಾತ್ರಿ 10 ಗಂಟೆ 


ಮಯುರ್ : ಥೋ... ಇದೆಂತಹ ತಿಂಡಿಯೋ... ಏನೋ .. ( Swiggy ಇಂದ ತರಿಸಿದ ಫ್ರೈಡ್ ರೈಸ್ ನ ತಟ್ಟೆಯಲ್ಲಿ ಬೆರಳನ್ನು ಆಡಿಸುತ್ತಾ ಏನೋ ಯೋಚನೆಯಲ್ಲಿ ಮುಳುಗಿದ್ದ) ಇದಕ್ಕಿಂತ ನಮ್ಮ ಹಳೆ ವಠಾರದ ಟೀ, ಬನ್ನೇ ಲೇಸು ( ಎಂದು ಗುನುಗುತ್ತ ಆತ ಊಟ ಬಿಟ್ಟು ಮೇಲೆದ್ದ) 


ಆತ ಮನೆಯ ಹಾಲ್ನಲ್ಲಿ ನಿಂತು ಒಂದು ಬಾರಿ ಅಲ್ಲಿ ಇಲ್ಲಿ ಕಣ್ಣಾಡಿಸಿದ... 

ವಿಶಾಲವಾದ ಮನೆ, ಎಲ್ಲಿ ನೋಡಿದರೂ ಮಿನುಗುತ್ತಿರುವ ಲೈಟ್ ಗಳು, ಹಾಗೂ ಅತ್ಯಂತ ಬೆಲೆ ಬಾಳುವ ಸೋಫಾ, ಚೇರ್... ಇನ್ನೂ ಏನೇನೋ.. ಕಂಗೊಳಿಸುತಿದ್ದವು... ಆ ಮನೆ ಅರಮನೆಯಷ್ಟೇ ವೈಭವದಿಂದ ಕಟ್ಟಿಸಿದ್ದ ಆತನು..! 


ಆದರೆ.. ಅವನ ಬಳಿ ವಿಶಾಲ ಮನೆಯಿದ್ದರೆ ಏನು ಬಂತು ಸ್ವಾಮಿ?.. ಆತನ ಆ ಮನೆಯಲ್ಲಿ ಎಲ್ಲಾ ಇದ್ದರೂ ಸಹ ಅವ ಒಂಟಿ..!! ಯಾರೂ ಇರಲಿಲ್ಲ ಅವನೊಡನೆ...!! ****


ಮಯುರ್ : ಹ್ಹಾ.. ಇವತ್ತು ಐಶು ಜೊತೆ ವಾಕಿಂಗ್ ಹೋಗ್ತೀನಿ.. ತುಂಬಾ ದಿನಾ ಆಯಿತು ಅವ್ಳ ಜೊತೆ ಹೊರಗಡೆ ಹೋಗಿ... ಬರ್ತಾ ಇಬ್ರು ಐಸ್ ಕ್ರೀಮ್ ತಿನ್ತಾ... ಆರಾಮಾಗಿ ಸುತ್ತಾಡ್ ಕೊಂಡು ಅಹಾ..! ಇಗ್ಲೇ ಕರಿತೀನೀ..

ಆತ ಖುಷಿಯಿಂದ... ತನ್ನ ಮಡದಿಯ ಕೋಣೆಯ ಬಳಿ ತಲುಪಿದ.. ಆದರೆ ಅವನ ಹೆಜ್ಜೆ ಏಕೋ ಏನೋ ಒಳಗೆ ಹೋಗಲು ಹಿಂದೆ ಮುಂದೆ ಹೋರಾಡಲು ಯೋಚಿಸಿದವು..! 


ಆತ ಆಕೆಯ ಬೆನ್ನನ್ನು ತಟ್ಟಿದ..ಆಗ ಮಂದಸ್ಮಿತ ನಗೆ ಇತ್ತು ಅವನ ಮೊಗದಲ್ಲಿ...


ಆಕೆ ಅವನೆಡೆ ತಿರುಗುತ್ತಾ " ಒಂದು ನಿಮಿಷಾ..!" ಎಂದು ಸನ್ನೆ ಮಾಡಿದಳು.. ಹಾಗೂ ತನ್ನ ಸ್ನೇಹಿತೆ ಬಳಿ ಫೋನ್ ನಲ್ಲಿ ಮಾತನಾಡುವುದನ್ನು ಮುಂದುವರೆಸಿದಳು..!! ಆಕೆ ತನ್ನ ಕೊಠಡಿಯ ಇಂಚು ಇಂಚಲ್ಲೂ.. ಅತ್ತಿತ್ತ ಓಡಾಡು ತಿದ್ದಳು.. ಆಕೆಯ ವರ್ಚಸ್ಸು ಹೇಗಿತ್ತು ಎಂದರೆ ಅಲ್ಲಿ ಮಯುರ್ ಇಲ್ವೇ ಇಲ್ಲಾ.. ಇದ್ದರೂ ನಂಗೇನು? ಹಂಗಿತ್ತು..  


