Ashu Desai

Romance Classics Others

4.5  

Ashu Desai

Romance Classics Others

2) ಈ ಜೀವ ನಿನಗಾಗಿ

2) ಈ ಜೀವ ನಿನಗಾಗಿ

5 mins
360


ಕೃತಿ ಡಾಕ್ಟರ್ ಮೆಹ್ತಾ ಗೆ ಫೋನ್ ಮಾಡಿದ್ದೆ. ಅವ್ರು ಅವರ ಫಾರ್ಮ್ ಹೌಸ್ ಲೊಕೇಶನ್ ಕಳ್ಸಿದಾರೆ. ಹೋಗಿ ಬರೋಣವ ಎಂದು ನೀತಾ ಕೃತಿಯನ್ನು ಅನುಮತಿಗಾಗಿ ಕೇಳಿದಳು.

ಹ್ಮ್ಮ್. ಆದ್ರೆ ಹೇಗ್ ಹೋಗೋದು. ನೆನ್ನೆ ಏನೋ ನಿಮ್ ಸರ್ ಬಗ್ಗೆ ತುಂಬಾ ತುಂಬಾ ಮಾತಾಡ್ತಾ ಇದ್ದೆ. ನಿಮ್ ಸರ್ ಬುಕ್ ಮಾಡಿದ ಹೊಸ ಕಾರ್ ಎಲ್ಲಿ ಎಂದು ವ್ಯಂಗ್ಯ ಮಾಡುತ್ತಾ ಕೇಳಿದಳು ಕೃತಿ.

ಅವಳ ಮಾತು ಕೇಳಿ ನೀತಾಗೆ ನಗು ಬಂದರು ತಡೆದುಕೊಂಡು, ಅರೆರೆ ಮೇಡಂ ಗೆ ಕೋಪಾನ ಎಂದು ಪ್ರಶ್ನಿದಳು.

ಇಲ್ಲಪ್ಪ. ನಂಗೆ ಯಾಕ್ ಕೋಪ ಎಂದು ತಕ್ಷಣ ಹೇಳಿದ ಕೃತಿ ಮುಖ ತಿರುಗಿಸಿ ಕುಳಿತಳು.

ನೀತಾ ಮುಂದೆ ಹೋಗಿ ಕೃತಿ ಕೆನ್ನೆ ಗಿಂಡಿ, ಕೃತಿ ನೀನು ನಿಜಕ್ಕೂ ಮಗುನೇ ಕಣೆ. ನಿಂಗೆ ಸುಳ್ಳು ಹೇಳೋಕೆ ಬರಲ್ಲ. ಹೊರಗಿನ ಪ್ರಪಂಚಕ್ಕೆ ಘನ ಗಾಂಭೀರ್ಯದ ವ್ಯಕ್ತಿ. ಆದರೆ, 4 ಗೋಡೆ ಮಧ್ಯೆ ಪುಟ್ಟ ಮಗು ನೀನು ಎಂದು ನೀತಾ ನಗುತ್ತಾಳೆ

ನೀತಾ ಮಾತಿಗೆ ಮತ್ತಷ್ಟು ಮುಖ ದುಮ್ಮಿಕ್ಕಿಸಿಕೊಂಡು ಕೂತಳು ಕೃತಿ.

ಕೃತಿಯ ಮುಖ ನೋಡುತ್ತಾ, ಬರುತ್ತಿದ್ದ ನಗು ತಡೆದ ನೀತಾ, ಕಾರು ಸಂಜೆ ಡೆಲಿವರಿ ಕೊಡ್ತಾರೆ. ನಾನು ಈಗ ಕ್ಯಾಬ್ ಬುಕ್ ಮಾಡಿದೀನಿ. ಅದ್ರಲ್ಲೇ ಹೋಗಿ ಬರೋಣ. ನಾವು ಬರೋ ಅಷ್ಟರಲ್ಲೇ ಕಾರು ನಿನ್ನ ಕಣ್ಣ ಮುಂದೆ ಇರುತ್ತೆ. ಓಕೆ ಎಂದು ಚಿಕ್ಕ ಮಕ್ಕಳನ್ನು ಸಂಭಾಳಿಸುವಂತೆ ಹೇಳಿದಳು.

