Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Kavya Poojary

Inspirational

2  

Kavya Poojary

Inspirational

ಸ್ನೇಹ

ಸ್ನೇಹ

1 min
148


ತದೇಕಚಿತ್ತದಿಂದ ನೋಡು ಬಾ 

ನಾನೊಂದು ಗುಟ್ಟಲ್ಲ

ನಾನು 

ಅರಿತರೆ ಮಾತ್ರ ತಿಳಿಯುವ ನೆಲೆಗಟ್ಟು 


ದೂರದಿ ಕಾಣುವ ಚಂದಿರ

ಬೆಳಕಲಿ ಕಾಣದು ಅವನ ಹಂದರ

ಮೆಚ್ಚದು ಸುಮ್ಮನೆ ಯಾರನು

ಮನಸು

ಅರಿತು ಬಂದ ಸ್ನೇಹದಲಿ 

ಕಾಣದಿರುವುದೆ ಮುನಿಸು


ಕಣ್ಣೆದುರಿದ್ದರು ಕವಲುದಾರಿ

ಸ್ಮೃತಿಪಟಲ ಮರೆಯದು 

ನಡೆದು ಬಂದ ದಾರಿ

ಸ್ನೇಹಕ್ಕಿಲ್ಲ ಕಟ್ಟುಪಾಡುಗಳ ಹಂಗು

ಕಲ್ಮಷವಿಲ್ಲದ ಮನದಲಿ ಮಾತ್ರ

ಮೂಡುವುದು ಪರಿಪಕ್ವ ಸ್ನೇಹ 


ಪರಿಶುದ್ಧ ಮನದಲಿ ಕಾಡದು 

ಅಪಕ್ವ ಭಾವ

ನಮ್ಮಂತರಾಳವ ನಾವರಿತಿದ್ದರೆ ಸಾಕು 

ನಗುತ ನಗಿಸುತ ಬಾಳಲು

ಇನ್ನೇನು ಬೇಕು


ನಿಜವಾಗಿಯೂ ನಾ

ಗುಟ್ಟಲ್ಲ

ಅರಿತವರಿಗೆ ಮಾತ್ರ ತಿಳಿಯುವ

ನೆಲೆಗಟ್ಟು


Rate this content
Log in

Similar kannada poem from Inspirational