ಆಸು ಪಾಸು 1 ಗಂಟೆ ಆದರೊ ಸಹ ಆಕೆಯ ಆ ಒಂದು ನಿಮಿಷ ತೀರೇ ಇಲ್ಲಾ ಎಂಬಂತೆ..ಆಕೆ ಮಾತಿನಲ್ಲೆ ಮಗ್ನಳಾಗಿದ್ದಳು..


ಆತ ಒಂದು ಮಾತು ಆಡದೇ.. ಕೋಣಿಯಿಂದ ಹೊರ ಹೊರಟ..! 

ಐಶ್ವರ್ಯ.. ಆತ ಹೊರ ಹೋದದ್ದನ್ನು ಗಮನಿಸಿಯೂ ಗಮನಿಸದಂತೆ.. ಕೆಲಸಕ್ಕೆ ಬಾರದ ವದಂತಿಗಳ ಬಗ್ಗೆ ತನ್ನ ಸ್ನೇಹಿತೆಯ ಜೊತೆ ವಟವಟ ಎಂದು ಮಾತಿಗಿಳಿದಳು.

ಮಯೂರ್ ಗೆ ಬೆಜಾರಾಯ್ತೊ ಏನೋ.. ಅದರ ಬಗ್ಗೆ ಆಕೆ ಚಿಂತೆ ಸಹ ಮಾಡಲಿಲ್ಲ .. 


ಮಯುರ್ ತನ್ನ ನೈಟ್ ಟ್ರಾಕ್ ಪ್ಯಾಂಟ್ ಹಾಗೂ ಒಂದು ಸಡಿಲವಾದ ಟೀ ಶರ್ಟ್.. ಖಾಲಿ ಕಿಸೆಯೊಂದಿಗೆ ರಸ್ತೆಗಿಳಿದ..  

ಅಬ್ಬೆಪಾಲಿಯ ತರಹ ತಾನು ಎಲ್ಲಿ ಹೋಗಬೇಕು.. ಎಲ್ಲಿಗೆ ಹೋಗುತಿದ್ದಿನಿ.. ಒಂದೂ ಚಿಂತಿಸದೇ.. ನಡೆಯುತ್ತಲೇ ಇದ್ದ]] 


ಸ್ವಲ್ಪ ದೂರ ನಡೆದಾಕ್ಷಾಣ.. ಅವನ ಎದುರುಗಡೆ.. ಅವನ ಹಳೆ ಸ್ನೇಹಿತ ಸಿಕ್ಕ..  ವಾಸ್ತವದಲ್ಲಿ ಆತ ಬಡವ..!! ಒಂದು ಚಿಕ್ಕ ಕಂಪನಿಯಲ್ಲಿ ವಾಚ್ ಮ್ಯಾನ್ ಕೆಲ್ಸ ಮಾಡ್ತಿದ್ದ.. ಇಗಲೂ ಸಹ ಅವ ಅದೇ ಸಮವಸ್ತ್ರ ದಲ್ಲಿದ್ದ..! 


ಮಯೂರ್ ಅವನನ್ನು ಮೊದಲು ಗುರುತಿಸಲಿಲ್ಲ.. ಆದರೆ ಅವನ ಸ್ನೇಹಿತ ನೋಡಿದಾಕ್ಕೆಯೇ.. ಮಯೂರ್ ನನ್ನು ಗುರುತಿಸಿ ಮಾತಿಗೆಳೆದ..


ಅರವಿಂದ್ : ಅರ್ರೆ.. ಮಯೂ... ನೀನು.. ಇಷ್ಟೋತ್ತಲ್ಲೀ? ಇಲ್ಲೀ ಹೇಗೆ?? ((ಖುಷಿ ಮತ್ತು ಆಶ್ಚರ್ಯ ವಾಗುತ್ತಾ..)) 


( ಮಯೂರ್ ಪಾಪ.. ಯಾರೆಂದು ಗುರುತಿಸಲಾಗದೇ.. ಅರವಿಂದನನ್ನೇ ದಿಟ್ಟಿಸಿದ.. ಒಮ್ಮೆಲೆ.. ಆತನಿಗೆ ನೆನಪಾಯಿತು.. ಅರವಿಂದ ಆತನ ಬಾಲ್ಯದ ಗೆಳೆಯನೆಂದು...) 


ಮಯೂರ್: ನೀನು ಅರವಿಂದನಲ್ಲವ? 


ಅರವಿಂದ್: ಹ್ಹಾ.. ನಾನೇ..!! ತುಂಬಾ ಖುಷಿಯಾಯ್ತು.. ನಿನ್ನ ಇಷ್ಟ್ ವರ್ಷ ಆದ್ಮೆಲ್ ನೋಡಿ.. ಮತ್ತೆ.. ಕಾವೇರಿ ಅಮ್ಮಾ ಹೇಗಿದ್ದಾರೆ? ಮದುವೆ ಮಕ್ಳೂ ಮರೀ ಆಯ್ತಾ? 


ಮಯೂರ್: ಹ್ಹಾ.. ಮದುವೆ ಆಯ್ತು.. ಮಗು.. ಫ್ಯಾಮಿಲಿ ಪ್ಲಾನಿಂಗ್ ಮಾಡಿದ್ದೀವಿ.. ಅಷ್ಟುಕ್ಕೂ ಇಷ್ಟು ಬೇಗ ಇದೆಲ್ಲಾ ಯಾಕೆ ಅಂತಾ.. (ಇದನ್ನು ಹೇಳುತ್ತಾ ಆತ ಹಳೆಯ ನೆನಪಲ್ಲಿ ಮುಳುಗಿದ..)