ನೀತಾ ಮಾತಿಗೆ ಖುಷಿ ಆದ್ರೂ, ಅವಳ ಕಾಡುವಿಕೆಯಿಂದ ತಪ್ಪಿಸಿಕೊಳ್ಳಲು ನಾನೇನು ಕಾರ್ ದಾರಿ ಕಾಯ್ತಾ ಇಲ್ಲ ಎಂದು ಸುಳ್ಳಾಡಿದಳು.

ಕೃತಿ ಮಾತಿಗೆ ನಕ್ಕ ನೀತಾ ಹೌದು ಹೌದು ಎಂದು ಸುಮ್ಮನಾದಳು.

***********************

ಮೇಡಂ ಕಣ್ ಮುಚ್ಚಿ ಎನ್ನುತ್ತಾ ಹೋಟೆಲ್ ಕೋಣೆಯಿಂದ ಹೊರಬರುತ್ತಿದ್ದಂತೆ ನೀತಾ ಕೃತಿ ಕಣ್ಣು ಮುಚ್ಚಿದಳು.

ಇದೇನು ನೀತಾ ನಿನ್ನ ತಮಾಷೆ ಎಂದು ಏನೂ ಅರ್ಥ ಆಗದೆ ಕೃತಿ ಗೊಂದಲದಲ್ಲೇ ಪ್ರಶ್ನಿಸಿದಳು.

ಸುಮ್ನೆ ಬಾ ಅಂದ್ರೆ ಬರ್ಬೇಕು. ಅದೆಷ್ಟು ಪ್ರಶ್ನೆ ಮಾಡ್ತೀಯ ನೀನು ಎನ್ನುತ್ತಾ ಕೃತಿ ಮತ್ತಷ್ಟು ಪ್ರಶ್ನೆ ಕೇಳದಂತೆ ಜಾಗ್ರತೆ ವಹಿಸಿದಳು ನೀತಾ.

ನೀತಾ ಮಾತಿಗೆ ಹುಸಿ ಮುನಿಸು ತೋರಿಸುತ್ತಾ, ಸರಿ ಎಂದಷ್ಟೇ ಹೇಳಿ, ನೀತಾ ಹಿಂದೆ ಸುಮ್ಮನೆ ಹೊರಟಳು ಕೃತಿ.

ಕಣ್ ಬಿಡು ಎಂದು ಹೇಳಿ ಕೃತಿ ಕಣ್ಣ ಮೇಲಿದ್ದ ತನ್ನ ಕೈ ತೆಗೆದ ನೀತಾ .... ಸರ್ಪ್ರೈ...ಸ್ ಎಂದು ಜೋರಾಗಿ ಕೂಗಿಕೊಂಡಳು.

ಕಣ್ಣು ಬಿಟ್ಟ ಕೃತಿ ಮುಂದೆ ಅವಳಿಷ್ಟದ ಕಾರ್ ನಿಂತಿತ್ತು. ಅದು ಕೂಡಾ ಅವಳ ಇಷ್ಟದ ಬಣ್ಣದ್ದೆ. ಆ ಕಾರ್ ಕಂಡವಳ ಕಣ್ಣುಗಳು ಖುಷಿಯಿಂದ ಹೊಳೆದವು. ವಾವ್ ನನ್ನಿಷ್ಟದ ಕಾರ್, ಅದು ಕೂಡಾ ನನ್ನ ಫೇವರೇಟ್ ಕಲರ್ ಎಂದು ಉದ್ಘಾರ ತೆಗೆದಳು..

ನೀತಾ ಕಡೆ ನೋಡುತ್ತಾ, ಕಳ್ಳಿ ಸಂಜೆ ಡೆಲಿವರಿ ಕೊಡ್ತಾರೆ ಅಂತ ಸುಳ್ಳು ಹೇಳ್ತೀಯ ಎಂದು ಅಪಾದಿಸುತ್ತ ಕಾರ್ ಮೇಲೆ ಒಮ್ಮೆ ಮೃದುವಾಗಿ ಸವರಿದಳು.

ಮಗು ಚಾಕೊಲೇಟ್ ಒಂದು ಆಚಾನಕ್ಕಾಗಿ ಕೈಗೆ ಸಿಕ್ಕಾಗ ಖುಷಿ ಪಡೊ ಹಾಗೆ ಇತ್ತು ಅವಳ ಭಾವ.

