ಬಣ್ಣನೆ
ಬಣ್ಣನೆ
ಮುಸ್ಸಂಜೆ ಹೊತ್ತಲ್ಲಿ ಶಶಿಯ ಆಗಮನ
ನಡುರಾತ್ರಿಯಲಿ ಚುಕ್ಕಿ ತಾರೆಗಳೇ ಆಭರಣ
ನನ್ನೀ ಹೃದಯದಲಿ ಸ್ನೇಹದ ಸಮ್ಮಿಲನ
ಅರಿವಿಲ್ಲ ಯಾಕಾಗಿದೆ ಈ ಅನುಭವ
ಏತಕೆ ನನ್ನೀ ಮನದಲಿ ಕಲರವ
ನೋಡು ಬಾ ನನ್ನ ಕಲ್ಪನೆಯ
ಕೇಳು ಬಾ ಈ ನನ್ನ ಬಣ್ಣನೆಯ!!
ನೀಲ ಗಗನದಲಿ ನೀ ನಡೆದಾಡುವ ಹಾಗೆ
ಮಳೆ ಹನಿಯ ಮುತ್ತುಗಳಾಗಿ ಬಿದ್ದ ಹಾಗೆ
ಯಾಕೋ ಏನೋ ಮನವು ನಗುತಿದೆ
ಕಾರಣವೇನಿಹುದು ತಿಳಿದಿಲ್ಲ ಎನಗೆ
ಏನಾಗಿದೆ ಯಾಕಾಗಿದೆ ತಿಳಿದಿಲ್ಲ ನನಗೆ
ನೋಡು ಬಾ ನನ್ನ ಕಲ್ಪನೆಯ
ಕೇಳು ಬಾ ಈ ನನ್ನ ಬಣ್ಣನೆಯ!!
ನಗುವ ಸುಮವ ಮರೆತಿರುವೆ
ನಲಿವ ಸುಮದಲಿ ನಿನ್ನ ನಾ ಕಾಣುವೆ
ಏಕೆಂದರೆ ನೀ ನನ್ನವಳೇ
ಹರಿಸುವೆ ಪ್ರೀತಿಯ ಕಡಲಾಗಿ
ನೋಡು ಬಾ ನನ್ನ ಕಲ್ಪನೆಯ
ಕೇಳು ಬಾ ಈ ನನ್ನ ಬಣ್ಣನೆಯ!!
✍️ ಪುಷ್ಪ ಪ್ರಸಾದ್