#flashback


ಐಶ್ವರ್ಯ : ಬೇಬಿ.. ನಂಗೇ ಇಗ್ಲೇ ಮಗೂ ಬೇಡ.. ಫಿಗರ್ ಹಾಳಾಗುತ್ತವೆ.. ಇನ್ನೂ ಸ್ವಲ್ಪ ದಿವ್ಸ ಏಂಜಾಯ್ ಮಾಡ್ಬೇಕು ನಾನು... ಅಂದರೆ ನಾವಿಬ್ಬ್ರು.. 


#Flashbck_ends


ಅರವಿಂದ: ಹೊ.. ಹೌದಾ..ಸರೀ..ಬಾ..ನಮ್ ಕ್ವಾಟ್ರಸ್ ಇಲ್ಲೇ ಹತ್ರ.. ಅಮ್ಮ ಮತ್ತೆ ನನ್ನ್ ಹೆಂಡ್ತಿ ಮಕ್ಳು ಎಲ್ರನ್ನೂ ಮಾತಾಡ್ಸುವಂತೆ.. 


ಮಯೂರ್: ಇಷ್ಟೊತ್ತಲ್ಲಾ? ಎಲ್ರೂ ಮಲ್ಗಿರ್ತಾಲ್ವಾ? 


ಅರವಿಂದ್ : ಹೇ.. ಇಲ್ಲಾ ನಾ ಬರೋ ವರ್ಗೂ ಅಮ್ಮ, ಹೆಂಡ್ತೀ ಎದ್ದಿರ್ತಾರೆ.. ನೀ ಬಾರಪ್ಪ ಸುಮ್ನೆ..  


(ಮಯೂರ್ ಎಲ್ರನ್ನೂ ಮಾತಿಡ್ಸಿದ್ದ..) 


ಅ. ಅಮ್ಮ: ನಡಿರೀ.. ಮೂವರು ಕೈ ತೊಳ್ಕೊಂಡ್ ಬನ್ನಿ.. ಊಟಕ್ಕೆ.. ಇವತ್ತು ಬೇಳೆಸಾರು ಅನ್ನ ಜೊತೆಗೆ ಹಪ್ಪಳನೂ ಇದೆ... ಇವತ್ತು ನಾನೇ ಎಲ್ರುಗೂ ಕೈ ತುತ್ತು ಹಾಕ್ತೀನಿ


ಮಯೂರ್: ಇಲ್ಲಾ ಅಮ್ಮೀ.. ನಂದ್ ಊಟ ಆಯ್ತು ನಾ ಹೊರಡ್ತೀನಿ. ನೀವ್ ಊಟ ಮಾಡಿ.. 


ಅರವಿಂದ್ : ಅದ್ಹೆಂಗ್ ಅನ್ಕೊಂಡೆ ಹಂಗೇ ಹೋಗಕ್ಬ್ತೀನಿ ಅಂತಾ? ನೆನ್ಪಿದೆನಾ.. ಯಾವಗ್ಲೂ ನಾನ್ ನಿಮ್ಮ ಮನೆಲೇ ಜಾಸ್ತಿ ಇರ್ತಿದ್ದೆ.. ಕಾವೇರಿ ಅಮ್ಮ ಇಬ್ರುಗೂ ತಿನುಸ್ತಾ ಇದ್ರು.. ಕೆಲವೊಮ್ಮೆ ಅಂತೂ ಚೆನ್ನಾಗಿದೆ ಅಂತ ಗೊತ್ತಿಲ್ಲದೆ ಅವರ ಪಾಲಿಂದು ತಿಂದಿದ್ದೂ ಉಂಟು ನಾವಿಬ್ರೂ..


( ಆತನ ಮಾತನ್ನು ಕೇಳಿದಾಕ್ಷಣ ಹಳೆಯ ಎಲ್ಲಾ ನೆನಪು ಕಣ್ಣು ಮುಂದೆ ಬಂದಂತಾಯಿತು ಮಯೂರ್ಗೆ.. ಅರವಿಂದನ ಅಮ್ಮನ ದನಿ ಕೇಳಿ ಮಯೂರ್ ತನ್ನ ಲೋಕದಿಂದ ಹೊರ ಬಂದ..) 


ಅ. ಅಮ್ಮ : ಎಂತಾ ಯೋಚ್ನೆ ಮಾಡೋದು ನೀನು..ಬೇಗ ಬೇಗ ಕೈ ತೊಳ್ಕೋಂಡ್ ಬನ್ರೀ.. ತುಂಬಾ ವರ್ಷ ಆದಮೆಲ್ ನಿಂಗೆ ಕೈಯಾರೇ ಸ್ವಲ್ಪ ತಿನ್ಸೋ ಭಾಗ್ಯ ಬಂದಿದೆ..  