ಕೃತಿ ಮಾತಿಗೆ ನಕ್ಕ ನೀತಾ, ಎನ್ ಮಾಡೋದು ಮೇಡಂ, ಎಲ್ಲಾ ಸರ್ ಐಡಿಯಾ. ನಿಮ್ಗೆ ಸರ್ಪ್ರೈಸ್ ಕೊಡೋದು ಅಂದ್ರೆ ಅವರಿಗೆ ಅದೆಷ್ಟು ಸಂಭ್ರಮ ಸಡಗರ ಎಂದು ಕೃತಿಯ ಹ್ಯಾಂಡ್ಸಮ್ನ ನೆನಪಿಸಿಕೊಂಡು ಹೇಳಿದಳು ನೀತಾ.

ನೀತಾ ಹೇಳಿದ ಮಾತು ಅಕ್ಷರಷಃ ಸತ್ಯವಾಗಿದ್ದವು. ಅದು ಕೃತಿಗೂ ಗೊತ್ತು. ಇವಳ ಖುಷಿಗಾಗಿ ಸದಾ ಏನು ಮಾಡಲು ಸಿದ್ದನಿದ್ದವನು ಸದಾ ಇವಳಿಗಾಗಿಯೇ ಹಂಬಲಿಸುತ್ತಿದ್ದ. ಅವನ ನೆನಪಾಗುತ್ತಿದ್ದಂತೆ ಅವಳರಿವಿಗೂ ಬಾರದೇ ತುಟಿ ಅಂಚಲ್ಲಿ ಸಣ್ಣ ನಗುವೊಂದು ಮೂಡಿ ಮರೆಯಾಯಿತು. ಸರಿ ಇದೀರಾ ಎಲ್ರೂ, ಎಂದು ತಲೆಯಾಡಿಸಿ, ಕಾರ್ ಕಡೆ ನೋಡುತ್ತಾ ನಿಂತಳು.

ಮ್ಯಾಮ್ ಸರ್ ವಿಡಿಯೋ ಕಾಲ್ ಮಾಡಿದಾರೆ ಎಂದು ನೀತಾ ಹೇಳಿದಾಗಲೇ ವಾಸ್ತವಕ್ಕೆ ಬಂದ ಕೃತಿ ನೀತಾ ಕೈಯ್ಯಿಂದ ಮೊಬೈಲ್ ತೆಗೆದುಕೊಂಡಳು.

ಅವಳ ಮೊಗ ಕಾಣುತ್ತಲೇ, ಅವಳ ಕಣ್ಣಲ್ಲಿಯ ಹೊಳಪು ಕಂಡೆ ಅವಳ ಸಂತೋಷ ಅರಿತವನ ಮನಸ್ಸು ಹಗುರಾಯಿತು. ಅವಳ ಮುಖ ಕಂಡವನ ದನಿಯಿಂದ ಹೈ ಸ್ವೀಟಿ ಎಂಬ ಒಂದೇ ಒಂದು ಸಣ್ಣ ವಾಕ್ಯ ಹೊರಬಂದಿದ್ದು. ಅವನು ಅವಳನ್ನು ಅದೆಷ್ಟು ಮಿಸ್ ಮಾಡ್ಕೋತ ಇದ್ದ ಅನ್ನೋದಕ್ಕೆ ಅವನ ದನಿಯಲ್ಲಿದ್ದ ಭಾವನೆಗಳೇ ಸಾಕ್ಷಿ ಆಗಿದ್ದವು.

ಹೈ ಹ್ಯಾಂಡ್ಸಮ್ ಎಂದು ಕೃತಿಯು ಗ್ರೀಟ್ ಮಾಡಿದಳು.

ಅವಳ ಸಂಭ್ರಮದ ಮೊಗ ಕಂಡವನ ಮನದಲ್ಲಿ ಸಂತೃಪ್ತಿಯ ಭಾವ. ಆದರೂ, ಅದನ್ನು ತನ್ನವಳ ಬಾಯಿಯಿಂದಲೇ ಕೇಳುವ ಕಾತುರ ಅವನಿಗೆ. ಕಾರ್ ಇಷ್ಟ ಆಯ್ತಾ ಸ್ವೀಟಿ ಎಂದು ಮೆಲ್ಲನೆ ಕೇಳಿದನು. ಅವಳೇನು ಬಾಯಿ ಬಿಟ್ಟು ಹೇಳದಿದ್ದರೂ ಅವಳ ಕಣ್ಣಿಂದಲೇ ಎಲ್ಲಾ ತಿಳಿಯುವವನಿಗೆ ಅದಾಗಲೇ ಅವಳ ಉತ್ತರ ಗೊತ್ತಿದ್ದರೂ, ಪ್ರಶ್ನಿಸಿದ್ದನು.

