Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಮಾಯದ ಮಂಜಿನೊಳಗೆ

ಮಾಯದ ಮಂಜಿನೊಳಗೆ

1 min
297



ಮುಗಿಲ ಮುಟ್ಟುವ ಪರ್ವತಗಳ 

ಮಂಜಿನೊಳಗೆ ಮಾಯೆ 

ಮುಸುಕು ಮುಸುಕಿನೊಳಗೂ 

ಬೇಲಿಯಂಚಿನಲಿ ಅರಳಿದ 

ಪುಟ್ಟ ಹೂವಿನ ಥ್ರಿಲ್ 

ಆಹಾ ....ಅದರ ಲಕಲಕ ನಗು 

ಆದರೆ , ಮನ ಮಾರು ಹೋಯಿತೋ 

ಇಲ್ಲ , ಮೋಹ ಪರವಶವಾಯಿತೋ 

ತಿಳಿಯದ ಅತಂತ್ರದಲ್ಲಿ 

ಬೀಸಿಬಂದ ಗಾಳಿಗೆ ಹಾರಿದ 

ನಿನ್ನ ಸೆರಗು ಅಂಚಿನ ನೆನಪುಗಳು 

ಮಾಯದ ಮಂಜಿನೊಳಗೆ ಅಪ್ಸರೆಯಂತಾಗಿ 

ಕೆನ್ನೆಯ ಸವರಿದವು 

ತಂಗಾಳಿ ಕೊಂಚ ಸ್ತಬ್ಧವಾಗಿತ್ತು 

ಕಾಲ ಯಾರ ಸುಳಿವಿಲ್ಲದೆ 

ಎದೆಯ ಕುಲುಮೆಯಲ್ಲಿ ಬೆಂಕಿ ಹಚ್ಚಿತ್ತು

ಜೀವ ಕಾದು ಕೆಂಪಗಾಗಿತ್ತು 

ನನ್ನೆದೆಯ ಬದಿಯ ನದಿಯಲ್ಲಿ ತೇಲುವಾಸೆ

ಆ ಪುಟ್ಟ ಹೂವು ...

ಆ ಮಂಜಿನೊಳಗೆ ನೇಯ್ದ 

ಜೇಡನ ಬಲೆಯ ಮೇಲೆ ಮುತ್ತಿನ ಹನಿಗಳು 

ಅಯ್ಯೋ ಇದೇನು ? 

ಗಾಳಿಪಟದಂತೆ ಹಾರುತ್ತಿದೆಯಲ್ಲ 

ಪುಟ್ಟ ಪುಟ್ಟ ಎರಡು ರೆಕ್ಕೆಗಳು 

ಅರಮನೆಯಂಥ ಸೆರೆಮನೆಯ 

ಜೇಡನ ಬಲೆಮೇಲೆ ಮುತ್ತಿನ ಹನಿಗಳು 

ಕ್ಷಣ ಮಿಂಚಿದ ಸೂರ್ಯಕಿರಣ 

ಕ್ಷಣ ಕ್ಷಣವೂ ಆತ್ಮದ ನಂಟಿನ 

ರೆಕ್ಕೆಗಳು ಗಾಳಿಪಟದಂತೆ ಆ ಪುಟ್ಟ ಜೀವ 

ಮಾಯದ ಮಂಜಿನೊಳಗೆ ಹಾರುತಿದೆ ........


 


Rate this content
Log in