ಜೀವನ ನಾಟಕ
ಜೀವನ ನಾಟಕ
ಆ ದೇವಾಧಿ ದೇವನಿಗೆ
ಈ ಜಗವೇ ನಾಟಕ ರಂಗ
ಪರದೆಯ ಸರಿಸುತ್ತ ಆಗಾಗ
ಇಳಿಸಿ ಪಾತ್ರಧಾರಿಗಳ ಬೇಗ
ರಂಗಭೂಮಿಯ ವೇದಿಕೆಗೆ
ವೇದಿಕೆಯ ಪಾತ್ರಧಾರಿ
ಸೂತ್ರವ ಹಿಡಿದ ಮುರಾರಿ
ಆಟ ಆಡಿಸುವ ಸೂತ್ರ ಧಾರಿ
ಆಟ ಮುಗಿಸಿದ ಪಾತ್ರಧಾರಿ
ನಿಲ್ಲಲಾಗದು ವೇದಿಕೆಯೇರಿ
ಅಂಕದ ಪರದೆ ಸರಿದಾಗ
ಕೆಳಗಿಳಿಯ ಬೇಕು ಆಗ
ಸರಿಯ ಬೇಕು ತೆರೆಯ ಮರೆಗೆ
ಇದೇ ಸೃಷ್ಟಿ ನಿಯತಿ ದೇವಗೆ
ಇದರಧೀನ ಬದುಕು ಮನುಜಗೆ