Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Ramamurthy Somanahalli

Romance Classics Others

3  

Ramamurthy Somanahalli

Romance Classics Others

ನಗುತ ನಗಿಸಿ ಮುದ ನೀಡಬಾರದೇ ಸಖಿ

ನಗುತ ನಗಿಸಿ ಮುದ ನೀಡಬಾರದೇ ಸಖಿ

1 min
204


ನಗುತ ನಗಿಸಿ ಮುದ ನೀಡಬಾರದೇ ಸಖಿ

ಮನದ ದುಗುಡವ ದೂರಾಗಿಸು ಚಂದ್ರಮುಖಿ ||ಪ||


ಮನದಲಿ ತುಂಬಿ ಕಾರ್ಮೋಡವ

ಎದೆಯಲಿ ಹುದುಗಿಸಿ ದುಗುಡವ

ಮುನಿದು ನೀ ದೂರಾದರೆ ಗೆಳತಿ

ಹೃದಯ ವೀಣೆ ನುಡಿವುದೇ ಪ್ರೇಮಗೀತೆ ||೧||


ಕನವರಿಸಿ ಕಾದಿಹೆನು ಹೊಸಬಾಳ ಹೊಸಿಲಲಿ

ನಿನ್ನೊಲವನರಸಿ ಹೊಂಬಣ್ಣದ ಹಾಸಿನಲಿ 

ಅಧರಾಮೃತ ಹರಿಸಿ ವಿರಹಾಗ್ನಿಯನು ತಣಿಸು

ಬರಿದಾದ ಬಾಳಿಗೆ ಅನುರಾಗದ ಹೊನಲು ಹರಿಸು ||೨||


ನಗುವುದೇ ಪುಷ್ಪವದು ಮುಡಿಯನೇರದೆ

ತೊರೆವುದೇ ವಸಂತವ ಕೋಗಿಲೆಯದು ಹಾಡದೆ

ಸುಖಿಸುವುದೇ ಗಿರಿನವಿಲು ತಾ ನಲಿದು ನರ್ತಿಸದೇ

ಅರಳುವುದೇ ಎನ್ನೀ ಹೃತ್ಕಮಲ ಮುನಿಸ ನೀ ತೊರೆಯದೇ ||೩||


Rate this content
Log in