( ಆಕೆಯ ಒಲುಮೆಯ ನುಡಿಗಳು ಮಯುರ್ ನ ಮುಖದ ಮೇಲೆ ನಗು ಮೂಡಿಸಿತು.. ಹಾಗೂ ಅವ ಕೈ ತೊಳೆಯಲು ಎದ್ದುನಿಂತು ಸಿದ್ಧವಾದ..) 


ಅ. ಹೆಂಡತಿ : ಅತ್ತೇ.. ಆದರೆ ಮೂವರಿಗಾಗುವಷ್ಟೇ ಅನ್ನ ಇರೋದು.. (ಅಡುಗೆ ಮನೆಯಲ್ಲಿ ಅತ್ತೆಯ ಕಿವಿಯಲ್ಲಿ ಪಿಸುಗುಟ್ಟಿದಳು) 


ಅ. ಅಮ್ಮ : ಆರ್ರೇ.. ಹಂಚಿಕೊಂಡು ತಿಂದರಾಯ್ತು.. ನಿಂಗೊತ್ತಾ? ಅದೆಷ್ಟೋ ರಾತ್ರಿ ಮಯೂರ್ ನ ಅಮ್ಮ ನಿನ್ನ್ ಗಂಡಂಗೆ ತನ್ನ ಊಟ ಕೊಟ್ಟು.. ಬರೀ ನೀರು ಕುಡಿದು ಉಪವಾಸ ಮಲಗಿದಾಳೆ? ಅವಳಿಗೆ ಗೊತ್ತಿತ್ತು.. ಅರವಿಂದ ತಿಂದ್ರೇ ನಂಗಿರಲ್ಲಾ, ನಾ ತಿಂದ್ರೇ ಅವನ್ಗೀರಲ್ಲಾಂತ.. 

ಅದ್ಕೆ ಅವ್ಳು ಅವನಿಗೂ ಊಟ ಮಾಡ್ಸಿ ಕಳ್ಸೋಳು.

ಅವಳು ಮಾಡಿರೋ ಅಷ್ಟ್ ಒಳ್ಳೆ ಕೆಲ್ಸದ್ ಮುಂದೆ ಇದೆಲ್ಲಾ ಯಾವ ಲೆಕ್ಕ.. ನಡಿ ನಡಿ..ಎಲ್ರೂ ಹಸ್ಕೊಂಡಿರ್ತೀರಾ.. (ಮಯೂರ್ ಎಲ್ಲಾ ಕೇಳಿಸಿ ಕೊಂಡ) 


ಅ. ಅಮ್ಮ... ಮೂವರಿಗೂ ಕೈತುತ್ತು ನೀಡಲು ಶುರು ಮಾಡಿದರು.. ಆದರೆ ಅವರು ಮಾತ್ರ ಏನೂ ತಿನ್ನಲಿಲ್ಲ 

ಮಯೂ ಪ್ರೀತಿಯಿಂದ ಅವರಿಗೆ ಒಂದು ತುತ್ತು ತಿನ್ನಿಸಿದ.. ಇದನ್ನು ಗಮನಿಸಿದ ಅರವಿಂದ್ ಮತ್ತು ಅವನ ಹೆಂಡತಿಯು ಅವರಿಗೆ ತಿನ್ನಿಸಿದರು.. ಇದರಿಂದ ಎಲ್ಲರ ಹಸಿವು ಶಮನವಾಯಿತು..


(ಮಯೂ.. ಅರವಿಂದ್ ನ ಮನೆಯಿಂದ ಹೊರಟನು.. ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ತನ್ನ ತಪ್ಪು ಸರಿ ವಿಚಾರಗಳ ಗುಂಗಿನಲ್ಲೇ ಮಗ್ನವಾದ..) 


ಒಮ್ಮೆಲೆ ಆತನ ಮನಸ್ಸಾಕ್ಷಿ ಮಾತಿಗಿಳಿಯಿತು


ಯಾರು ನಾನು?? ಈ ಸಿಟಿಯ ಪ್ರತಿಷ್ಠಿತ ಉದ್ಯಮಿ.. ಹೆಸರಿಗೆ ಶ್ರೀಮಂತ... ಆದರೆ ಹೃ ದಯವಂತಿಗೆಯಲ್ಲಿ ಕಡು ಬಡವ..!!! 


ಹಾಸ್ಯಾಸ್ಪದವೇನೆಂದರೆ... ನಾಲಕ್ಕು ಒಳ್ಳೆಯ ಮಾತನಾಡಲು ನನ್ನವರು ಎಂದು ಯಾರೂ ಇಲ್ಲ.. ಇದ್ದರೂ ಇಲ್ಲದಂತಹ ಸಂದರ್ಭ..!! 

ಅಡುಗೆ ಮಾಡಿ ಬಡೆಸುವುದಿರಲಿ.. ನನ್ನ ಜೊತೆ ಕುಳಿತು ತಿನ್ನುವವರು ಇಲ್ಲ..

ಆದರೂ ನಾನೊಬ್ಬ ಗ್ರೇಟ್ ಬ್ಯೂಸಿನೆಸ್ ಮ್ಯಾನ್...


