Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ranjtha hebbar m

Others

2  

Ranjtha hebbar m

Others

ವರ್ಣ ರಂಜಿತ ಹೋಳಿ ಹಬ್ಬ

ವರ್ಣ ರಂಜಿತ ಹೋಳಿ ಹಬ್ಬ

1 min
118


ಬನ್ನಿ ಸ್ನೇಹಿತರೇ ಆಚರಿಸೋಣ

ಎಲ್ಲರೂ ಹೋಳಿಯ ಸುಂದರ ಹಬ್ಬ

ಹೊಳೆವ ಬಣ್ಣಗಳ ಹಚ್ಚುತ ಆಡುವ

ನಾವು ಚಂದದ ಹೋಳಿಯ ಹಬ್ಬ

ಬಣ್ಣದಲಿ ಅಡಗಿದೆ ಅಣುಗು

ತಿಳಿಯಿರಿ ಎಲ್ಲಾ ಗೆಳೆಯರೆ

ಬಾನಿಗು ಹಚ್ಚುವ ಬಣ್ಣವ

ನಾವು ಕಾಮನ ಬಿಲ್ಲನೆ ತರುವ

ಬರಿ ಸಿರಿವಂತರಿಗಷ್ಟೇ ಅಲ್ಲ

ಈ ಹೋಳಿಯ ಚಂದದ ಹಬ್ಬ

ಬಡವ ಬಲ್ಲಿದ, ಮೇಲು ಕೀಳು 

ಎಂದು ಭೇದವನು ಮಾಡದೆ ಎಲ್ಲರನು

ಬಂದೊಡನೆ ಅಪ್ಪಿ ಬಿಡುವುದೀ ಹಬ್ಬ

ಕುಣಿಯುತ , ನಲಿಯುತ , ಹಾಡುತ

ಮಾಡುವ ಎಲ್ಲರೂ ಹೋಳಿಯ ಹಬ್ಬ

ನೀಲಿ, ಕೆಂಪು, ಬಿಳಿ, ಗುಲಾಬಿ,

 ನೇರಳೆ,ಹಳದಿ,ಹಸಿರು,ಕಿತ್ತಳೆ

ಆಹಾ ಎಷ್ಟೊಂದು ಬಣ್ಣವಿದೆ

ರಂಗು ರಂಗಿನ ಬಣ್ಣದ ಓಕುಳಿಯನು

ಎರಚುತ, ಎಳೆಯರಿಗೂ ಹಚ್ಚುತ

ಮಾಡೋಣ ರಂಗಿನ ಹೋಳಿಯ ಹಬ್ಬ

ಬಿಡಿಸುತ ನಾನೆ ನಾನೆಂಬ ಅಹಂ ಗರ್ವ

ಬೆಳೆಸಿದೆ ಪ್ರೀತಿಯನೆಲ್ಲರಲ್ಲು ಹೋಳಿ ಮಹಾಪರ್ವ

ಸಿಹಿಯನು ಮಾಡಿ ಹಂಚುತಲಿ

ಎಲ್ಲರಿಗೂ ಸಿಹಿಯೂಟವ ಬಡಿಸುತಲಿ

ದೀಪವ ಹಚ್ಚುತಲಿ ಮಾಡುವ ಹೋಳಿಯ ಹಬ್ಬ

ಆಹಾ Rang barse# ( ರಂಗ್ ಬರಸೆ) 

ಓಹೋ Rang barse # ( ರಂಗ್ ಬರಸೆ)

ಎನ್ನುತ ಹಾಡುತಲಿ ಮಾಡುವ ಹೋಳಿ ಹಬ್ಬ

ಸ್ನೇಹಿತರೆಲ್ಲ ಬನ್ನಿರಿ ಆಚರಿಸುವ

ಎಲ್ಲರೂ ಸಡಗರದಿ ಆನಂದದಿ 

ವರ್ಣ ರಂಜಿತವಾದ ಹೋಳಿಯ ಹಬ್ಬ.


Rate this content
Log in