Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra
Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra

Vijaya Bharathi

Abstract Classics Others

2  

Vijaya Bharathi

Abstract Classics Others

ಮೂಕಯಾತ್ರೆ

ಮೂಕಯಾತ್ರೆ

1 min 109 1 min 109

ಇರುವ ದೇಹವ ತೊರೆದು

ಮತ್ತೊಂದು ದೇಹವನ್ನರಸುತ

ನಡೆವ ಆತ್ಮ ನ‌ ನಿರ್ಗಮನ

ಆಗುವುದು ಜೀವಿಯ ಮರಣ

ದೇಹ ಜಡವಾದ ಮರುಗಳಗೆಯೇ

ಬಂಧು ಬಾಂಧವರ ಜನಜಾತ್ರೆ

ನೋವು ರೋದನಗಳ ಮೂಕ ಯಾತ್ರೆ

ಮುಗಿಸಿ ಸಂಸಾರ ಸಂತೆ ವ್ಯಾಪಾರ

ತೊರೆದು ನಾನು ನನ್ನದೆಂಬ ಮಮಕಾರ

ಹೊರಡುವುದು ಏಕಾಂಗಿಯಾಗಿ ಆತ್ಮ

ಸುತ್ತಲೂ ಜನರಿದ್ದರೂ

ನೋಡಲಾಗದ ಕಣ್ಣುಗಳು

ರಕುತ ಸಂಬಂಧದ ರೋದನವ

ಕೇಳಲಾಗದ ಕಿವಿಗಳು

ಪರಿಸರದಿ ಗಾಳಿಯಡರಿದ್ದರೂ

ಎಳೆದು ಕೊಳ್ಳಲಾಗದ ನಾಸಿಕ

ನಾನು ನನ್ನದೆನ್ನುತ್ತಿದ್ದ ಬಾಯಿ

ಮಾತನಾಡಲಾಗದೆ ಮೂಕ

ಪಂಚಪ್ರಾಣಗಳಿಲ್ಲದ ಜಡದೇಹವ

ಪಂಚಭೂತಗಳಲ್ಲಿ ಸೇರಿಸಲು

ನಡೆಯುವುದು ರಥಯಾತ್ರೆ

ಅದೇ ದೇಹದ ಅಂತಿಮ ಯಾತ್ರೆ

ಆತ್ಮದ ಮುಂದಿನ ಯಾತ್ರೆ

ಅದೊಂದು ಮೂಕಯಾತ್ರೆ

Rate this content
Log in

More kannada poem from Vijaya Bharathi

Similar kannada poem from Abstract