1 ವರ್ಷ ಆದಮೆಲ್ ಅರ್ಥ ಆಗ್ತಿದೆ.. ನಾ ಏನ್ ಕಳ್ಕೋಂಡೆ ಅಂತಾ


ಅರವಿಂದ ಪಿಯುಸಿ ಅಷ್ಟೂ ಒದಕಾಗ್ಲಿಲ್ಲಾ.. ಆದರೆ ಇಗ ಅವನು ಒಬ್ಬ ವಾಚ್ಮಾನ್... ನನ್ನತ್ರ ಎನಿಲ್ವೋ ಅದೆಲ್ಲ ಅವ್ನತ್ರ ಇದೆ...


ಎಲ್ರೂ ಏನು ಅಂತ ಯೋಚಿಸ್ತಿದಿರಾ? 

ಅವ್ನತ್ರ ಕಷ್ಟ ಸುಖ ಹಂಚ್ಕೊಳಕ್ಕೆ ಅಮ್ಮ, ಹೆಂಡತಿ, ಮಕ್ಕಳು ಇದ್ದಾರೆ.. ಅವರು ಅವ್ನು ಬರೋ ವರ್ಗೂ ಕಾದು ಊಟ ಹಂಚಿಕೊಂಡು ತಿಂತಾರೆ..!! ಮತ್ತೆ ಸುಖವಾಗಿ ನಿದ್ದೆ ಮಾಡ್ತಾರೆ..


ಆದರೆ ನಾನು? ಇಂಜಿನಿಯರ್ ಆದೆ.. ತುಂಬಾ ಆಸ್ತಿಯನ್ನು ಗಳಿಸಿದೆ.. ಇನ್ನೂ ಗಳಿಸ್ತಾನೇ ಇರ್ತೀನಿ.. ಬಾಸ್ ಮಗಳು ಜೊತೆ ಧಾಮ್ ಧೂಮ್ ಅಂತ ಮದ್ವೆನೂ ಆಯ್ತು..!!

ಆದರೆ ನನ್ನ ಹೆಂಡತಿಗೆ ಬರೀ ಅಷ್ಟೈಶ್ವರ್ಯಾನ ಹೇಗೆ ಸಂಭೊಗಿಸೋದು ಅದೇ ಚಿಂತೆ.. ಬರೀ ಎಂಜಾಯ್ಮೆಂಟ್ದೇ ಗುಂಗು..


ನಂಗೆ ಅಂತ ಅರ್ಧ ಗಂಟೆನೂ ಇಲ್ಲ.. ಅಡುಗೆ ಮಾಡಿ ಕೊಡು ಅಂತಾನು ಹೇಗೆ ಕೇಳೋದಪ್ಪ..? ಯಾಕೆಂದರೆ ಆಕೆ ಆಗ ಶ್ರೀಮಂತ ನ ಮಗಳು ಈಗ ಶ್ರೀಮಂತನ ಮಡದಿ.. ಅವಳು ಇದೆಲ್ಲಾ ಮಾಡ್ತಾಳೆ ಅಂತಾ ನಾ ತಿಳ್ಕೊಳಕ್ಕ್ ಆಗುತ್ತಾ? 


ಆಕೆ ಮಾತ್ನ ಕೆಳ್ಕೊಂಡ್ ನನ್ನ ಆರೋಗ್ಯ ಸರಿ ಇಲ್ಲದೆ ಇರೋ ಅಮನ್ನ ಯಾವುದೋ ಒಂದು ಆಶ್ರಮದಲ್ಲಿ ಬಿಟ್ಟು ಬಂದೆ.. ದುಡ್ಡು ಕಟ್ಟಿ.. ಯಾರೋ ಗೊತ್ತಿಲ್ಲದೆ ಇರೋ ಆ ಜನದ್ ಮಧ್ಯೆ


ಇವತ್ತೂ ನೆನಪಿದೆ ನಂಗೆ... ಬಿಟ್ಟು ಬರಬೇಕಾದರೆ ಏನು ಹೇಳಿದ್ರು ಮತ್ತೆ ಏನ್ ಕೇಳಿದ್ರೂ ಅಂತ..


(( ಆತ ಆ ದಿನ ಏನೇನಾಗಿತ್ತು ಎಂದು ನೆನಪಿಸಿಕೊಳ್ಳಲು ಶುರು ಮಾಡಿದ))


ಅನಾಥಶ್ರಮದಲ್ಲಿ ಮಯುರ್ ತನ್ನ ತಾಯಿಯಯನ್ನು ಬಿಟ್ಟು ಹೋಗಲು ಬಂದ ದಿನ


ಕಾವೇರಿ (ಮ. ಅಮ್ಮ) : ಮಯುರ್... 


ಮಯುರ್ : ಹ್ಹಾ.. ಅಮ್ಮಾ.. ಏನಾದರೂ ಬೇಕಿತ್ತಾ? 