ಕಾರಣ ಒಮ್ಮೆ ಬ್ಯುಸಿನೆಸ್ ಮ್ಯಾಗಝಿನ್ ನೋಡುತ್ತಾ ಕುಳಿತಿದ್ದ ಕೃತಿ ಅದರಲ್ಲಿ ಇದ್ದ ಹೊಸ ಮಾಡಲ್ ಕಾರ್ ಒಂದನ್ನು ಆಸೆ ಕಂಗಳಿಂದ ನೋಡಿದ್ದಳು. ಎಷ್ಟೇ ಕೆಲಸ ಇದ್ದರೂ ಸದಾ ಅವಳನ್ನೇ ಗಮನಿಸುವ ಸಾಂತ್ವನ್ ಕಣ್ಣಿಗೆ ಅವಳ ಕಣ್ನೋಟ ಅರ್ಥ ಆಗಿತ್ತು. ಅದಕ್ಕೆ ಅವಳಿಗೆ ಸರ್ಪ್ರೈಸ್ ಕೊಡಲೆಂದು ಇಂದು ಅದೇ ಕಾರನ್ನೇ ಬುಕ್ ಮಾಡಿದ್ದ.

ತಾನು ಏನನ್ನೂ ಬಾಯಿ ಬಿಟ್ಟು ಹೇಳದೇ ಹೋದರು ತನ್ನ ಎಲ್ಲಾ ಭಾವನೆಗಳನ್ನು ಅರ್ಥ ಮಾಡಿಕೊಂಡು ತನ್ನೆಲ್ಲಾ ಆಸೆ ಕನಸುಗಳನ್ನು ಪೂರೈಸುವವನ ಮೇಲೆ ಗೌರವ ಹೆಚ್ಚಾಯಿತು. ಅವನ ಮಾತಿಗೆ ಉತ್ತರಿಸುತ್ತಾ, ತುಂಬಾ ಇಷ್ಟ ಆಯ್ತು. ಥ್ಯಾಂಕ್ ಯು ಸೊ ಮಚ್ ಹ್ಯಾಂಡ್ಸಮ್ ಎಂದಳು.

ಅವಳ ಮಾತು ಕೇಳಿದವನಿಗೆ ಈಗ ತನ್ನ ಪರಿಶ್ರಮಕ್ಕೆ ಸಾರ್ಥಕ ಭಾವ ಮೂಡಿತು. ನಿಂಗೆ ಖುಷಿ ಆಯ್ತು ಅಲ್ವಾ. ನಂಗೆ ಅಷ್ಟೇ ಸಾಕು ಸ್ವೀಟಿ. ನಿನ್ನ ಮುಖದ ಈ ನಗು ಶಾಶ್ವತವಾಗಿ ಇರಲಿ. ಅದಕ್ಕೋಸ್ಕರ ನಾನು ಏನು ಮಾಡಲು ಸಿದ್ದ. ಎಂದನು. ಅದು ಬಾಯಿ ಮಾತಿಗೆ ಹೇಳಿದ್ದಾಗಿರಲಿಲ್ಲ. ಅದು ಸತ್ಯವಾದ ಮಾತಾಗಿತ್ತು.

ಅದು ನನಗೂ ಗೊತ್ತು ಹ್ಯಾಂಡ್ಸಮ್ ಹೀರೋ. ನಾವು ಇವಾಗ ಡಾಕ್ಟರ್ ಮೆಹ್ತಾ ಫಾರ್ಮ್ ಹೌಸ್ ನೋಡೋಕೆ ಹೋಗ್ತಾ ಇದೀವಿ. ಅಲ್ಲಿಂದ ಬಂದ ಮೇಲೆ ಕಾಲ್ ಮಾಡ್ತೀನಿ. ಪಪ್ಪನ್ನ ಕೇಳ್ದೆ ಅಂತ ಹೇಳು. ಪ್ರೀತು ಗೆ ಹಾಯ್ ಹೇಳು. ಎಂದು ಒಂದೇ ಉಸಿರಿಗೆ ಪಟಪಟನೆ ಹೇಳಿ ಮಾತು ಮುಗಿಸಿ ಕರೆ ತುಂಡರಿಸಲು ತಯಾರಾದಳು.

