ಪ್ರಥಮ ಪ್ರೇಮ
ಪ್ರಥಮ ಪ್ರೇಮ

1 min

2.8K
ಯಾವುದೋ ಲೋಕದಿಂದ ನನ್ನ ಭೂಲೋಕಕ್ಕೆ ಕರೆದಂತೆ ಭಾಸವಾಯಿತು...
ಅವಳ ಮುಖದ ನಿರ್ಮಲ ನಗೆ...
ಭವಿಷ್ಯದ ಸಕಲ ಸಂತಸಗಳ ನೀಡುವಂತೆ ತೋರಿತು
ಅವಳ ಆ ಮೊದಲ ನೋಟ ನನ್ನನ್ನೇ ನನಗೆ ಪರಿಚಯಿಸಿತು...|೧|
ಅವಳೇ ಪರಿಚಯಿಸಿದಳು ಈ ಜಗವನ್ನು.....
ಅವಳೇ ಪರಿಚಯಿಸಿದಳು ಜಗದ ಜನರನ್ನು...
ಅವರೊಂದಿಗಿನ ನನ್ನ ಬಂಧ - ಬೆಸುಗೆಯನ್ನು
ಕುಸಿದಾಗ ಕೈ ನೀಡಿ.....ಗೆದ್ದಾಗ ಬೆನ್ನು ತಟ್ಟಿ....
ನನ್ನ ಒಳಿತಿಗಾಗಿ ಜೀವವನ್ನೇ ತೇದಳು ನನ್ನವಳು.....|೨|
ಪ್ರಥಮ ಪ್ರೇಮದ ಮೂಲ ಹುಡುಕಲು...
ನಾನು ಮೊದಲ ಬಾರಿ ಕಣ್ಣು ತೆರೆದ ದಿನವೇ ನೆನಪಾಯಿತು......
ನನ್ನ ಮುಗ್ದ ಕಂಗಳು ಪಾವನವಾಯಿತು
ಅವಳ ನೋಟದೊಂದಿಗೆ ಬೆರೆಯಲು
ಅವಳ ಪ್ರೀತಿ ಹಾರೈಕೆಯೆದುರು
ಜಗದ ನೋವೆಲ್ಲಾ ಕಾಲಾಡಿಗೆ ಬೀಳಲಿದೆ ..|೩|
ಅವಳ ಕಾಲಿನ ಪಾದವೇ ಎನಗೆ ಸ್ವರ್ಗ
ಅವಳ ಮಡಿಲೆ ಎನಗೆ ದೇವಾಲಯ
ಅವಳ ಕರುಣೆ - ಪ್ರೀತಿಯೇ ನನ್ನ ಭಕ್ತಿ
ಅಮ್ಮಾ....
ನಿನ್ನ ಆಶೀರ್ವಾದವೇ ಇರಲು ಇನ್ನೇನು ಬೇಕೆನಗೆ.....|೪|