ಕಾವೇರಿ : ನಿನ್ನ ಒಂದು 10 ನಿಮಿಷ ನನ್ಗೋಸ್ಕರ ಮೀಸಲಿಡ್ತೀಯಾ..?? ( ಸಣ್ಣ ಭರವಸೆಯೊಂದಿಗೆ) 


ಮಯುರ್ : ಆಯ್ತು ಅಮ್ಮ... ಆದರೆ ಯಾಕೆ? (ಸ್ವಲ್ಪ ಯೋಚಿಸಿದ ನಂತರ)


ಕಾವೇರಿ : ಕೊನೆ ಸಾರಿ ನಂಗೆ ನನ್ ಕೈಯಾರೆ ಮಾಡಿದ ಆಲೂ ಪರಾಥ ತಿನ್ನುಸ್ಬೇಕೂ ಅಂತ ಆಸೆ ಆಗ್ತಿದೆ.. ಮತ್ತೆ ಇನ್ಮುಂದೆ ನಾ ನಿನಗೆ ತಿನ್ಸುಕಾಗುತ್ತೋ ಇಲ್ವೋ ಯಾರಿಗೊತ್ತು? ನಾ ತಿನ್ನುಸ್ಬೊದಾ?


(( ಆತ ಹ್ಹೂ.. ಅಂತ ತಲೆ ಅಲ್ಲಾಡಿಸಿ.. ಅವರ ಕೈಯಿಂದ ತನಗೆ ಪರಮ ಪ್ರಿಯವಾದ ಪರಾಥ ತಿಂದ))


ಕಾವೇರಿ : ಅಯ್ಯೋ ಹುಚ್ಚಾ.. ಇಷ್ಟೊಂದು ಹಸ್ಕೋಡು ನನ್ನ ಇಲ್ಲಿ ಬಿಡೋಕೇ ಅಂತ ಬಂದ್ಯಾ?? ನಂಗೊತ್ತಿತ್ತು ನೀನು ಏನು ತಿಂದಿರಲಿಲ್ಲಾ ಅಂತಾ ಅದ್ಕೆ ಬರಬೇಕಾದರೆ ಇದನ್ನ ಮಾಡಿಕೊಂಡು ತಂದಿದ್ದೂ..  (ತಲೆ ನೇವರಿಸುತ್ಢಾ)


(ಮಯುರ್ಗೈ ಏನು ಹೇಳಬೇಕು ಅಂತಾ ತಿಳಿಳೇ ಇಲ್ಲಾ.. ಸುಮ್ಮನೆ ಮೂಖವಿಸ್ಮಿತ ನಾದ ಅವನು ಒಂದು ಕ್ಷಣ.. )


ಕಾವೇರಿ: ಸರೀ.. ನೀ ಹೊರಡು.. ಆಫೀಸ್ಗೆ ಸಮಯ ಆಗ್ತಿದೆ... ನಿನ್ನ ನೀನು ನೋಡಿಕೊಳ್ಳೋ ಜೊತೆ ಐಶುನೂ ನೋಡ್ಕೋ ಚೆನ್ನಾಗಿ.. ಮದ್ವೆ ಅಂತ ಆದಮೇಲೆ ಅವಳಿಗೆ ಎಲ್ಲಾ ನೀನೇ.. (ತಲೆ ಮೇಲೆ ಕೈಇಟ್ಟು ಆಶಿವ್ರಿದಿಸಿದಳು)


ಆತ ಮರುಗುವ ಮುನ್ನವೇ.. ಆತನ ಮಡದಿಯ ಕಾಲ್ ಬಂತು..ಆಕೆ ಜೊತೆಗೆ ಹೊರ ಹೋಗಲು ತಾನು ಸಿದ್ಧ ಬೇಗ ಬನ್ನಿ ಎಂದು ಫೋನ್ನಲ್ಲೇ ಅವನಿಗೆ ಚುಂಬಿಸಿದಳು.. 

ಅವನು ಖುಷಿಯಿಂದ ತನ್ನ ತಾಯಿಯ ಕಡೆ ತಿರುಗಿ ಸಹ ನೋಡದೆ ಓಡಿದ.. ತನ್ನ ಹೆಂಡತಿಯ ಕರೆಗೆ ಓ.. ಗೊಟ್ಟು


ಆತನ ತಾಯಿ ಕಣ್ಣು ತುಂಬಿಕೊಂಡು ಅವನಿಗೆ ಹರಿಸಿದಳು


ಆತ ತನ್ನ ಕಂಬನಿಗಳ ಸರಮಾಲೆಯನ್ನು ಒರೆಸುತ್ತಾ ವಾಸ್ತವಕ್ಕೆ ಬಂದ


ಮಯುರ್ : ಅದೇ ಅವಳ ಕಟ್ಟ ಕೊನೆಯ ಕೈ-ತುತ್ತಾಗಿತ್ತು.. 

ಅದರಲ್ಲಿ ಆಕೆಯ ಪ್ರೀತಿ, ಮಮತೆ, ವಾತ್ಸಲ್ಯ ಎಲ್ಲಾ ತುಂಬಿತ್ತು..  ಕೊನೆ ಬಾರಿ... ತನ್ನ ಹೊಣೆಯನ್ನು ಆಕೆ ಸಫಲವಾಗಿ ನನ್ನ ಖಾಲಿ ಹೊಟ್ಟೆ ತುಂಬಿಸಿ ಪೂರೈಸಿದಳು.. 