ಅವನ ಮಾತು ಅವಳ ಅಂತರಾಳಕ್ಕೆ ಚುಚ್ಚಿತ್ತು. ಅದಕ್ಕೆ ಪಲಾಯನದ ದಾರಿ ಹುಡುಕಿ ಈ ಉಪಾಯ ಮಾಡಿದ್ದಳು.

ಅವಳ ಮುಜುಗರ ಅವನಿಗೇನು ಹೊಸತಲ್ಲ. ಆದರೂ ಅವನೆಂದು ಅವಳಿಗೆ ಯಾವುದಕ್ಕೂ ಒತ್ತಾಯ ಮಾಡಿದವನಲ್ಲ. ಓಕೆ ಡಿಯರ್. ಟೇಕ್ ಕೇರ್. ಬೈ ಎಂದು ಹೇಳಿದನು.

ಬೈ ಹೀರೋ ಎಂದಷ್ಟೇ ಉಸುರಿ ಕರೆ ತುಂಡರಿಸಿದವಳು ಮನದಲ್ಲೇ ಅವನಿಗೆ ಕ್ಷಮೆ ಕೇಳಿದ್ದಳು.

***********************

ಮೆಹತಾ ಅವರ ಫಾರ್ಮ್ ಹೌಸ್ ನೋಡಿ ಬಂದವಳು ನೀತಾ ಜೊತೆ ಅದರ ಬಗ್ಗೆ ಮಾತಿಗಿಳಿದಳು. ನೀತಾ ಫಾರ್ಮ್ ಹೌಸ್ ಏನೋ ತುಂಬಾ ಚನಾಗೆ ಇದೆ. ಸುತ್ತ ಹಸಿರಾದ ವಾತಾವರಣ ಕೂಡಾ ಸೂಪರ್. ವಾಹನಗಳ ಗದ್ದಲ ಇಲ್ಲ, ಬಟ್ ಸಿಟಿ ಇಂದ ಸ್ವಲ್ಪ ದೂರ ಅನ್ಸುತ್ತೆ. ಸೋ ಡೈಲಿ ಅಲ್ಲಿಂದ ಒಡಾಡೋಕೆ ತುಂಬಾನೇ ಕಷ್ಟ ಆಗಬಹುದು. ಅದು ಈ ಬೆಂಗಳೂರ್ ಟ್ರಾಫಿಕ್ ಅಲ್ಲಿ ಟ್ರಾವೆಲಿಂಗ್ ಮಾಡೋದ್ರಲ್ಲೇ ಅರ್ಧ ದಿನ ಕಳೆಯುತ್ತೆ ಎಂದು ಹೇಳಿದಳು.

ಕೃತಿ ಯೋಚಿಸಿದ್ದನ್ನೇ ನೀತಾ ಕೂಡಾ ಆಲೋಚಿಸಿದ್ದಳು. ಎಸ್ ಕೃತಿ ನಾನು ಅದೇ ಯೋಚನೆ ಮಾಡ್ತಾ ಇದ್ದೆ. ನಾವು ಇನ್ನೂ 3-4 ತಿಂಗಳು ಬೆಂಗಳೂರಲ್ಲೇ ನಮ್ಮ ವಾಸ್ತವ್ಯ ಹೂಡಬೇಕು. ಅಷ್ಟೂ ದಿನ ಹೋಟೆಲ್ ಅಲ್ಲಿ ಉಳಿಯೋಕೆ ಆಗಲ್ಲ ಅದಕ್ಕೆ ಸರ್ ಕೂಡಾ ಒಪ್ಪಲ್ಲ ಎಂದು ಸಾಂತ್ವನ್ ನೆನಪಿಸುತ್ತಾ ಹೇಳಿದಳು.

ನಿಂಗೆ ಮೊದಲೇ ಔಟ್ ಸೈಡ್ ಫುಡ್ ಆಗಲ್ಲ. ನಿನ್ನ ವಿಷಯದಲ್ಲಿ ಸರ್ ರಿಸ್ಕ್ ತಗೋಳಲ್ಲ. ಬೇರೆ ಏನಾದ್ರೂ ಥಿಂಕ್ ಮಾಡೋಣ ಎಂದವಳು, ಕೃತಿ ಸರ್ ಹತ್ರ ಒಮ್ಮೆ ಹೇಳಿ ನೋಡು ಏನ್ ಹೇಳ್ತಾರೆ ನೋಡೋಣ. ಅವ್ರು ಖಂಡಿತಾ ಏನಾದ್ರೂ ಉಪಾಯ ಮಾಡೇ ಮಾಡುತ್ತಾರೆ ಎಂದು ಹೇಳಿದಳು.

