ಮೂಡದ ಕವಿತೆ
ಮೂಡದ ಕವಿತೆ




ಕವಿತೆ ಬರೆಯಲು ಕೂತೆ
ಪದಗಳು ಸಿಗದೆ ಸೋತೆ
ಮೇಲೆ ಕೆಳಗೆ ನೋಡಿದೆ
ತಲೆಯಲ್ಲೇನೂ ಓಡದೆ
ಚರಮ ಗೀತೆ ಹಾಡಿದೆ
ಕವಿಯಾಗುವಾಸೆ ಬಿಟ್ಟು
ಎರಡುದಿನ ತಲೆ ಕೆಟ್ಟು
ಗೀಚಿದ ಹಾಳೆಗಳ ಸುಟ್ಟು
ಬೇರೆಕಡೆ ಮನಸನಿಟ್ಟು
ಸುತ್ತಾಡಿದೆ ಮನೆ ಬಿಟ್ಟು
ಕವಿಯಾಗದವನ ಗುಟ್ಟು
ಕವಿತೆ ಬರೆಯಲು ಕೂತೆ
ಪದಗಳು ಸಿಗದೆ ಸೋತೆ
ಮೇಲೆ ಕೆಳಗೆ ನೋಡಿದೆ
ತಲೆಯಲ್ಲೇನೂ ಓಡದೆ
ಚರಮ ಗೀತೆ ಹಾಡಿದೆ
ಕವಿಯಾಗುವಾಸೆ ಬಿಟ್ಟು
ಎರಡುದಿನ ತಲೆ ಕೆಟ್ಟು
ಗೀಚಿದ ಹಾಳೆಗಳ ಸುಟ್ಟು
ಬೇರೆಕಡೆ ಮನಸನಿಟ್ಟು
ಸುತ್ತಾಡಿದೆ ಮನೆ ಬಿಟ್ಟು
ಕವಿಯಾಗದವನ ಗುಟ್ಟು