ಆದರೆ ನಾನೇನ್ ಮಾಡಿದೆ? ಆಕೆಯ ಅಪರಿಮಿತ ಪ್ರೀತಿಯನ್ನು ನನ್ನ ಕೈಯಾರೆ ನಾನೇ ಕಳೆದುಕೊಂಡೆ.. ನನ್ನ ಹೆಂಡತಿಯ ಬಣ್ಣ ಬಣ್ಣದ ಮಾತಿಗೆ ಮರುಳಾದೆ.. ಅವಳ ಸೆರಗು ಹಿಡಿದುಕೊಂಡು ಹೊರಟೆ.. ಯಾಂತ್ರಿಕ ಜೀವನ ನಡೆಸಲು..! 

ಆದರೆ ಅಮ್ಮ.. ಕೊನೆ ಬಾರಿ ಸಹ ನನ್ನ ಬಗ್ಗೆನ್ಧೇ ಯೋಚಿಸಿದ್ದರು..


ಅವರ ಕೈಯಿಂದ ಚಪ್ಪರಿಸುತ್ತಾ ಅಷ್ಟೋಂದು ತಿಂದೆ ಆ ದಿನ..! ಅವರು ಕೂಡ ಅವಸರದಲ್ಲಿ ಏನು ತಿಂದಿರಲಿಲ್ಲಾ ಅಂತ ನನಗೆ ಹೊಳಿಳೇ ಇಲ್ಲಾ..  

ಆಕಸ್ಮಾತ್ ನೆನಪಿಗೆ ಬಂದ್ರೂ.. ನನ್ನ ತಲೆಲೀ ಬರೀ ಅವರ್ನ ಬಿಟ್ಟು ಅದೆಷ್ಟ್ ಬೇಗ ಅಲ್ಲಿಂದ ಹೊರಡ್ತೀನೊ.. ಆದ್ಯಾವ್ಯಾಗ್ ನನ್ನ ಹೆಂಡ್ತಿನ ಅಪ್ಕೋತಿನೋ ಅಂತ ಅಷ್ಟೇ ಇತ್ತು.. (ಅವರುನ್ನ ಅಲ್ಲಿ ಬಿಟ್ರೆ ಏನೋ ತಲೆ ಮೇಲೆ ಇರೋ ಭಾರ ಇಳುಸ್ಕೋಬೇಕು ಅನ್ನೋ ವಿಕೃತ ಮನಸ್ಥಿತಿ ಇತ್ತು ಅವನದು..) 

ಎಷ್ಟು ಸ್ವಾರ್ಥ ಅಲ್ವಾ ನಂದು.. ಎಂದು ನೊಂದ.. 


ಈಗ ನನಗೆ ಪ್ರೀತಿ ತೋರಿಸಕ್ಕೆ ಯಾರು ಇಲ್ಲ ಅಂದಾಕ್ಷಣ ಅಮ್ಮ ನೆನಪಾಗ್ತಿಳೆ.. ನಾನು ಮಾಡಿದ ತಪ್ಪು ಅರಿವಾಗ್ತಾ ಇದೆ  

ಈಗ ಬುದ್ಧಿ ಬಂದು ಏನ್ ಬಂತು ಭಾಗ್ಯ?? ಬೇಕು ಅಂದ್ರು ವಾಪಸ್ ಬರಕ್ಕೇ ಅಮ್ಮಾ ಇಲ್ವೇ ಇಲ್ಲಾ.. ಆಕೆ ಬದುಕುಳಿದಿಲ್ಲ ಇನ್ನು.. ಅವಳಿಲ್ಲಾ.. ಇಲ್ವೇ ಇಲ್ಲಾ.. 


ಬರೀ ನನ್ನತ್ರ ಬಣ್ಣ ಬಣ್ಣದ ಹಣ ಸಂಪತ್ತು ಉಳೀತೂ..  

ನನ್ನವರು ಅಂತ ಹೆಸರಿಗೆ ನನ್ನ ಹೆಂಡತಿ ಒಬ್ಳು ಇದಾಳೆ.. ಅವಳಿಗೆ ಬರೀ ಅಲಂಕಾರ ಮಾಡಿಕೊಂಡ್ ಇರೋ ಬರೋ ಸಂಪತ್ತನ್ನ ಅನುಭವಿಸೊ ಮನಸವಳು.. 

ನನ್ನ ಇಷ್ಟ, ಕಷ್ಟ.. ನೋವು ನಲಿವು ಅಂತ ಹೇಳ್ಕೋಳಕ್ಕೆ ಯಾರು ಇಲ್ಲ.. ಎಲ್ಲಾ ಇದ್ದರೂ ನಾನು ಒಂಟಿ ಪಿಶಾಚಿ

ಆಸ್ತಿ ಬೆಟ್ಟದಷ್ಟು... ಆದರೆ ಪ್ರೀತಿ ತ್ರುಣ ಮಾತ್ರವೂ ಉಳಿದಿಲ್ಲ..  


ಮೊದಲು ಹೇಗೆ ಅರೆ ಹೊಟ್ಟೆಲೀ ಮಲಗಿದರೂ.. ಸುಖವಾದ ನಿದ್ರೆ.. ಶಾಂತಿ.. 