ನೀತಾ ಮಾತು ಕೇಳಿ, ಬೇಡ ನೀತಾ. ನಿಮ್ ಸರ್ ಮುಂಬೈ ಪ್ರೊಜೆಕ್ಟ್ ಅಲ್ಲೇ ಬಿಝಿ ಇರ್ತಾನೆ. ಇಲ್ಲಿ ನಂದು ಟೆನ್ಶನ್ ಕೊಡೋದು ಬೇಡ. ಹೇಗೂ ನಾಡಿದ್ದು ಮೆಹ್ತಾ ಜೊತೆ ಮೀಟಿಂಗ್ ಇದೆ ಅಲ್ವಾ ಆಗ್ಲೇ ಅವ್ರ ಜೊತೆ ಮಾತಾಡೋಣ. ಎರೆಡು ದಿನ ಹೋಟೆಲ್ ಅಲ್ಲೇ ಅಡ್ಜಸ್ಟ್ ಮಾಡ್ಕೋಳೊಣ. ಸಾಧ್ಯ ಆದ್ರೆ ನಮಗೆ ಬೇರೆ ಏನಾದ್ರೂ ವ್ಯವಸ್ಥೆ ಮಾಡೋಕೆ ಮೆಹತಾ ಅವರಿಗೆ ಹೇಳೋಣ ಎಂದಳು.

ಕೃತಿ ಮಾತು ನೀತಾಗೂ ಸರಿ ಎನಿಸಿತು. ಸರಿ ಬಾ. ಸಂಜೆ ಪಾರ್ಟಿ ಇದೆ. ಇವಾಗ ಊಟ ಮಾಡಿ ರೆಸ್ಟ್ ಮಾಡು. ನಾನು ಪಾರ್ಟಿ ಹಾಲ್ ಹೋಗಿ ಅರೇಂಜ್ಮೆಂಟ್ ನೋಡ್ಕೊಂಡು ಬರ್ತೀನಿ. ನಮ್ದೆ ಪಾರ್ಟಿ ಆಗಿರೋದ್ರಿಂದ ಸ್ವಲ್ಪ ಮುತುವರ್ಜಿ ಅಗತ್ಯ. ನಾನು ಅಲ್ಲೇ ಊಟ ಮಾಡ್ತೀನಿ ಎಂದಳು ನೀತಾ.

ಸರಿ ಹುಷಾರು. ಕಾರ್ ತಗೊಂಡೆ ಹೋಗು. ಎಂದು ಹೇಳಿದ ಕೃತಿ ಫ್ರೆಶ್ ಆಗಲು ಹೋದಳು.

ಸರಿ. ಟೇಕ್ ಕೇರ್. ಬೈ ಎಂದು ನೀತಾ ಕೃತಿಗೆ ಬೈ ಹೇಳಿ ಅಲ್ಲಿಂದ ಹೊರಟಳು.

***********************

ಪಿಂಕ್ ಕಲರ್ ಲಾಂಗ್ ಗೌನ್ ಅದಕ್ಕೆ ಮ್ಯಾಚ್ ಆಗೋ ಹಾಗೆ ಕತ್ತಲ್ಲಿ ಒಂದು ವಜ್ರದ ನೆಕ್ಲೇಸ್, ಮ್ಯಾಚಿಂಗ್ ವಜ್ರದ ಕಿವಿ ಒಲೆ, ಒಂದು ಕೈಗೆ ವಜ್ರದ ಕಡಗ, ಮತ್ತೊಂದು ಕೈಗೆ ವಾಚ್, ಮುಖಕ್ಕೆ ತೆಳು ಮೇಕಪ್, ತುಟಿಗೆ ಸ್ವಲ್ಪೇ ಸ್ವಲ್ಪು ಕಂಡೂ ಕಾಣದಷ್ಟು ಲಿಪ್ಸ್ಟಿಕ್, ಕಣ್ಣಿಗೆ ಕಾಡಿಗೆ, ಯಾವುದೇ ಬಂಧನವಿಲ್ಲದೇ ಸ್ವತಂತ್ರವಾಗಿ ಗಾಳಿಗೆ ಹಾರಾಡೋ ಕೂದಲು ಇಷ್ಟೇ ಅವಳ ಅಲಂಕಾರ.

ಮೊದಲೇ ಹಾಲು ಬಿಳುಪಿನ ಬಣ್ಣ. ಸಹಜ ಸೌಂದರ್ಯ. ಇಷ್ಟು ಸಾಕು ಹುಡುಗರ ಎದೆಗೆ ಕನ್ನ ಹಾಕಲು. ಅವಳು ನಡೆದು ಬರ್ತಾ ಇದ್ರೆ ಪೂರ್ಣ ಚಂದಿರ ನಕ್ಷತ್ರಗಳ ಪೋಣಿಸಿ ಧರಿಸಿ ನಡೆದು ಬರುವಂತಿದೆ. ಎಷ್ಟು ಜನರ ಹೃದಯಕ್ಕೆ ಲಗ್ಗೆ ಇಟ್ಟಳೋ ಈ ಮುಂಬೈ ಪೋರಿ.....

32ರ ಅವಿವಾಹಿತ ತರುಣನೊಬ್ಬ ಅವಳು ನಡೆದು ಬರುತ್ತಿದ್ದರೆ, ತನ್ನ ಹೃದಯದಲ್ಲೇ ನಡೆಯುತ್ತಿದ್ದಾಳೆ ಎಂಬಂತೆ ತನ್ನ ಎದೆ ಮೇಲೆ ಸವರಿಕೊಂಡು ಕಿರುನಗೆ ನಕ್ಕ

ಅವನ ಹೆಸರು ಪ್ರತೀಕ್ ಮಿತ್ರ. ಸುಂದರ್ ಮಿತ್ರರ ಏಕೈಕ ಪುತ್ರ. ಮಿತ್ರ ಬಿಲ್ಡರ್ಸ್ನ ಏಕಮಾತ್ರ ವಾರಸುದಾರ. ಸಧ್ಯದ ಎಂಡಿ, ಹಾಗೂ ಮುಂದಿನ ಸಿಇಒ. ಚಿಕ್ಕ ವಯಸ್ಸಲ್ಲೇ ತಾಯಿಯನ್ನು ಕಳೆದುಕೊಂಡ ದೌರ್ಭಾಗ್ಯವಂತ. ಅವನಿಗೆ ತನ್ನ ತಂದೆಯ ಹೊರತು ಬೇರೆ ಪ್ರಪಂಚವೇ ಇಲ್ಲ.

ಮದುವೆಯಾಗೆಂದು ತಂದೆ ಎಷ್ಟೇ ಒತ್ತಾಯ ಮಾಡಿದರೂ ನಾಳೆ ತನಗೆ ಪತ್ನಿ ಆಗಿ ಬರುವ ಹೆಣ್ಣು ತನ್ನ ತಂದೆಗೆ ಮಗಳಾಗಲಾರಳು ಎಂದು ಮದುವೆಯ ಪ್ರಸ್ತಾಪವನ್ನು ಮುಂದೂಡುತ್ತಲೇ ಬರುತ್ತಿದ್ದ.

ಎಂದೂ ಯಾರಿಗೂ ಸೋಲದ ಅವನ ಹೃದಯ ಇಂದು ಮೊದಲ ನೋಟಕ್ಕೆ ಸ್ವೀಕೃತಿಗೆ ಸೋತಿತ್ತು. ಅವಳ ಸಹಜ ಸೌಂದರ್ಯಕ್ಕಿಂತ ಅವಳ ಸರಳತೆ ಅವನನ್ನು ಹೆಚ್ಚು ಆಕರ್ಷಿಸಿದ್ದು. ಅವಳ ಗುಣ ಅವನನ್ನು ಅವಳತ್ತ ಸೆಳೆದಿತ್ತು. ತನ್ನ ಬ್ಯಾಚುಲರ್ ಲೈಫ್ ಇಂದ ಮುಕ್ತಿ ಹೊಂದಲು ಅವನ ಮನ ತೀರ್ಮಾನಿಸಿ ಬಿಟ್ಟಿತು.

ಹೈ ಬ್ಯೂಟಿ. Im ಪ್ರತೀಕ್ ಮಿತ್ರ. ಮಿತ್ರ ಬಿಲ್ಡರ್ಸ್ ಎಂಡಿ. ಎಂದು ಕೃತಿ ಮುಂದೆ ಕೈ ಚಾಚಿಬತನ್ನ ಪರಿಚಯ ಮಾಡಿಕೊಂಡನು.