ದಿನ ಪೂರ್ತಿ ಏನಾಯಿತು ಏನಿಲ್ಲ ಅಂತ ಕೇಳಕ್ಕ ಅಮ್ಮ ಇರ್ತಾ ಇದ್ಳು.. ಆಕೆ ತೊಡೆ ಮೇಲೆ ತಲೆ ಇಟ್ಟು ಕಣ್ಮುಚ್ಚಿದಾಕ್ಷಣ ನನ್ನ ನೋವು, ಸುಸ್ತು ಎಲ್ಲಾ ಕ್ಷಣದಲ್ಲಿ ಮಂಗಮಾಯ..


**** ಆತ ರಸ್ತೆಯ ಮಧ್ಯೆದಲ್ಲೇ ಮಂಡಿಯೂರಿ ಕೂತು.. ಆಕ್ರಂದಿಸಿದನು

ಆತನ ಕಣ್ಣೀರು ಒರೆಸುವುದು ಬಿಡಿ... ಅಳುತ್ತಿದ್ದಾನೆ ಎಂದು ನೋಡಲು ಸಹ ಅಲ್ಲಿ ಯಾರೂ ಇರಲಿಲ್ಲ..  

ಅವನ ಜೊತೆ ಅಂದು ಉಳಿದದ್ದು ಕೇವಲ ತಪ್ಪಿತಸ್ಥ ಮನೋಭಾವ ಅಷ್ಟೇ..


#The_End


ಕೋರಿಕೆ: ಎಲ್ಲಾ ಮನುಷ್ಯನ ಒಂದು ಸಾಮಾನ್ಯ ಗುಣ.. ಏನೆಂದರೆ.. ದೊಡ್ಡೋರಾಗ್ತಾ ಆಗ್ತಾ ಇದ್ದಂತೆ ತಂದೆ ತಾಯಿಯ ಬುದ್ದಿವಾದ ವಿಷ ಎನಿಸುತ್ತೆ... ಸ್ವತಂತ್ರವಾಗಿರ ಬೇಕು ದೊಡ್ಡೊರಾದ್ವೀ ಅನ್ಕೋತ್ತೀವಿ..  


ಒಂದು ಸ್ಥಾನ ಮಾನ ಬಂದಾಕ್ಷಣ ಮರತೇ ಹೋಗ್ತೀವಿ ನಾವು ಯಾವ ದಾರಿಯಲ್ಲಿ ಬಂದ್ವಿ.. ನಮಗೋಸ್ಕರ ಅಪ್ಪಾಮ್ಮಾ ಏನೇನು ಕಷ್ಟಪಟ್ಟಿದ್ರು.. ನಮ್ಮ ಹಸಿವು ನೀಗಿಸಲು ಅವರು ಎಷ್ಟು ದಿನ ಉಪವಾಸ ಇದ್ರು ಅಂತ.. ಒಂದಿನ ಇದೆಲ್ಲಾ ಮರೆತು ಅವರನ್ನ ಹೊರಗಟ್ಟೊ ಯೋಚ್ನೆ ಅಥವಾ ನಾನಾ ಮಾತುಗಳಿಂದ ಅವರಿಗೆ ನೋವು ಕೊಡ್ತೀವಿ.. 


ಇದನ್ನೇ ಅನ್ಸುತ್ತೆ ದೊಡ್ಡವರು ಗಾದೆ ಮಾಡಿರೋದು " ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು." ಅಂತ.. 


ಹಾಗೇನೇ..ಇರೋ ವರ್ಗೆ ತಂದೆ ತಾಯಿ ಬೆಲೆ ಗೊತ್ತಾಗಲ್ಲ.. ಇದೆಲ್ಲಾ ಅರ್ಥ ಆಗೋ ಅಷ್ಟರಲ್ಲಿ ಅವರು ನಮ್ಮಿಂದ ತುಂಬಾ ದೂರ ಹೋಗಿರ್ತಾರೆ.. ಬಯಸಿಯೂ ಮರಳಿ ಬರದಷ್ಟು ದೂರ..


ಮಗ ಆದೋನು ತನ್ನ ಕರ್ತವ್ಯ ಮರೀಬಾರದು.. ಹಾಗಂತ ಮಗಳು ಮದುವೆ ಆದ ಮೇಲೆ ಅತ್ತೆ ಮಾವನ್ನ ಹೊರಗಟ್ಟೋ ಯೋಚನೆ ಇಟ್ಕೋ ಬಾರದು.. ಅವರು ನಮ್ಮ ಅಪ್ಟ, ಅಮ್ಮನ ತರನೇ ಅಂತ ಅರ್ಥ ಮಾಡ್ಕೊಬೇಕು..


ಹಣ ಇವತ್ತು ಬರುತ್ತೆ.. ನಾಳೆ ಹೋಗುತ್ತೆ... ಆದರೆ ಕೊನೆ ತನಕ ಉಳಿಯೋದು ಇದೇ ಪ್ರೀತಿ ಮತ್ತು ಬಾಂಧವ್ಯ ಅಲ್ವಾ??


ಇಂದ : ರಂಜು





Rate this content
Log in

Similar kannada story from Tragedy