ನಮಕರಿಸುತ್ತ, ಹೈ im ಸ್ವೀಕೃತಿ ಎಂದು ನಯವಾಗೆ ಅವನಿಂದ ಅಂತರ ಕಾಯ್ದುಕೊಂಡಳು ಕೃತಿ. ಅವಳೆಷ್ಟೇ ಪ್ರಪಂಚ ಸುತ್ತಿದ್ದರು, ನಮ್ಮ ಸಂಸ್ಕೃತಿ ಮರೆಯುವವಳಲ್ಲ ಅವಳು.

ಅವನ ಕೈಗೆ ಕೈ ಮಿಲಾಯಿಸದೆ ನಮಸ್ಕರಿಸಿದ ಕೃತಿ ನಡೆ mr. ಮಿತ್ರಾಗೆ ಬೇಸರ ತರಿಸುವುದರ ಬದಲಾಗಿ ಅವಳ ಸಂಸ್ಕಾರ ಕಂಡು ಮನಸ್ಸು ತುಂಬಿ ಬಂದಿತು. ನೈಸ್ ಟು ಮೀಟ್ ಯು ಎಂದಷ್ಟೇ ಉಸುರಿದ.

ಅವನ ಮಾತಿಗೆ ತೆಳು ನಕ್ಕವಳು, ಸೇಮ್ ಟು ಯು ಎಂದು ಹೇಳಿ, ಸಾರಿ, ಮೀಟ್ ಯು ಎಗೈನ್ ಐ ಹ್ಯಾವ್ ಟು ಗೋ ಎಂದು ಹೇಳಿ ಬೈ ಮಾಡಿ ಹೊರಟಳು.

ಯಾ sure, ಬೈ ಎಂದವನು ಅವಳು ಹೋದತ್ತಲೇ ನೋಡುತ್ತಾ ನಿಂತುಬಿಟ್ಟನು.

ಅವಳ ಮಧುರ ಧ್ವನಿ ವೀಣೆ ಇಂದ ಮೀಟಿದ ನಾದಸ್ವರದಂತೆ, ಕೋಗಿಲೆಯ ಇಂಪಾದ ಗಾನದಂತೆ ಸಿಹಿ ಜೇನಿನಿಂದ ಅದ್ದಿ ತೆಗೆದಂತೆ ಎನಿಸುತ್ತಿತ್ತು. ಅವನ ಹೃದಯದಲ್ಲಿ ಒಟ್ಟಿಗೆ ಸಾವಿರಾರು ಚಿಟ್ಟೆ ಹಾರಿದವು

***********************

ಮುಂದುವರೆಯುವುದು.....................

ಕತೆಯ ಬಗ್ಗೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಏನಾದರೂ ತಪ್ಪಿದ್ದರೆ ತಿಳಿಸಿ. ತಿದ್ದಿಕೊಳ್ಳುವೆ. ಬರವಣಿಗೆಯಲ್ಲಿ ಅಂಬೆಗಾಲು ಇಡುತ್ತಿರುವ ಕೂಸು ನಾನು. ನಿಮ್ಮ ಪ್ರೋತ್ಸಾಹವೇ ನನಗೆ ಬರೆಯಲು ಚೈತನ್ಯ. ನಿಮ್ಮ ಅತ್ಯಮೂಲ್ಯ ಪ್ರತಿಕ್ರಿಯೆಗಳು ನಮಗೆ ಕತೆ ಬರೆಯಲು ಪ್ರೋತ್ಸಾಹ.... ಒಂದೆರೆಡು ನಿಮಿಷದ ನಿಮ್ಮ ಸಮಯದ ವಿನಿಯೋಗ ನಮಗೆ ಮುಂದಿನ ಸ್ವಾರಸ್ಯ ಕತೆ ಬರೆಯಲು ಸ್ಪೂರ್ತಿ..... ನಿಮ್ಮ ಅನಿಸಿಕೆ ಅಭಿಪ್ರಾಯಗಳ ನಿರೀಕ್ಷೆಯಲ್ಲಿ❤️

ಲವ್ ಯು ಆಲ್

ಧನ್ಯವಾದಗಳು.....



Rate this content
Log in

Similar kannada story from Romance